ಸುದ್ದಿಮೂಲ ವಾರ್ತೆ ಕೊಪ್ಪಳ, ಜ.18:
ದಕ್ಷಿಣ ಭಾರತದ ಕುಂಭಮೇಳ ಎಂದು ಹೆಸರಾದ ಜಾತ್ರೆೆ.ಆ ಜಾತ್ರೆೆಯ ರಥೋತ್ಸವ ನೋಡಲು ಲಕ್ಷ ಲಕ್ಷ ಜನ ಸೇರಿರ್ತಾರೆ.ಆ ಜಾತ್ರೆೆಯಲ್ಲಿ ರಥೋತ್ಸವ ನೊಡೋದೆ ಒಂದು ಚೆಂದ.ಆ ಜಾತ್ರೆೆಯ ಇನ್ನೊೊಂದು ವಿಶೇಷ ಅಂದ್ರೆೆ ದಾಸೋಹ. ಜಾತ್ರೆೆಯಲ್ಲಿ ನಡೆಯೋ ಮಾಹಾದಾಸೋಹಕ್ಕೆೆ ತನ್ನದೇ ಆದ ವೈಶಿಷ್ಟ್ಯವಿದೆ.ಈ ಬಾರಿ ದಾಸೋಹ ದಾಖಲೆ ಬರೆದಿದೆ.ಒಂದೇ ಜಾತ್ರೆೆಯಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ಭಕ್ತರು ದಾಸೋಹದಲ್ಲಿ ಪ್ರಸಾದ ಸೇವನೆ ಮಾಡಿದ್ದಾಾರೆ.ಇಂದು ಆ ಜಾತ್ರೆೆಯ ದಾಸೋಹಕ್ಕೆೆ ಕೊನೆ ದಿನ,ಕೊನೆಯ ದಿನದಿಂದ ಭಕ್ತರಿಗೆ ಸಿಕ್ಕಿಿದ್ದು ಗೋದಿ ಹುಗ್ಗಿಿ.ಕೊನೆಯ ದಿನದ ದಾಸೋಹಕ್ಕೆೆ ಅಲ್ಲಿ ಸಿದ್ದವಾಗಿದ್ದು ಬರೋಬ್ಬರಿ 85 ಕ್ವಿಿಂಟಾಲ್ ಗೋದಿ ಹುಗ್ಗಿಿ ಉಂಡರು.
ಗವಿಮಠದ ಜಾತ್ರೆೆಯ ಕೊನೆಯ ದಿನವಾದ ಇಂದು ಸುಮಾರು 8 ಕೊಪ್ಪರಕಿಯಲ್ಲಿ ಗೋದಿ ಹುಗ್ಗಿಿ ಸಿದ್ದವಾಗಿದೆ. ಇಂದು ದಾಸೋಹದಲ್ಲಿ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದರು. ಕೊಪ್ಪಳದ ಗವಿ ಮಠ ಜಾತ್ರೆೆಗೆ ಮತ್ತು ಮಾಹಾದಾಸೋಹಕ್ಕೂ ಇಂದು ಕೊನೆಯ ದಿನ..ಗವಿ ಮಠದ ರಥೋತ್ಸವ ಹಿನ್ನಲೆ ಈ ಬಾರಿ 18 ದಿನಗಳ ಕಾಲ ಗವಿ ಮಠದಲ್ಲಿ ದಾಸೋಹವಿತ್ತು.ಈ ಬಾರಿಯ ದಾಸೋಹ ದಾಖಲೆ ಬರೆದಿದೆ.
ಗವಿ ಮಠ ಅಂದ್ರೆೆ ಅದು ಅನ್ನ ಅಕ್ಷರ ಆಧ್ಯಾಾತ್ಮಕ್ಕೆೆ ಹೆಸರಾಗಿದೆ.ಗವಿ ಮಠದ ಜಾತ್ರೆೆ ಅಂದ್ರೆೆ ಅಲ್ಲಿ ನಡೆಯೋ ದಾಸೋಹ..ಈ ಬಾರಿ ದಾಸೋಹದ ಕೊನೆಯ ದಿನವಾದ ಇಂದು ಗವಿ ಮಠ ಬಂದ ಬಕ್ತರಿಗೆ ಗೋದಿ ಹುಗ್ಗಿಿಯನ್ನ ಪ್ರಸಾದ ರೂಪದಲ್ಲಿ ನೀಡಲಾಗಿದೆ.ಅದು ಬರೋಬ್ಬರಿ 85 ಕ್ವಿಿಂಟಾಲ್..ನಿನ್ನೆೆ ಮದ್ಯರಾತ್ರಿಿಯಿಂದಲೇ ಗೋಧಿ ಹುಗ್ಗಿಿ ತಯಾರಿಸಲಾಗಿದೆ.ಸುಮಾರು 8 ಕೊಪ್ಪರಕೆಯಲ್ಲಿ ಗೋಧಿ ಹುಗ್ಗಿಿ ರೆಡಿ ಮಾಡಲಾಗಿದೆ, 50 ಕ್ವಿಿಂಟಾಲ್ ಬೆಲ್ಲ,25 ಕ್ವಿಿಂಟಾಲ್ ಗೋಧಿ,ದ್ರಾಾಕ್ಷಿ,ಗೋಡಂಬಿ,ಕೊಬ್ಬರಿ ಬಳಸಿ ಗೋದಿ ಹುಗ್ಗಿಿಯನ್ನು ತಯಾರಿಸಲಾಗಿದೆ.ನೂರಾರು ಬಾಣಸಿಗರು ಗೋದಿ ಹುಗ್ಗಿಿಯನ್ನು ತಯಾರಿಸಿದ್ದಾಾರೆ.
ಇಂದು ಆಮವಾಸ್ಯೆೆಯಾದ ಹಿನ್ನಲೆ ಮಠಕ್ಕೆೆ ಅಪಾರ ಪ್ರಮಾಣದ ಭಕ್ತರು ಬಂದಿದ್ರು,ಬಂದ ಭಕ್ತರಿಗೆಲ್ಲ ಗೋದಿ ಹುಗ್ಗಿಿ ನೀಡಲಾಗ್ತಿಿದೆ.ಈಗಾಗಲೇ 85 ಕ್ವಿಿಂಟಾಲ್ ಗೋದಿ ಹುಗ್ಗಿಿ ತಯಾರಿಸಲಾಗಿತ್ತು ಎಂದು ದಾಸೋಹದ ಉಸ್ತುವಾರಿ ವಹಿಸಿರುವ ರಾಮನಗೌಡ ಹೇಳಿದರು.
ಈ ಬಾರಿ ಕೊಪ್ಪಳ ಗವಿ ಮಠದಲ್ಲಿ ಜಾತ್ರೆೆಗೂ ಮೊದಲೇ ಐದು ದಿನ ದಾಸೋಹ ಆರಂಭವಾಗಿತ್ತು.ಜನವರಿ ಐದರಂದು ರಥೋತ್ಸವ ಇದ್ದರೆ ಒಂದನೇ ತಾರೀಖಿನಂದು ದಾಸೋಹಕ್ಕೆೆ ಚಾಲನೆ ನೀಡಲಾಗಿತ್ತು.ಈ ಬಾರಿ ದಾಸೋಹದಲ್ಲಿ ಅನೇಕ ಸಿಹಿ ಖಾದ್ಯಗಳನ್ನ ಭಕ್ತರು ನೀಡಿದ್ದರು.ಅದರಲ್ಲಿ ಪ್ರಮುಖವಾಗಿ ಮೈಸೂರ್ ಪಾಕ್,ಜಿಲೇಬಿ,ರವೆ ಉಂಡಿ,ಶೇಂಗಾ ಹೋಳಿಗೆ,ಬೇಸನ್ ಉಂಡಿ,ಹೀಗೆ ನಾನಾ ತರಹದ ಸಿಹಿ ಖಾದ್ಯಗಳನ್ನ ನೀಡಿದ್ರು.ಇಂದು ಗವಿಮಠದಿಂದ ವಿಶೇಷವಾಗಿ ಭಕ್ತರಿಗೆ ಗೋದಿ ಹುಗ್ಗಿಿಯನ್ನ ನೀಡಲಾಗ್ತಿಿದೆ,ಸುತ್ತ ಮುತ್ತಲಿನ ಜಿಲ್ಲೆೆಗಳಿಂದ ಬಂದ ಭಕ್ತರು ಗವಿ ಮಠದ ದಾಸೋಹ ಭವನದಲ್ಲಿ ಗೋದಿ ಹುಗ್ಗಿಿ ರುಚಿ ಸವಿದರು.
ದಾಖಲೆ ಬರೆದ ದಾಸೋಹ : ಇನ್ನು ಈ ಭಾರಿ ಗವಿ ಮಠದ ದಾಸೋಹ ದಾಖಲೆ ಬರೆದಿದೆ. ಈ ಭಾರಿ ದಾಸೋಹದಲ್ಲಿ ಸರಿ ಸುಮಾರು 20 ರಿಂದ 30 ಲಕ್ಷ ಭಕ್ತರು ಪ್ರಸಾದ ಸೇವನೆ ಮಾಡಿದ್ದಾಾರಂತೆ.ಇನ್ನು ಗವಿ ಮಠಕ್ಕೆೆ 20 ಲಕ್ಷಕ್ಕೂ ಅಧಿಕ ರೊಟ್ಟಿಿಗಳನ್ನ ಭಕ್ತರು ತಂದು ಕೊಟ್ಟಿಿದ್ದಾಾರೆ,ಇದುವರೆಗೂ ದಾಸೋಹದಲ್ಲಿ 1500 ಕ್ವಿಿಂಟಾಲ್ ಅಕ್ಕಿಿ ಬಳಕೆಯಾಗಿದೆಯಂತೆ,ದಾಸೋಹದಲ್ಲಿ ಊಟ ಮಾಡಿದ ಭಕ್ತರು ನಾವು ಇಲ್ಲಿ ಹುಟ್ಟಿಿದ್ದೆೆ ಪುಣ್ಯ ಎಂದು ಭಕ್ತರು ಹೇಳಿದರು.
ಒಟ್ಟಾಾರೆ ಕೊಪ್ಪಳದ ಗವಿಮಠದ ದಾಸೋಹಕ್ಕೆೆ ಇಂದು ವಿದ್ಯುಕ್ತವಾಗಿ ತೆರೆ ಬೀಳಲಿದೆ.ನಿರಂತರ 18 ದಿನಗಳಿಂದ ನಡೆದ ದಾಸೋಹ ಹೊಸ ದಾಖಲೆ ಬರೆದಿದೆ.ವರ್ಷದಿಂದ ವರ್ಷಕ್ಕೆೆ ಗವಿ ಮಠದ ಭಕ್ತರ ಸಂಖ್ಯೆೆ ಹೆಚ್ಚಾಾಗತಿದ್ದು,ಯಾವುದೇ ಸಣ್ಣ ಪುಟ್ಟ ಲೋಪವಿಲ್ಲದೆ ಇಲ್ಲಿನ ದಾಸೋಹ ನಡಿತಿರೋದು ಗವಿಸಿದ್ದನ ಶಕ್ತಿಿಗೆ ಸಾಕ್ಷಿಯಾಗಿದೆ.
ಗವಿಮಠದ ಜಾತ್ರೆಗೆ ಇಂದು ತೆರೆ ಹುಗ್ಗಿ ಉಂಡ ಲಕ್ಷಾಾಂತರ ಭಕ್ತರು

