ಸುದ್ದಿಮೂಲ ವಾರ್ತೆ ಬೀದರ್, ಜ.18:
ಶ್ರೀ ನಾನಕ ಝಿರಾ ಸಾಹೇಬ್ ೌಂಡೇಷನ್ ವತಿಯಿಂದ ಗುರು ನಾನಕ ಶಿಕ್ಷಣ ಸಂಸ್ಥೆೆಯ ಸಂಸ್ಥಾಾಪಕ ಅಧ್ಯಕ್ಷ ದಿ.ಸರ್ದಾರ್ ಜೋಗಾಸಿಂಗ್ಜಿಿ ಅವರ 93 ನೇ ಜನ್ಮದಿನಾಚರಣೆ ಅಂಗವಾಗಿ ಗುರು ನಾನಕ ದೇವ್ ಇಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ ಭಾನುವಾರ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 9 ಜನರಿಗೆ ಸರ್ದಾರ್ ಜೋಗಾಸಿಂಗ್ಜಿಿ ಕಲ್ಯಾಾಣ ಕರ್ನಾಟಕ ಪ್ರಶಸ್ತಿಿ 2026 ಪ್ರದಾನ ಮಾಡಲಾಯಿತು.
ಪೌರಾಡಳಿತ ಸಚಿವ ರಹೀಮ್ ಖಾನ್ ಅವರು ಮಾತನಾಡಿ, ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿಿ ನೀಡುತ್ತಿಿರುವುದು ಒಳ್ಳೆೆಯ ಸಂಕೇತವಾವಾಗಿದೆ, ಈ ಸಂಸ್ಥೆೆಯಿಂದ ಪ್ರಶಸ್ತಿಿ ಕೊಡುವ ಪದ್ಧತಿಯನ್ನು ಪ್ರಶಂಸಿಸುತ್ತ, ನೇಮಕಾತಿ ಮಾಡಲು ಬಹಳ ಉತ್ತಮವಾದ ಮಾರ್ಗಸೂಚಿಯನ್ನು ಪಾಲಿಸುತ್ತಾಾರೆ ಎಂದು ನುಡಿದರು.
ವಿಧಾನ ಪರಿಷತ್ತಿಿನ ಸದಸ್ಯ ಚಂದ್ರಶೇಖರ ಬಿ.ಪಾಟೀಲ್ ಅವರು ಮಾತನಾಡಿದರು.
ಗುರು ನಾನಕ ಶಿಕ್ಷಣ ಸಂಸ್ಥೆೆಯ ಉಪಾಧ್ಯಕ್ಷೆ ಡಾ.ರೇಷ್ಮಾಾ ಕೌರ್ ಸ್ವಾಾಗತ ಕೋರಿ ಮಾತನಾಡಿ, ದುರ್ಬಲ ಜನರ ಸಹಾಯವೇ ನಿಜವಾದ ಸೇವೆಯಾಗಿದೆ. ನಿಜವಾದ ನಾಯಕ ಪದವಿ ಹೊಂದಿದವನು ಅಲ್ಲ. ಇದಕ್ಕೆೆ ಮೀರಿ ಪ್ರಮಾಣಿಕತೆಯಿಂದ ಸಮಾಜಕ್ಕೆೆ ದಾರಿತೋರಿಸುವವನೇ ನಿಜವಾದ ನಾಯಕ ಎಂದು ಹೇಳಿದರು.
ಪ್ರಶಸ್ತಿಿ ಪಡೆದ ಸಾಧಕರ ವಿವರ :
ರಾಜ್ಯ ಸಚಿವ ರೈಲ್ವೆೆ ಮತ್ತು ಜಲಶಕ್ತಿಿ ಭಾರತ ಸರಕಾರದ ವಿ.ಸೋಮಣ್ಣ ಅವರಿಗೆ ರಾಷ್ಟ್ರೀಥಯ ಲೋಕಸೇವಾ ಮಹಾ ರತ್ನ ಪ್ರಶಸ್ತಿಿ,, ಕನ್ನಡ ಚಲನಚಿತ್ರ ನಟ ಡಾ.ಶಿವ ರಾಜ್ಕುಮಾರ ಅವರಿಗೆ ಅಭಿನಯ ಸಾರ್ವಭೌಮ ಪ್ರಶಸ್ತಿಿ, ಅಖಿಲ ಭಾರತ ತಾಂತ್ರಿಿಕ ಶಿಕ್ಷಣ ಮಂಡಳಿ ನವದೆಹಲಿ ಮಾಜಿ ಅಧ್ಯಕ್ಷ ಡಾ.ಟಿ.ಜಿ.ಸೀತಾರಾಮ್ ಅವರಿಗೆ ರಾಷ್ಟ್ರೀಥಯ ಶಿಕ್ಷಣ ಕೃಪಾಚಾರ್ಯ ಪ್ರಶಸ್ತಿಿ,
ಅದಮ್ಯ ಚೇತನ ೌಂಡೇಶನ್ ಬೆಂಗಳೂರು, ಡಾ.ತೇಜಸ್ವಿಿನಿ ಅನಂತ್ ಕುಮಾರ ಅವರಿಗೆ ಜೀವನ ಸೇವಾ ಮಹಾ ರತ್ನ ಪ್ರಶಸ್ತಿಿ, ಹೆಚ್ಚುವರಿ ಅಡ್ವೊೊಕೇಟ್ ಜನರಲ್ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠ ಕಲಬುರಗಿ ಡಾ. ಅರ್ಚನಾ ಪ್ರದೀಪ ತಿವಾರಿ ಅವರಿಗೆ ನ್ಯಾಾಯ ಸೇವಾ ವಿಶಿಷ್ಟ ರತ್ನ ಪ್ರಶಸ್ತಿಿ,
ಪ್ರೀಮಿಯರ್ ಎನಜಿರ್ ಲಿಮಿಟೆಡ್ ಅಧ್ಯಕ್ಷ ಹೈದ್ರಾಾಬಾದ್ನ ಸುರೇದರ್ ಪಾಲ್ ಸಿಂಗ್ ಅವರಿಗೆ ರಾಷ್ಟ್ರೀಥಯ ಉದ್ಯೋೋಗ ರತ್ನ ಪ್ರಶಸ್ತಿಿ, ಆಕ್ಸೆೆಂಚರ್ ವ್ಯವಸ್ಥಾಾಪಕ ನಿರ್ದೇಶಕ ಸಂದೀಪ ಸಿಂಗ್ ಭಾಟಿಯಾ ಅವರಿಗೆ ಜಾಗತಿಕ ಹಳೆಯ ವಿದ್ಯಾಾರ್ಥಿಗಳ ನಾಯಕತ್ವ ಪ್ರಶಸ್ತಿಿ.
ಹೆಸರಾಂತ ಗುರ್ಬಾನಿ ಅನುವಾದಕ ಮತ್ತು ಕನ್ನಡ ಸಾಹಿತ್ಯ ವಿದ್ವಾಾಂಸ ಚಂಡೀಗಢದ ಪುಂಡಿತರಾವ್ ಧರೇನವರ್ ಅವರಿಗೆ ಗುರ್ಬಾನಿ-ಕನ್ನಡ ಭಾಷಾ ಸೇತು ಪ್ರಶಸ್ತಿಿ,
ಕೊಡಗು ವಿಶ್ವವಿದ್ಯಾಾಲಯದ ಉಪಕುಲಪತಿ ಡಾ. ಅಶೋಕ ಸಂಗಪ್ಪಾಾ ಆಲೂರಗೆ ಉನ್ನತ ಶಿಕ್ಷಣ ಮತ್ತು ಕೃಷಿ ದಾರ್ಶನಿಕ ಪ್ರಶಸ್ತಿಿ ನೀಡಲಾಗಿದೆ.
ಶ್ರೀ ನಾನಕ ಝಿರಾ ಸಾಹೇಬ್ ೌಂಡೆಷನ ಅಧ್ಯಕ್ಷ ಡಾ. ಎಸ್. ಬಲಬೀರ್ ಸಿಂಗ್ ಅವರು ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ತೀರ್ಪುಗಾರ ಸಿ.ಮನೋರ್ಹ, ಕಾರ್ಯದರ್ಶಿ ಸರದಾರ ನಾನಕ ಸಿಂಗ್, ಲೆ್ೈ ಟ್ರಸ್ಟಿಿ ಸರದಾರ ಪ್ರೀೀತಮ ಸಿಂಗ್, ಪ್ರಾಾಂಶುಪಾಲೆ ಡಾ. ವೀಣಾ ಎಸ್., ನಿದೇರ್ಶಕರುಗಳಾದ ಆರ್.ಡಿ.ಸಿಂಗ್, ಸರದಾರ ಪುನೀತ್ ಸಿಂಗ್ ಮತ್ತು ಸರದಾರ ಪವೀತ ಸಿಂಗ್ ಅವರು ಉಪಸ್ಥಿಿತರಿದ್ದರು.
9 ಸಾಧಕರಿಗೆ ಸರ್ದಾರ್ ಜೋಗಾ ಸಿಂಗ್ಜಿ ಕಲ್ಯಾಣ ಕರ್ನಾಟಕ ಪ್ರಶಸ್ತಿ ಪ್ರದಾನ

