ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಜ.18:
ಆಲ್ ಇಂಡಿಯಾ ಡೆಮಾಕ್ರೆೆಟಿಕ್ ಯೂತ್ ಆರ್ಗನೈಸೇಶನ್ (ಎಐಡಿವೈಓ)ನಿಂದ ಪಟ್ಟಣದ ಗಡಿಯಾರ ವೃತ್ತದಲ್ಲಿ ಖಾಲಿ ಹುದ್ದೆೆಗಳ ಭರ್ತಿ ಮಾಡುವಂತೆ ಸಹಿ ಸಂಗ್ರಹ ಅಭಿಯಾನ ನಡೆಯಿತು.
ಎಐಡಿವೈಓ ಸ್ಥಾಾಪನೆಯಾಗಿ 60 ವರ್ಷದ ತುಂಬಿದ್ದರಿಂದ ಯುವಜನ ಚಳುವಳಿಯನ್ನು ಬಲಿಷ್ಠಗೊಳಿಸುವ ದಿಕ್ಕಿಿನಲ್ಲಿ ಅಖಿಲ ಭಾರತ ಸಮಿತಿಯ ಕರೆ ಮೇರೆಗೆ ಈ ಸಹಿ ಸಂಗ್ರಹ ಅಭಿಯಾನ ಹಮ್ಮಿಿಕೊಳ್ಳಲಾಗಿದೆ. ಯುವಜನರು ಮತ್ತು ಸಾರ್ವಜನಿಕರಿಂದ ಸಂಗ್ರಹಿಸಿದ ಈ ಸಹಿಗಳನ್ನು ೆಬ್ರವರಿ 27ರಂದು ಬೆಂಗಳೂರಿನಲ್ಲಿ ಹಮ್ಮಿಿಕೊಂಡಿರುವ ಬೃಹತ್ ಯುವಜನ ಪ್ರತಿಭಟನಾ ಧರಣಿಯ ಸಂದರ್ಭದಲ್ಲಿ ಮುಖ್ಯಮಂತ್ರಿಿಗಳು ಮತ್ತು ರಾಜ್ಯಪಾಲರಿಗೆ ಸಲ್ಲಿಸಿ ಖಾಲಿ ಹುದ್ದೆೆಗಳ ಭರ್ತಿಗಾಗಿ ಆಗ್ರಹಿಸಲಾಗುವುದು ಎಂದು ಎಂದು ಎಐಡಿವೈಓ ಜಿಲ್ಲಾಾಧ್ಯಕ್ಷ ಚನ್ನಬಸವ ಜಾನೇಕಲ್ ಹೇಳಿದರು.
ಕೇಂದ್ರ ಸರ್ಕಾರದ 78 ಇಲಾಖೆಗಳಲ್ಲಿ ಖಾಲಿ ಇರುವ 9.79 ಲಕ್ಷ ಹುದ್ದೆೆಗಳನ್ನು ಹಾಗೂ ಲಕ್ಷ ರಾಜ್ಯದ 43 ಇಲಾಖೆಗಳಲ್ಲಿನ 2.85 ಲಕ್ಷ ಹುದ್ದೆೆಗಳನ್ನು ಭರ್ತಿ ಮಾಡಬೇಕು. ಎಲ್ಲಾಾ ನೇಮಕಾತಿಗಳ ವಯೋಮಿತಿಯನ್ನು ಕನಿಷ್ಠ ಐದು ವರ್ಷ ಹೆಚ್ಚಿಿಸಬೇಕು. ಎಲ್ಲಾಾ ನೇಮಕಾತಿ ಪ್ರಕ್ರಿಿಯೆಗಳನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಸಬೇಕು. ಎಲ್ಲಾಾ ರೀತಿಯ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆೆಗಳನ್ನು ಭರ್ತಿ ಮಾಡಬೇಕು ಇನ್ನು ಮುಂತಾದ ಹಕ್ಕೊೊತ್ತಾಾಯಗಳಿರುವ ಕರಪತ್ರ ಹಂಚಿ ಜಾಗೃತಿ ಮೂಡಿಸಿದರು.
ತಿರುಪತಿ ಗೋನವಾರ, ಬಾಲಾಜಿ ಸಿಂಗ್, ಚಂದ್ರಶೇಖರ ಸಾಹುಕಾರ್, ತಿಮ್ಮಣ್ಣ ಮುಂತಾದವರು ಲಿಂಗಸುಗೂರಿನ ನೂರಾರು ರೈತರು, ಯುವಜನರು, ನಾಗರಿಕರು ಸಹಿ ಬೆಂಬಲಿಸಿ ಭಾಗವಹಿಸಿದ್ದರು.
ಖಾಲಿ ಹುದ್ದೆಗಳ ಭರ್ತಿಗೆ ಎಐಡಿವೈಓ ಸಹಿ ಸಂಗ್ರಹ ಅಭಿಯಾನ

