ಸುದ್ದಿಮೂಲ ವಾರ್ತೆ ಮೈಸೂರು, ಜ.18:
ಬಳ್ಳಾಾರಿಯಲ್ಲಿ ಇತ್ತೀಚೆಗೆ ನಡೆದ ಗಲಾಟೆ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಕೇಳುವ ನೈತಿಕತೆ ಬಿಜೆಪಿಗೆ ಎಲ್ಲಿದೆ ? ನಾನು ಏಳೆಂಟು ಕೇಸ್ಗಳನ್ನು ಸಿಬಿಐ ಗೆ ಕೊಟ್ಟಿಿದ್ದೇನೆ. ಒಂದೇ ಒಂದು ಕೇಸ್ ಅನ್ನು ಬಿಜೆಪಿಯವರು ಸಿಬಿಐಗೆ ಕೊಟ್ಟಿಿದ್ದಾರಾ ಹೇಳಿ ? ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಾಳಿ ನಡೆಸಿದರು.
ಭಾನುವಾರ ಮೈಸೂರಿನ ಮಂಡಕಳ್ಳಿಿ ವಿಮಾನ ನಿಲ್ದಾಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಅವರು ಏನು ನಮಗೆ ಪಾಠ ಮಾಡುವುದು. ಜನಾರ್ಧನ ರೆಡ್ಡಿಿಯದ್ದು ಗೂಂಡಾ ಸಂಸ್ಕೃತಿ. ಜನಾರ್ಧನ ರೆಡ್ಡಿಿಗೆ ಯಾವ ಸಂಸ್ಕಾಾರಗಳು ಇಲ್ಲ. ಬಳ್ಳಾಾರಿಯನ್ನು ರಿಪಬ್ಲಿಿಕ್ ಆ್ ಬಳ್ಳಾಾರಿ ಮಾಡಿದ್ದೇ ಜನಾರ್ಧನ ರೆಡ್ಡಿಿ ಎಂದು ಹರಿಹಾಯ್ದರು.
ನಾನು ವಿರೋಧ ಪಕ್ಷದ ನಾಯಕನಾಗಿದ್ದೆ. ಆಗ ನಡೆದ ಲೋಕಸಭೆ ಚುನಾವಣಾ ಪ್ರಚಾರಕ್ಕೆೆ ನಾನು ಇಬ್ರಾಾಹಿಂ ಜೊತೆ ಬಳ್ಳಾಾರಿಗೆ ಹೋಗಿದ್ದಾಗ ನಮಗೆ ಪ್ರಚಾರಕ್ಕೆೆ ಕೂಡ ಜಾಗ ಕೊಡಲಿಲ್ಲ. ಕೊನೆಗೆ ನಾವು ಕುರುಬರ ದೇವಸ್ಥಾಾನದಲ್ಲಿ ನಿಂತು ಪ್ರಚಾರ ಮಾಡಿ ಬಂದಿದ್ದೆ. ಇಂತಹ ರೆಡ್ಡಿಿ ನಮಗೇನು ಪಾಠ ಮಾಡುತ್ತಾಾರೆ ಎಂದು ಟೀಕಿಸಿದರು.
ಬಳ್ಳಾಾರಿ ಪ್ರಕರಣದ ಬಗ್ಗೆೆ ಬಿಜೆಪಿ ಜನಾಂದೋಲನ ಮಾಡುವುದು ಅವರ ಪಕ್ಷಕ್ಕೆೆ ಸೇರಿದ ವಿಚಾರ. ವಿರೋಧ ಪಕ್ಷದಲ್ಲಿ ಇರುವಾಗ ಯಾವ ಆಂದೋಲನ, ಪ್ರತಿಭಟನೆಗಳನ್ನು ಮಾಡುತ್ತಾಾರೆ. ಅದಕ್ಕೆೆ ನಾವು ಉತ್ತರ ಕೊಡುತ್ತೇವೆ ಎಂದರು.
ಉಪ್ಪುು ತಿಂದವರು ನೀರು ಕುಡಿಯಲೇ ಬೇಕು : ಅಬಕಾರಿ ಡಿಸಿ ಮೇಲೆ ಲೋಕಾಯುಕ್ತ ದಾಳಿ ವಿಚಾರದ ಬಗ್ಗೆೆ ಪ್ರತಿಕ್ರಿಿಯಿಸಿದ ಅವರು, ಉಪ್ಪುು ತಿಂದವರು ನೀರು ಕುಡಿಯಲೇ ಬೇಕು. ನಾವು ಯಾರ ರಕ್ಷಣೆಯನ್ನು ಮಾಡುವುದಿಲ್ಲ. ಆಡಿಯೋದಲ್ಲಿ ಸಚಿವರ ಹೆಸರು ಬಂದಿರುವ ಬಗ್ಗೆೆ ನನಗೆ ಗೊತ್ತಿಿಲ್ಲ ಎಂದರು.
ಬಿಜೆಪಿ ಅವಧಿಯಲ್ಲಿ ಶೇ.40 ರಷ್ಟು ಭ್ರಷ್ಟಾಾಚಾರ ನಡೆಯುತ್ತಿಿದೆ ಎಂದು ಹೇಳಿದ್ದು ನಾನಲ್ಲ, ಗುತ್ತಿಿಗೆದಾರರು. ಅವರು ಏನು ನಮ್ಮ ಮೇಲೆ ಆರೋಪ ಮಾಡುವುದು. ಅದೆಲ್ಲಾ ಸುಳ್ಳಿಿನ ಕಂತೆ ಎಂದು ತಿರುಗೇಟು ನೀಡಿದರು.
ಅಧಿವೇಶನ ಕರೆಯುವ ಹಿಂದೆ ರಾಜಕೀಯ ಇಲ್ಲ :
ಹೊಸ ವರ್ಷದಲ್ಲಿ ಅಧಿವೇಶನ ಕರೆಯುವುದು ಸಂಪ್ರದಾಯ. ಅದರಂತೆ ವಿಶೇಷ ಅಧಿವೇಶನ ಕರೆಯಲಾಗುತ್ತಿಿದೆ. ಇದರಲ್ಲಿ ಯಾವ ರಾಜಕೀಯ ಉದ್ದೇಶ ಇಲ್ಲ.ಮನರೇಗಾ ಯೋಜನೆ ಬದಲಾವಣೆಯಿಂದ ಜನರಿಗೆ ಸಮಸ್ಯೆೆಯಾಗಿದೆ. ಈ ಬಗ್ಗೆೆ ವಿಶೇಷ ಅಧಿವೇಶನದಲ್ಲಿ ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ಮನರೇಗಾ ಯೋಜನೆ ಮತ್ತೆೆ ಪುನ್ಜಗಿ ಸ್ಥಾಾಪಿಸುವಂತೆ ಒತ್ತಾಾಯ ಮಾಡಲಾಗುತ್ತದೆ. ಯುಪಿಎ ಸರ್ಕಾರ ಇದ್ದಾಗ ಮನಮೋಹನ್ ಸಿಂಗ್ ಉದ್ಯೋೋಗ ಖಾತ್ರಿಿಗಾಗಿ ಈ ಯೋಜನೆ. ಜಾರಿ ಮಾಡಿದ್ದರು. ಅದನ್ನು ಹಾಳು ಮಾಡಿ ಜಿ ರಾಮ್ ಜೀ ಯೋಜನೆ ಮಾಡಲಾಗಿದೆ. ರಾಮ್ ಅಂದ್ರೆೆ ಆ ರಾಮ ಅಲ್ಲ ಎಂದು ಖಂಡಿಸಿದರು.

