ಸುದ್ದಿಮೂಲ ವಾರ್ತೆ ರಾಯಚೂರು, ಜ.18:
ಪುಸ್ತಕಗಳು ಸಂಪ್ರದಾಯ ಇದ್ದಂತೆ ಹಾಗಾಗಿ ಪುಸ್ತಕಗಳಿಂದ ಮಾತ್ರ ಮಕ್ಕಳಿಗೆ ಉತ್ತಮ ಸಂಸ್ಕಾಾರ ಮತ್ತು ಸಂಸ್ಕೃತಿ ಕಲಿಸಲು ಸಾಧ್ಯವಾಗುತ್ತದೆ ಎಂದು ರಾಯಚೂರು ವಿಶ್ವ ವಿದ್ಯಾಾಲಯದ ಕುಲಪತಿ ಪ್ರೊೊ.ಶಿವಾನಂದ ಕೆಳಗಿನಮನಿ ಹೇಳಿದರು.
ಅವರಿಂದು ನಗರದ ಪಂ. ಸಿದ್ದರಾಮ ಜಂಬಲದಿನ್ನಿಿ ರಂಗಮಂದಿರದ ಆವರಣದಲ್ಲಿ ಕಲಾ ಸಂಕುಲ ಸಂಸ್ಥೆೆ ಹಾಗೂ ಶ್ರೀ ಲಕ್ಷ್ಮೀನರಸಿಂಹ ಸ್ವಾಾಮಿ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಿಕೊಂಡಿದ್ದ ಪುಸ್ತಕ ಸಂತೆಗೆ ಚಾಲನೆ ನೀಡಿ ಮಾತನಾಡಿದರು. ಆಧುನಿಕ ಕಾಲಘಟ್ಟದಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದಾಾಗಿದ್ದು ಬಿಡುವಿಲ್ಲದ ಬದುಕಲ್ಲಿ ಪುಸ್ತಕ ಓದು ಆಪ್ತ ಗೆಳೆಯನ ಅನುಭವ ನೀಡುತ್ತದೆ ಎಂದರು.
ಪುಸ್ತಕ ಭಂಡಾರಗಳು ಮನುಷ್ಯನ ಜ್ಞಾನ ವಿಕಸನಗೊಳಿಸುವ ಜೊತೆಗೆ ಆಯಾ ಕಾಲದ ಚರಿತ್ರೆೆ, ಸಾಮಾಜಿಕ, ಸಾಂಸ್ಕೃತಿಕ ಪರಂಪರೆಯ ಪರಿಚಯ ಮಾಡಿಕೊಡುತ್ತದೆ. ತಲೆಮಾರಿನಿಂದ ತಲೆಮಾರಿಗೆ ಇತಿಹಾಸ ಅರಿಯಲು ಅನುಕೂಲವಾಗಲಿದೆ ಎಂದರು.
ಹಿರಿಯರು ಹೇಳಿದಂತೆ ದೇಶ ಸುತ್ತು ಇಲ್ಲ ಕೋಶ ಓದು ಎಂಬ ಮಾತು ಈಗಲೂ ಪ್ರಸ್ತುತ. ಕುಳಿತಲ್ಲಿಯೆ ಜಗತ್ತಿಿನ ಎಲ್ಲಾಾ ವಿಷಯಗಳ ಪರಿಚಯ ಮಾಡುವ ಭಂಡಾರ ಪುಸ್ತಕಗಳೆ ಹಾಗಾಗಿ, ಜಗತ್ತಿಿನಲ್ಲಿ ಪುಸ್ತಕಗಳಿಲ್ಲದೆ ಹೋಗಿದ್ದರೆ ಎಲ್ಲರ ಬದುಕು ಕತ್ತಲಲ್ಲಿರುತ್ತಿಿತ್ತು ಜ್ಞಾನದ ದೀವಿಗೆ ಪೀಳಿಗೆಯಿಂದ ಪೀಳಿಗೆಗೆ ಹರಿದು ವಿಕಸನಗೊಳ್ಳುವಂತಾಗಿದೆ ಎಂದರು.
ಪುಸ್ತಕ ಸಂಸ್ಕೃತಿ ಉಳಿಸುವ ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಮಾರುತಿ ಬಡಿಗೇರ್ ಇಂತಹ ಹಿಂದುಳಿದ ಪ್ರದೇಶದಲ್ಲಿ ಪುಸ್ತಕ ಸಂತೆ ಆಯೋಜಿಸಿದ್ದು ಪುಸ್ತಕಗಳ ಮಹತ್ವ ಹೆಚ್ಚಿಿ ಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿಯೊಬ್ಬರ ಮನೆಯಲ್ಲಿ ಆಸ್ತಿಿಘಿ,ಶ್ರೀಮಂತಿಕೆಯ ಪರಿಕರಗಳು ಹಣ ಇದ್ದರೆ ಸಾಲದು ಪುಸ್ತಕಗಳು ಕಡ್ಡಾಾಯವಾಗಿ ಇರಬೇಕು ಅವುಗಳಿಂದ ಮಾತ್ರ ಸಂಸ್ಕೃತಿ ಪರಂಪರೆ ಪೋಷಿಸಲು ಸಾಧ್ಯ. ಪುಸ್ತಕ ಓದುವ ಹವ್ಯಾಾಸ ಬೆಳೆಸಿಕೊಂಡಿರುವ ವ್ಯಕ್ತಿಿ ಜ್ಞಾನ ಶಕ್ತಿಿ ಹೊಂದಿರುತ್ತಾಾನೆ ಎಂದರು.ಪುಸ್ತಕ ಸಂಸ್ಕೃತಿಯನ್ನು ಬೆಳೆಸುವುದು ನಮ್ಮೆೆಲ್ಲರ ಹೊಣೆ ಎಂದು ಎಲ್ಲರೂ ಭಾವಿಸಲು ಸಲಹೆ ನೀಡಿದರು.
ಆವರಣದಲ್ಲಿ ವಿವಿಧ ಪುಸ್ತಕಗಳ ಪ್ರಕಾಶಕರು, ಲೇಖಕರು ತಮ್ಮ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕೆೆ ಇರಿಸಲಾಗಿತ್ತು.
ಈ ಸಂದರ್ಭದಲ್ಲಿ ಸಾಹಿತಿಗಳಾದ ಅಯ್ಯಪ್ಪಯ್ಯ ಹುಡಾ, ಚಿದಾನಂದ ಸಾಲಿ, ಆಕಾಶವಾಣಿ ಕೇಂದ್ರದ ಮುಖ್ಯಸ್ಥ ವೆಂಕಟೇಶ ಬೇವಿನಬೆಂಚಿ, ಕಲಾ ಸಂಕುಲ ಸಂಸ್ಥೆೆ ಅಧ್ಯಕ್ಷೆೆ ರೇಖಾ ಬಡಿಗೇರ, ಕಾರ್ಯದರ್ಶಿ ಮಾರುತಿ ಬಡಿಗೇರ, ಟಿ ಜಾನ್ವೆಸ್ಲಿಿ ಸೇರಿ ಹಲವರಿದ್ದರು.
ಕಲಾ ಸಂಕುಲ ಸಂಸ್ಥೆಯಿಂದ ಪುಸ್ತಕ ಸಂತೆಗೆ ಚಾಲನೆ ಪುಸ್ತಕಗಳಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಕಲಿಕೆ ಸಾಧ್ಯ – ಪ್ರೊ.ಕೆಳಗಿನಮನಿ

