ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಜ.18:
ಪಟ್ಟಣದ ತಾ.ಪಂ, ಸಭಾಂಗಣದಲ್ಲಿ ರಾಯಚೂರು ಜಿಲ್ಲಾಾ ಉತ್ಸವದ ಪೂರ್ವಬಾವಿ ಸಭೆ ತಹಸೀಲ್ದಾಾರ್ ಕು. ಸತ್ಯಮ್ಮ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾಾ ಉತ್ಸವವನ್ನು ಯಶಸ್ವಿಿಯಾಗಿ ಆಯೋಜಿಸಲು ಇಲಾಖಾಧಿಕಾರಿಗಳು ಸಮನ್ವಯ ದಿಂದ ಕಾರ್ಯ ನಿರ್ವಹಿಸಬೇಕು ತಾಲೂಕಿನ ಐತಿಹಾಸಿಕ ಹಾಗೂ ಪ್ರವಾಸಿ ಮಹತ್ವದ ಸ್ಥಳಗಳ ಬಗ್ಗೆೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಗೋಡೆ ಬರಹಗಳನ್ನು ಮಾಡಬೇಕು, ಉತ್ಸವದ ವೇಳೆ ಅಂಗವಿಕಲರಿಗೆ ತೊಂದರೆಯಾಗದಂತೆ ಮೂಲ ಸೌಲಭ್ಯ ಕಲ್ಪಿಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮತ್ತು ಜಿಲ್ಲಾಾ ಉತ್ಸವವು ಜನಸಾಮಾನ್ಯರ ಪಾಲ್ಗೊೊಳ್ಳುವಿಕೆಯಿಂದ ಅರ್ಥಪೂರ್ಣ ವಾಗಲು ಸ್ವಚ್ಛತೆ, ಸಂಚಾರ ವ್ಯವಸ್ಥೆೆ ಹಾಗೂ ಭದ್ರತೆ ವಿಷಯಗಳಿಗೂ ಹೆಚ್ಚಿಿ ನ ಆದ್ಯತೆ ನೀಡುವಂತೆ ತಿಳಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿಿತರಿದ್ದರು.
ಜಿಲ್ಲಾ ಉತ್ಸವ ಪೂರ್ವಬಾವಿ ಸಭೆ

