ಸುದ್ದಿಮೂಲ ವಾರ್ತೆ ಕವಿತಾಳ, ಜ.18:
ಇತ್ತೀಚೆಗೆ ನಿಧನರಾದ ತಿಂಥಣಿ ಬ್ರಿಿಜ್ ಕಲಬುರ್ಗಿ ವಿಭಾಗದ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮ ನಂದಪುರಿ ಮಹಾಸ್ವಾಾಮೀಜಿ ಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡುವ ಮೂಲಕ ಸಮೀಪದ ಡೊಣಮರಡಿ ಗ್ರಾಾಮದ ಭಕ್ತರು ಶನಿವಾರ ಶ್ರದ್ಧಾಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಸ್ಕಿಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ವಕೀಲ ಅವರು ಮಾತನಾಡಿ, ಸಿದ್ದರಾಮಾನಂದಪುರಿ ಮಹಾಸ್ವಾಾಮಿಗಳು ದೈವಾಧೀನರಾಗಿರುವುದು ಸಮಾಜದಲ್ಲಿ ತುಂಬಲಾರದಷ್ಟು ನೋವುಂಟುಮಾಡಿದೆ. ಧಾರ್ಮಿಕ ಕಾರ್ಯಗಳ ಜೊತೆಗೆ ಸಮಾಜದ ಏಳಿಗೆಯ ಬಗ್ಗೆೆ ಅಪಾರ ಕಾಳಜಿ, ಶ್ರದ್ಧೆೆ ಹೊಂದಿದ್ದ ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ. ಶ್ರೀಗಳ ದಿವ್ಯಾಾತ್ಮಕ್ಕೆೆ ಚಿರಶಾಂತಿ ದೊರಕಲಿ, ಮಠದ ಭಕ್ತಾಾದಿಗಳು ಹಾಗೂ ಅಪಾರ ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿಿ ಸಿಗಲಿ ಎಂದು ಭಗವಂತನಲ್ಲಿ ಪ್ರಾಾರ್ಥಿಸುತ್ತೇವೆ ಎಂದರು
ಮಲ್ಲದಗುಡ್ಡ ಗ್ರಾಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ ಪಾಟೀಲ, ಹನುಮಂತ ಮಾಲಿ ಪಾಟೀಲ್, ಹನುಮಂತ ಮೇಟಿ, ಲಕ್ಷ್ಮೀಪತಿ ಪಾಟೀಲ, ಮೌನೇಶ ಮುಲ್ಕಿಿ, ಕರಿಯಣ್ಣ ಗಡ್ಡಿಿಮನಿ, ಮಲ್ಲಪ್ಪ ಯಕ್ಲಾಾಸಪುರು, ಅಂಬಯ್ಯ, ತಿಪ್ಪಣ್ಣ ಪಾಟೀಲ, ಕೆಂಚನಗೌಡ ಪೊಲೀಸ್ ಪಾಟೀಲ, ಅಮರೇಶ ಜಿನೂರು, ರಮೇಶ ಅಂಗಡಿ, ಅಮರೇಶ ಹಣಗಿ ಪೊಲೀಸ್ ಪಾಟೀಲ್, ಶಿವಣ್ಣ, ತಾಯಣ್ಣ ಸಿಂಧನೂರು, ರಮೇಶ ಬೊಮ್ಮನಾಳ, ಶಿವರಾಜ ಪೊಲೀಸ್ ಪಾಟೀಲ್, ವೆಂಕಟೇಶ ಮಾಲಿ ಪಾಟೀಲ್ ಹಾಗೂ ಗ್ರಾಾಮದ ಸಮಾಜ ಮುಖಂಡರು ಉಪಸ್ಥಿಿತರಿದ್ದರು.
ಕವಿತಾಳ : ಸಿದ್ಧರಾಮನಂದಪುರಿ ಶ್ರೀಗಳಿಗೆ ಶ್ರದ್ಧಾಾಂಜಲಿ

