ಸುದ್ದಿಮೂಲ ವಾರ್ತೆ ಕೊಪ್ಪಳ, ಜ.18:
ದಕ್ಷಿಣ ಭಾರತ ಮಹಾಕುಂಬಮೇಳ ಎಂದು ಖ್ಯಾಾತಿ ಹೊಂದಿರುವ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆೆಗೆ ಭಕ್ತರು ಅನೇಕ ರೀತಿಯ ಹರಕೆ ಸಲ್ಲಿಸುತ್ತಾಾರೆ. ಅದರಲ್ಲಿ ಇಂದು ಭಕ್ತನೊಬ್ಬ ಸುಮಾರು 15 ಕಿಮೀ ದೂರ 50 ಕೆಜಿ ಅಕ್ಕಿಿ ಹೊತ್ತುಕೊಂಡು ಮಠಕ್ಕೆೆ ಬಂದು ಸಮರ್ಪಿಸಿದ್ದಾಾರೆ.
ಕೊಪ್ಪಳ ತಾಲೂಕಿನ ತಾಳಕನಕಪುರದ ಯುವಕ ದುರ್ಗಪ್ಪ ಪರಿವರ್ 50 ಕೆಜಿ ಅಕ್ಕಿಿ ಪಾಕೆಟ್ ಹೊತ್ತುಕೊಂಡು 15 ಕಿಲೋಮೀಟರ್ ನಡೆದುಕೊಂಡು ಬಂದು ಭಕ್ತಿಿ ಸಮರ್ಪಿಸಿದ್ದಾಾರೆ.
ಮುಂಜಾನೆ ಸ್ನೇಹಿತರೊಂದಿಗೆ ಅಕ್ಕಿಿ ಮೂಟೆ ಹೊತ್ತುಕೊಂಡು ಗ್ರಾಾಮದಿಂದ ಹೊರಟ ದುರ್ಗಪ್ಪ ಮದ್ಯಾಾಹ್ನದ ವೇಳೆ ಮಠದ ದಾಸೋಹಕ್ಕೆೆ ತಾನು ತಂದಿರುವ ಅಕ್ಕಿಿಯನ್ನು ಸಮರ್ಪಿಸಿದರು,
ಮಠಕ್ಕೆೆ ಅನೇಕರು ಅನೇಕ ರೀತಿಯ ಹರಕೆ ಸಲ್ಲಿಸುತ್ತಾಾರೆ. ಲಕ್ಷಾಂತರ ಜನರು ದಾಸೋಹದಲ್ಲಿ ಸೇವೆ ಮಾಡುತ್ತಾಾರೆ. ಈ ದಾಸೋಹದಲ್ಲಿ ನನ್ನದು ಒಂದಿಷ್ಟು ಸೇವೆ ಇರಲಿ ಎಂದು ಹರಕೆ ಹೊತ್ತು ಮಠಕ್ಕೆೆ ಅಕ್ಕಿಿ ಸಮರ್ಪಿಸಿದ್ದಾಾನೆ ದುರ್ಗಪ್ಪ, ಈ ಯುವಕ ಸಾಧನೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಾತ್ರೆಗೆ 50 ಕೆಜಿ ಅಕ್ಕಿ ಹೊತ್ತು ನಡೆದುಕೊಂಡು ಬಂದ ಭಕ್ತ

