ಸುದ್ದಿಮೂಲ ವಾರ್ತೆ ರಾಯಚೂರು/ಶಿವಮೊಗ್ಗ, ಜ.19:
ಶಿವಮೊಗ್ಗ ಪ್ರೆೆಸ್ ಟ್ರಸ್ಟ್ ಆಯೋಜಿಸಿದ್ದ ಅಂತರಜಿಲ್ಲಾ ಪತ್ರಕರ್ತರ ಕ್ರಿಿಕೆಟ್ ಪಂದ್ಯಾಾವಳಿಯಲ್ಲಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಪತ್ರಕರ್ತರ ತಂಡ ದ್ವಿಿತೀಯ ಸ್ಥಾಾನ ಪಡೆದಿದೆ.
ಶಿವಮೊಗ್ಗದ ಸಹ್ಯಾಾದ್ರಿಿ ಕಾಲೇಜು ಕ್ರೀೆಡಾಂಗಣದಲ್ಲಿ ನಡೆದ ಪಂದ್ಯಾಾವಳಿಯಲ್ಲಿ ರಾಯಚೂರು ತಂಡ ಉತ್ತಮ ಪ್ರದರ್ಶನ ನೀಡಿ ಎರಡನೇ ಬಹುಮಾನ ಪಡೆದಿದೆ.
ಶಿವಮೊಗ್ಗ ಪ್ರೆೆಸ್ ಟ್ರಸ್ಟ್ ತಂಡ ಹಾಗೂ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ತಂಡ ೈನಲ್ಗೆ ತಲುಪಿದ್ದವು. ಅಂತಿಮ ಹಣಾಹಣಿಯಲ್ಲಿ ಶಿವಮೊಗ್ಗ ಪ್ರೆೆಸ್ ಟ್ರಸ್ಟ್ ತಂಡ ಗೆದ್ದು ಪ್ರಥಮ ಬಹುಮಾನ ಪಡೆಯಿತು.
ರಾಯಚೂರು ರಿಪೋರ್ಟರ್ಸ್ ಗಿಲ್ಡ್ ತಂಡ 2ನೇ ಸ್ಥಾಾನ, ದಾವಣಗೆರೆ ಪತ್ರಕರ್ತರ ತಂಡ 3ನೇ ಸ್ಥಾಾನ ಪಡೆಯಿತು. ರಾಯಚೂರು ತಂಡದ ಆಟಗಾರ ಭೀಮೇಶ್ ಪೂಜಾರ ಸೇರಿ ಮೂವರು ಪಂದ್ಯ ಪುರುಷೋತ್ತಮ ಪ್ರಶಸ್ತಿಿ ಪಡೆದರು. ಶ್ರೀಕಾಂತ್ ಸಾವೂರ್ ನಾಯಕತ್ವದ ರಾಯಚೂರು ರಿಪೋರ್ಟಸ್ ಗಿಲ್ಡ್ ತಂಡ ದ್ವಿಿತೀಯ ಸ್ಥಾಾನ ಪಡೆದು ಸಂಭ್ರಮಿಸಿತು.
ಇದಕ್ಕೂ ಮುನ್ನ ಬೆಳಿಗ್ಗೆೆ ಸಹ್ಯಾಾದ್ರಿಿ ಕಾಲೇಜು ಕ್ರೀೆಡಾಂಗಣದಲ್ಲಿ ಕ್ರಿಿಕೆಟ್ ಪಂದ್ಯಾಾವಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಾಧ್ಯಕ್ಷ ಸಿ.ಎಸ್.ಷಡಕ್ಷರಿ ಚಾಲನೆ ನೀಡಿದರು.
ಈ ವೇಳೆ ಶಿವಮೊಗ್ಗ ಪ್ರೆೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ, ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವೈದ್ಯನಾಥ್ , ಶಿವಮೊಗ್ಗ ಡಿಸಿಸಿ ಬ್ಯಾಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಶಿವಮೊಗ್ಗ ಭದ್ರಾಾವತಿ ನಗರಾಭಿವೃದ್ಧಿಿ ಪ್ರಾಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಸೇರಿ ಹಲವರು ಭಾಗವಹಿಸಿದ್ದರು.
ರಾಜ್ಯಮಟ್ಟದ ಪತ್ರಕರ್ತರ ಕ್ರಿಿಕೆಟ್ ಪಂದ್ಯಾಾವಳಿಯಲ್ಲಿ ದ್ವಿಿತೀಯ ಸ್ಥಾಾನ ಪಡೆದ ರಾಯಚೂರು ಕ್ರಿಿಕೆಟ್ ತಂಡಕ್ಕೆೆ ಗಿಲ್ಡ್ ಅಧ್ಯಕ್ಷ ವಿಜಯ್ ಜಾಗಟಗಲ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಹೂಗಾರ, ಉಪಾಧ್ಯಕ್ಷ ಜಯರಾಮ ಎಂ, ಹಿರಿಯ ಪತ್ರಕರ್ತರಾದ ಕೆ.ಸತ್ಯನಾರಾಯಣ, ಚನ್ನಬಸವಣ್ಣ, ಚನ್ನಬಸವ ಬಾಗಲವಾಡ ,ಖಾನ್ ಸಾಬ್ ಮೋಮಿನ್, ಚಂದ್ರಕಾಂತ ಮಸಾನಿ ಸೇರಿ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಕರ್ತರ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ರಾಯಚೂರು ತಂಡಕ್ಕೆ ದ್ವಿತೀಯ ಸ್ಥಾನ

