ಸುದ್ದಿಮೂಲ ವಾರ್ತೆ ಬೀದರ್, ಜ.19:
2024-25ನೇ ಸಾಲಿನ ಗಾಂಧಿ ಗ್ರಾಾಮ ಪುರಸ್ಕಾಾರದ ಆಯ್ಕೆೆಯಲ್ಲಿ ತಾಲ್ಲೂಕಿನ ಮರಕಲ್ ಗ್ರಾಾಮ ಪಂಚಾಯಿತಿಗೆ ಅನ್ಯಾಾಯ ಮಾಡಲಾಗಿದೆ ಎಂದು ಆರೋಪಿಸಿ ಮರಕಲ್ ಗ್ರಾಾಮ ಪಂಚಾಯಿತಿ ಸದಸ್ಯರು, ಗ್ರಾಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೋಮವಾರ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.
ಪುರಸ್ಕಾಾರದ ಸಾಲಿನಲ್ಲಿದ್ದ ಪಂಚಾಯಿತಿಗಳಲ್ಲಿ ಮರಕಲ್ ಪಂಚಾಯಿತಿ ಅತಿ ಹೆಚ್ಚು 152 ಅಂಕ ಪಡೆದಿತ್ತು. ಬರೂರು 142 ಹಾಗೂ ಮನ್ನಳ್ಳಿಿ 122 ಅಂಕ ಗಳಿಸಿತ್ತು. ಆದರೆ, ಅಧಿಕಾರಿಗಳು ಕಡಿಮೆ ಅಂಕ ಪಡೆದ ಪಂಚಾಯಿತಿಗಳ ದಾಖಲೆ ಮೊದಲು ಪರಿಶೀಲಿಸಿದ್ದಾರೆ. ಕೊನೆಗೆ ಮರಕಲ್ಗೆ ಭೇಟಿ ಕೊಟ್ಟಿಿದ್ದಾರೆ. ದಾಖಲೆ ಹಾಗೂ ಕಾಮಗಾರಿ ವೀಕ್ಷಿಸಿಲ್ಲ. ಯಾವುದೋ ಪ್ರಭಾವಕ್ಕೆೆ ಒಳಗಾಗಿ ಪಂಚಾಯಿತಿಯನ್ನು ಪುರಸ್ಕಾಾರದಿಂದ ಹೊರಗಿಡಲು ಹುನ್ನಾಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಹೆಚ್ಚು ಅಂಕ ಪಡೆದ ಪಂಚಾಯತಿಯನ್ನು ಹೊರಗಿಟ್ಟು, ಬರೂರು ಪಂಚಾಯಿತಿಯನ್ನು ಪುರಸ್ಕಾಾರಕ್ಕೆೆ ಆಯ್ಕೆೆ ಮಾಡಿರುವುದು ಅನ್ಯಾಾಯವಾಗಿದೆ ಎಂದು ಆರೋಪಿಸಿದ್ದಾರೆ.
ಗ್ರಾಾಮ ಪಂಚಾಯಿತಿ ಸದಸ್ಯರು ಜ.12 ರಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರನ್ನು ಭೇಟಿ ಮಾಡಿ, ಪುನರ್ ಪರಿಶೀಲನೆ ನಡೆಸುವಂತೆ ಕೋರಿದಾಗ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅವರು, ಬರೂರ ಪಂಚಾಯಿತಿಯನ್ನು ಆಯ್ಕೆೆ ಮಾಡಿ ಸರ್ಕಾರಕ್ಕೆೆ ವರದಿ ಸಲ್ಲಿಸಲಾಗಿದೆ. ಈಗ ಯಾವುದೇ ಮರು ಪರಿಶೀಲನೆ ನಡೆಸುವುದಿಲ್ಲ. ಬೇಕಾದರೆ ನ್ಯಾಾಯಾಲಯಕ್ಕೆೆ ಹೋಗಬಹುದು ಎಂದು ಉಡೊ ಉತ್ತರ ನೀಡಿದ್ದಾರೆ ಎಂದು ಆಪಾದಿಸಿದರು.
ಪುರಸ್ಕಾಾರಕ್ಕೆೆ ಪಂಚಾಯಿತಿ ಆಯ್ಕೆೆಯ ಪುನರ್ ಪರಿಶೀಲನೆಗೆ ತಂಡ ನೇಮಿಸಬೇಕು. ಪಾರದರ್ಶಕವಾಗಿ ದಾಖಲೆ ಹಾಗೂ ಕಾಮಗಾರಿ ಪರಿಶೀಲಿಸಿ, ಪುರಸ್ಕಾಾರಕ್ಕೆೆ ಪಂಚಾಯಿತಿಯನ್ನು ಆಯ್ಕೆೆ ಮಾಡಬೇಕು ಎಂದು ಒತ್ತಾಾಯಿಸಿದರು.
ಸ್ಥಳಕ್ಕೆೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೋಟಪ್ಪಗೋಳ್ ಅವರು, ಮನವಿ ಪತ್ರ ಸ್ವೀಕರಿಸಿ, ಗಾಂಧಿ ಗ್ರಾಾಮ ಪುರಸ್ಕಾಾರಕ್ಕೆೆ ಪಂಚಾಯಿತಿ ಆಯ್ಕೆೆಗೆ ಸಂಬಂಧಿಸಿದಂತೆ ಪುನರ್ ಪರಿಶೀಲನೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮರಕಲ್ ಗ್ರಾಾಮ ಪಂಚಾಯಿತಿ ಸದಸ್ಯ ಖಲೀಲ್ಮಿಿಯ ಗುತ್ತೆೆದಾರ್, ಮಾಜಿ ಸದಸ್ಯ ಧನರಾಜ ಬುಯ್ಯಾಾ, ವಿವಿಧ ಸಂಘಟನೆಗಳ ಮುಖಂಡರಾದ ರಾಜಕುಮಾರ ಮೂಲಭಾರತಿ, ಬಸವರಾಜ ಬುಯ್ಯಾಾ, ಕಾಮಶೆಟ್ಟಿಿ ಬುಯ್ಯಾಾ, ವೈಜಿನಾಥ ಕೋಳಿ, ವಿಠ್ಠಲ ಮೇತ್ರೆೆ, ಗಾಲೀಬ್ ಹಾಸ್ಮಿಿ, ಅರುಣ್ ಪಟೇಲ್, ಮಹೇಶ ಗೋರನಾಳಕರ್, ರವಿಕುಮಾರ ವಾಘಮಾರೆ, ಶಿವಕುಮಾರ ನೀಲಿಕಟ್ಟಿಿ, ಸಾಯಿ ಸಿಂಧೆ, ದೀಪಕ್ ಮಾಳಗೆ, ಚಂದ್ರಶೇಖರ ಬುಯ್ಯಾಾ, ಶಿವಕುಮಾರ ಪೋತೆ, ನಾಗಶೆಟ್ಟಿಿ ಪಾಟೀಲ, ಪುಟ್ಟರಾಜ, ಸತೀಶ್ ಪಾಶಾ, ಮಹೆಬೂಬ್ ಸಿದ್ದಿಕ್ಕಿಿ, ಧನರಾಜ ಬಿರಾದಾರ, ಸತೀಶ್ ಸ್ವಾಾಮಿ, ಪ್ರಶಾಂತ ವಿಶ್ವಕರ್ಮ ಮತ್ತಿಿತರರು ಇದ್ದರು.
ಗಾಂಧಿ ಗ್ರಾಮ ಪುರಸ್ಕಾರ : ಮರಕಲ್ ಗ್ರಾ.ಪಂ.ಗೆ ಅನ್ಯಾಯ ಖಂಡಿಸಿ ಧರಣಿ

