ಸುದ್ದಿಮೂಲ ವಾರ್ತೆ ಕವಿತಾಳ, ಜ.19:
ಬಾಗಲಕೋಟೆ ಮತ್ತು ಬೀಳಗಿ ಊರುಗಳಿಂದ ಮಂತ್ರಾಾಲಯಕ್ಕೆೆ ತೆರಳುವ ಪಾದಯಾತ್ರಿಿಗರಿಗೆ ಪಟ್ಟಣದ ಹೊರವಲಯದಲ್ಲಿ ವಿಶ್ವ ಬ್ರಾಾಹ್ಮಣ ಗೆಳೆಯರ ಬಳಗದ ವತಿಯಿಂದ 5 ನೇ ವರ್ಷದ ಎರಡು ದಿನದ ಪ್ರಸಾದ ವ್ಯವಸ್ಥೆೆ ಮಾಡಲಾಗಿದೆ.
ಮುದೋಳ, ಜಮಖಂಡಿ, ವಿಜಯಪುರ್, ಬೆಳಗಾವಿ ಮತ್ತು ತಾವರಗೇರ ಊರುಗಳಿಂದ ಮಂತ್ರಾಾಲಯಕ್ಕೆೆ ತೆರಳುವ ಪಾದಯಾತ್ರಿಿಗರಿಗೆ ಪ್ರಸಾದ ವ್ಯವಸ್ಥೆೆ ಮಾಡಲಾಗುತ್ತಿಿದೆ, ಉಪಹಾರ ಜೊತೆ ಔಷಧ ಸಹ ವಿತರಿಸಲಾಗುತ್ತದೆ. ಸುಮಾರು 25 ವರ್ಷದವರಿಗೆ ಪಾದಯಾತ್ರೆೆ ಮಾಡಿದವರಿಗೆ ಸನ್ಮಾಾನ ಮಾಡಿ ಗೌರವಿಸಲಾಗುತ್ತದೆ ಎಂದು ಬ್ರಾಾಹ್ಮಣ ಗೆಳೆಯರ ಬಳಗದ ನಾಗರಾಜ ಟಂಕಸಾಲಿ ಹೇಳಿದರು.
ಕವಿತಾಳ ಪಟ್ಟಣದಲ್ಲಿ ಎರಡು ದಿನ, ಮಾನ್ವಿಿ ಮತ್ತು ಹನುಮಾಪುರದಲ್ಲಿ ಎರಡು ದಿನ ಪಾದಯಾತ್ರೆೆ ಹೋಗುವರಿಗೆ ವಿಶ್ರಾಾಂತಿ ಪಡೆಯಲು ವ್ಯವಸ್ಥೆೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮೋದ ಪತ್ತಾಾರ, ಮಂಜುನಾಥ ಹುಬ್ಬಳ್ಳಿಿ, ಅಕ್ಷಯ ಉಕ್ಕೇರಿ, ವಿಶ್ವಕರ್ಮ ಪತ್ತಾಾರ, ವಿಠ್ಠಲ ಪತ್ತಾಾರ, ಸಂಗಮೇಶ ಪತ್ತಾಾರ ಮತ್ತು ಬ್ರಾಾಹ್ಮಣ ಗೆಳೆಯರ ಬಳಗದವರು ಉಪಸ್ಥಿಿತರಿದ್ದರು.
ಕವಿತಾಳ : ಮಂತ್ರಾಲಯ ತೆರಳುವ ಪಾದಯಾತ್ರಿಗಳಿಗೆ ಪ್ರಸಾದ ವ್ಯವಸ್ಥೆ

