ಸುದ್ದಿಮೂಲ ವಾರ್ತೆ ರಾಯಚೂರು, ಜ.19:
ಮಹಿಳೆಯರನ್ನು ದೌರ್ಜನ್ಯದ ದೇವದಾಸಿ ಪದ್ಧತಿ ಯಲ್ಲಿಯೆ ಮಾಡುವ ಅಸಮರ್ಪಕ ಸರ್ವೆ ಸರಿಪಡಿಸಲು ಆಗ್ರಹಿಸಿ ದೇವದಾಸಿ ವಿಮೋಚನಾ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಟಿಪ್ಪುು ಸುಲ್ತಾಾನ ಉದ್ಯಾಾನವನದಲ್ಲಿ ಸಿಐಟಿಯು ಸಂಯೋಜಿತ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
1982ರ ಪೂರ್ವದಲ್ಲಿ ಹುಟ್ಟಿಿದ ದೇವದಾಸಿ ಮಹಿಳೆಯರನ್ನು ಮಾತ್ರವೇ ಹೊಸ ಗಣತಿಯಲ್ಲಿ ಪರಿಗಣಿಸಿ ಆನಂತರ ಹುಟ್ಟಿಿದವರನ್ನು ಮತ್ತು ಕೆಲವು ದಾಖಲಾತಿ ಒದಗಿಸಲು ಆಗದವರನ್ನು ಗಣತಿಗೆ ಸೇರ್ಪಡೆ ಮಾಡದೆ ಅಧಿಕಾರಿಗಳು ನಿರಾಕರಿಸುತ್ತಿಿರುವುದನ್ನು ಖಂಡಿಸಿದರು.
ಎಲ್ಲಾಾ ದೇವದಾಸಿ ಮಹಿಳೆಯರು ಹಾಗೂ ಅವರ ಮೂರು ತಲೆ ಮಾರಿನ ಕುಟುಂಬಗಳನ್ನು ಯಾವುದೇ ಷರತ್ತಿಿಲ್ಲದೆ, ವಯೋಮಿತಿ ಗಮನಿಸದೆ, ವಿಧಾನ ಮಂಡಲ ರದ್ದು ಪಡಿಸಿದ ಹಳೆಯ ಕಾಯ್ದೆೆ ತೋರಿಸಿ, ನಿರಾಕರಿಸದೆ, ಗಣತಿ ಮಾಡಿ ಪುನರ್ವಸತಿ ಕೈಗೊಳ್ಳಬೇಕು, ಮಾಸಿಕ ಸಹಾಯಧನ ಅಥವಾ ಪಿಂಚಣಿ 10 ಸಾವಿರ ರೂ ಹೆಚ್ಚಿಿಸಬೇಕು, ತಲಾ ಐದು ಎಕರೆ ಭೂಮಿ ಒದಗಿಸಬೇಕು, ಭೂ ಒಡೆತನ ಯೋಜನೆ ಬದಲಾಯಿಸಬೇಕು, ಮನೆಗಳನ್ನು ಕತ್ತಲಲ್ಲಿಡುವ ಉಚಿತ ವಿದ್ಯುತ್ ಕಸಿಯುವ ವಿದ್ಯುತ್ ಮಸೂದೆ ಹಾಗೂ ದಲಿತರು, ಬಡವರ ವಿರೋಧಿ ಕೇಂದ್ರದ ಬಿ ರೋಜಗಾರ್ ಕಾಯ್ದೆೆ ವಾಪಾಸು ಪಡೆದು ಉದ್ಯೋೋಗ ಖಾತ್ರಿಿ ಕಾಯ್ದೆೆ ಉಳಿಸಬೇಕು, ರಾಯಚೂರು ನಗರದಲ್ಲಿ ಇರುವ ಮಾಜಿ ದೇವದಾಸಿಯರಿಗೆ ಪುನರ್ವಸತಿ ಕಲ್ಪಿಿಸಲು 196 ಮನೆಗಳ ನಿರ್ಮಾಣ ಪೂರ್ಣಗೊಳಿಸಬೇಕು, ನಿರುದ್ಯೋೋಗ ಭತ್ಯೆೆ 10 ಸಾವಿರ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಧರಣಿಯಲ್ಲಿ ಸಿಐಟಿಯು ಅಧ್ಯಕ್ಷೆೆ ಎಚ್.ಪದ್ಮಾಾಘಿ, ಕಾರ್ಯದರ್ಶಿ ಕೆ.ಜಿ.ವೀರೇಶ, ಮಹಾದೇವ, ಹೂಳೆಮ್ಮ ಕವಿತಾಳ, ರೇಣುಕಮ್ಮ, ಹೊಸೂರಮ್ಮ, ಮುತ್ತಮ್ಮ ಸರೋಜಮ್ಮ ಸೇರಿ ಅನೇಕರಿದ್ದರು.
ಸಿಐಟಿಯು ನೇತೃತ್ವದಲ್ಲಿ ಎರಡು ದಿನಗಳ ಧರಣಿ ಆರಂಭ ದೇವದಾಸಿಯರ ಸರ್ವೆ ಸರಿಪಡಿಸಲು ಆಗ್ರಹ

