ಸುದ್ದಿಮೂಲ ವಾರ್ತೆ ಕೊಪ್ಪಳ, ಜ.20:
ಕಾರ್ಖಾನೆಯ ತ್ಯಾಾಜ್ಯ ಮತ್ತು ಹಾರು ಬೂದಿಯಿಂದ ರೋಷಿ ಹೋಗಿರುವ ಹಿರೇಬಗನಾಳ ಮತ್ತು ಸುತ್ತಮುತ್ತಲ ಗ್ರಾಾಮಸ್ಥರು ಕಾರ್ಖಾನೆಗಳ ವಿರುದ್ಧ ಸಿಡಿದೆದ್ದು, ಸಭೆ ಮಾಡಿದ್ದು ಅಲ್ಲದೆ ಕಾರ್ಖಾನೆಯ ಪ್ರತಿನಿಧಿಗಳಿಗೆ ತ್ಯಾಾಜ್ಯ ನಿಯಂತ್ರಣ ಮಾಡಿ, ಇಲ್ಲವೇ ಕಾರ್ಖಾನೆ ಬಂದ್ ಮಾಡಿ ಎಂದು ತಾಕೀತು ಮಾಡಿದ್ದಾಾರೆ.
ಹಿರೇಬಗನಾಳ ಗ್ರಾಾಮದ ಕರಿಯಮ್ಮನ ದೇವಸ್ಥಾಾನದಲ್ಲಿ ಸಭೆ ಸೇರಿದ್ದ ಗ್ರಾಾಮಸ್ಥರು, ಗ್ರಾಾಮದ ಸುತ್ತಲು ತನುಸ್ ಇಸ್ಪಾಾತ್, ವನ್ಯ ಸ್ಟೀಲ್, ತ್ರಿಿವಿಸ್ಟಾಾರ್ ,ಎಚ್.ಆರ್. ಜಿ. ಎಸ್.ವಿ. ಇಸ್ಪಾಾತ್ ಸೇರಿದಂತೆ ಅನೇಕ ಕಾರ್ಖಾನೆಗಳ ಪ್ರತಿನಿಧಿಗಳನ್ನು ಕರೆಯಿಸಿ, ಗ್ರಾಾಮ ಸುತ್ತಾಾಡಿಸಿದ್ದಾಾರೆ. ಶಾಲೆ, ಗುಡಿಗಳನ್ನು ಮತ್ತು ಮನೆಗಳನ್ನು ಸುತ್ತಾಾಡಿ, ಬಂದಿರುವ ಕರಿಬೂದಿಯನ್ನು ಅವರ ಕೈಯೆಗೆ ಅಂಟಿಸಿ, ತೋರಿಸಿದ್ದಾಾರೆ.
ಗ್ರಾಾಮ ದೇವತೆಯ ದೇವಸ್ಥಾಾನದಲ್ಲಿ ಸಭೆ ಸೇರಿ, ನಮ್ಮೂರಿಗೆ ಉಸಿರುಗಟ್ಟುವ ವಾತಾವರಣ ಇದೆ. ಇಲ್ಲಿ ಬದುಕುವುದು ಅಸಾಧ್ಯವಾಗಿದೆ. ಕಾರ್ಖಾನೆಯ ತ್ಯಾಾಜ್ಯ ಸಂಸ್ಕರಣೆ ಮಾಡದೆ ಹಾಗೆ ಬಿಡುತ್ತಿಿರುವುದರಿಂದ ಅದು ಗ್ರಾಾಮ ಸೇರಿದಂತೆ ಸುತ್ತಮುತ್ತಲು ಪ್ರದೇಶದಲ್ಲೆೆಲ್ಲಾಾ ಹರಡುತ್ತಿಿದೆ. ಇದರಿಂದ ಬೆಳೆಗಳು ಬೆಳೆಯುತ್ತಿಿಲ್ಲ, ನಮಗೆ ಉಸಿರಾಡಲು ಆಗುತ್ತಿಿಲ್ಲ. ನಾನು ರೋಗಗಳು ಬರುತ್ತಿಿವೆ. ಆದ್ದರಿಂದ ಈ ತ್ಯಾಾಜ್ಯ ಸಂಸ್ಕರಣೆ ಮಾಡಿ, ಇಲ್ಲವೇ ಕಾರ್ಖಾನೆಯನ್ನೇ ಬಂದ್ ಮಾಡಿ ಎಂದು ತಾಕಿತು ಮಾಡಿದರು.
ಇದಕ್ಕೆೆ ಪ್ರತಿಕ್ರಿಿಯಿಸಿದ ಕಾರ್ಖಾನೆ ಪ್ರತಿನಿಧಿಗಳು, ಇಲ್ಲಿ ಇದಕ್ಕೆೆ ಆರು ತಿಂಗಳು ಸಮಯ ಬೇಕಾಗುತ್ತದೆ. ಹೀಗಾಗಿ, ಸಮಯಾವಕಾಶ ನೀಡಿ ಎಂದರು. ಇದರಿಂದ ಆಕ್ರೋೋಶಗೊಂಡ ಗ್ರಾಾಮಸ್ಥರು, ಇಂತಹ ಸಮಯ ಸಾಧಕತೆ ಬೇಡ. ಈ ಹಿಂದೆ ಹಲವಾರು ಬಾರಿ ನಾವು ಮನವಿ ಸಲ್ಲಿಸಿದ್ದೇವೆ. ನೀವು ಯಾಕೆ ಕ್ರಮವಹಿಸಿಲ್ಲ. ಈಗ ನಾವು ಸಭೆ ಕರೆದ ಮೇಲೆ ಸಮಯ ಕೇಳುವುದು ಯಾವ ನ್ಯಾಾಯ. ಹಾಗಾದರೇ ಮೊದಲು ಕಾರ್ಖಾನೆ ಬಂದ್ ಮಾಡಿ, ತ್ಯಾಾಜ್ಯ ನಿಯಂತ್ರಣ ಮಾಡಿ ನಂತರ ಪ್ರಾಾರಂಭಿಸಿ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಕಾರ್ಖಾನೆ ಪ್ರತಿನಿಧಿಗಳನ್ನು ಗ್ರಾಾಮದ ಹಿರಿಯರು, ಮಹಿಳೆಯರು ತೀವ್ರ ತರಾಟೆಗೆ ತೆಗೆದುಕೊಂಡರು. ನಿಮ್ಮಿಿಂದ ನಾವು ನರಕದಲ್ಲಿ ಬದುಕುವಂತೆ ಆಗಿದೆ. ನಿಮಗೆ ಕನಿಷ್ಠ ಕಾಳಜಿಯೂ ಇಲ್ಲ. ನಾವು ಇಲ್ಲಿ ಬದುಕಲು ಆಗದಂತೆ ಆಗಿದೆ. ಹೀಗಾಗಿ, ನೀವು ಬಂದ್ ಮಾಡಿಬಿಡಿ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಗ್ರಾಾಮಸ್ಥರ ಮಧ್ಯಸ್ಥಿಿಕೆಯಲ್ಲಿ ತಕ್ಷಣವೇ ಹೊರಸೂಸುವ ತ್ಯಾಾಜ್ಯ ನಿಯಂತ್ರಣ ಮಾಡಬೇಕು, ಇಲ್ಲದಿದ್ದರೇ ಕಾರ್ಖಾನೆಯನ್ನೇ ಬಂದ್ ಮಾಡಬೇಕು ಎನ್ನುವ ಷರತ್ತು ವಿಧಿಸಿ, ಸಭೆ ಮೊಟಕುಮಾಡಲಾಯಿತು.
ಕಾರ್ಖಾನೆ ತ್ಯಾಜ್ಯ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು – ಕಾರ್ಖಾನೆಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಸಭೆ

