ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.20:
ರೈತರ ಅನೂಕೂಲಕ್ಕಾಾಗಿ ಖರೀದಿ ಕೇಂದ್ರ ತೆರೆಯಲಾಗಿದ್ದು ಸರಕಾರದ ನಿಯಮದಡಿ ರೈತರಿಗೆ ಯಾವುದೇ ಅನ್ಯಾಾಯವಾಗದಂತೆ ತೊಗರಿ ಖರೀದಿಸಿ ಆದಷ್ಟು ಶೀಘ್ರವೇ ರೈತರ ಖಾತೆಗೆ ಹಣ ಜಮಾವಣೆ ಮಾಡುವ ಕೆಲಸವಾಗಬೇಕೆಂದು ಎಂಎಲ್ಸಿ ಶರಣಗೌಡ ಪಾಟೀಲ್ ಭಯ್ಯಾಾಪೂರ ಹೇಳಿದರು.
ಪಟ್ಟಣದ ಎಪಿಎಂಸಿಯಲ್ಲಿ ತೊಗರಿ ಬೆಳೆಗಾರರ ಅನುಕೂಲಕ್ಕಾಾಗಿ 2025-26ನೇ ಸಾಲಿನಲ್ಲಿ ಟಿಎಪಿಎಂಎಸ್ನಿಂದ ತೆರೆದ ತೊಗರಿ ಖರೀದಿ ಕೇಂದ್ರ ಉದ್ಘಾಾಟಿಸಿ ಮಾತನಾಡಿದ ಅವರು ರೈತರು ಸದುಪಯೋಗ ಪಡೆಯಬೇಕೆಂದು ಹೇಳಿದರು. ನ.ಯೋ.ಪ್ರಾಾ ಅಧ್ಯಕ್ಷ ಭೂಪನಗೌಡ ಕರಡಕಲ್, ಜಿಲ್ಲಾಾ ಗ್ಯಾಾರಂಟಿ ಅನುಷ್ಟಾಾನ ಸಮಿತಿ ಜಿಲ್ಲಾಾಧ್ಯಕ್ಷ ಪಾಮಯ್ಯ ಮುರಾರಿ, ಟಿಎಪಿಎಂಸಿ ಅಧ್ಯಕ್ಷ ಶಶಿಧರಗೌಡ ಪಾಟೀಲ್ ಆಶಿಹಾಳ, ಸೋಮಶೇಖರ ಐದನಾಳ, ಮಲ್ಲಿಕಾರ್ಜುನ ಗುಡದನಾಳ, ಸಿದ್ದಣ್ಣ ಗುಡದನಾಳ, ಚನ್ನಾಾರಡ್ಡಿಿ ಬಿರಾದಾರ ಇತರರಿದ್ದರು.
ರೈತರಿಗೆ ಅನ್ಯಾಯವಾಗದಂತೆ ತೊಗರಿ ಖರೀದಿಸಿ ಹಣ ಪಾವತಿಸಿ : ಶರಣಗೌಡ ಬಯ್ಯಾಪೂರ

