ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.20:
ಪುರಸಭೆ ವ್ಯಾಾಪ್ತಿಿಯ 12ನೇ ವಾರ್ಡ್ನ ಕೊರವರ ಓಣಿಯಿಂದ, ಗೌಳಿಪುರ ಬಡಾವಣೆವರೆಗೆ ಕೆ.ಕೆ.ಆರ್.ಡಿ.ಬಿ. ಇಲಾಖೆಗೆ ಡಾಂಬರೀಕರಣ ಕಾಮಗಾರಿ ಹಣವನ್ನು ರೂರಲ್ ಇನ್ರ್ಾಸ್ಪೆೆಕ್ಟರ್ ಡೆವೆಲಪ್ಮೆಂಟ್ ಲಿಮಿಟೆಡ್ ಎಇಇ ಬೇರೆ ಕಾಮಗಾರಿಗೆ ಬಳಕೆ ಮಾಡಿದ್ದು ಕೂಡಲೇ ತನಿಖೆ ನಡೆಸುವಂತೆ ವಾರ್ಡಿನ ನಾಗರಿಕರು ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜೇಯಸಿಂಗ್ ಅವರಿಗೆ ಬರೆದ ಮನವಿಯನ್ನು ಸಹಾಯಕ ಆಯುಕ್ತ ಬಸವಣ್ಣೆೆಪ್ಪ ಕಲಶೆಟ್ಟಿಿ ಅವರಿಗೆ ಸಲ್ಲಿಸಿದರು.
ವಾರ್ಡ್ನ ನಿವಾಸಿಗಳು ಸಮರ್ಪಕ ರಸ್ತೆೆ ಇಲ್ಲದೆ ಪರದಾಡುತ್ತಿಿದ್ದು ಹದಗೆಟ್ಟ ರಸ್ತೆೆಯಲ್ಲಿ ಓಡಾಡುವ ನಿವಾಸಿಗಳಿಗೆ ಧೂಳಿನಿಂದ ಅಸ್ತಮ, ಕೆಮ್ಮು, ದಮ್ಮು ರೋಗಗಳು ಹರಡುತ್ತಿಿರುವುದರಿಂದ ಇದ್ದ ಡಾಂಬರ್ ರಸ್ತೆೆ ತೆರವುಗೊಳಿಸಿ, ನಾಲ್ಕು ತಿಂಗಳಾದರೂ ಮರಳಿ ಕಾಮಗಾರಿ ಪ್ರಾಾರಂಭಿಸಿಲ್ಲ, ಕೆಕೆಆರ್ಡಿಬಿ ಯೋಜನೆ ಅಡಿಯಲ್ಲಿ ತಾಲೂಕಿನಲ್ಲಿ ಕೈಗೊಂಡಿರುವ ಪಟ್ಟಣದ ಗ್ರಾಾಮೀಣ ಪ್ರದೇಶಗಳಲ್ಲಿ ಸಿ.ಸಿ. ಡಾಂಬರೀಕರಣ. ಚರಂಡಿ ಸೇರಿ ಅನೇಕ ಕಾಮಗಾರಿಗಳು ಅಂದಾಜು ಪತ್ರಿಿಕೆಯಂತೆ ಕಾಮಗಾರಿ ಆಗದೆ ಸಂಪೂರ್ಣ ಕಳಪೆ ಮಟ್ಟದಲ್ಲಿ ನಿರ್ಮಿಸಿ ಸರ್ಕಾರದ ಹಣ ಲೂಟಿ ಮಾಡಿರುವ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಕಾಮಗಾರಿಗಳ ಬಗ್ಗೆೆ ತನಿಖೆಗೆ ಸಿ.ಓ.ಡಿಗೆ ನೀಡಬೇಕು, 15 ದಿನಗಳೊಳಗಾಗಿ ಸ್ಪಂದಿಸದಿದ್ದಲ್ಲಿ ತಾಲೂಕಿನ ಸಾರ್ವಜನಿಕರೊಂದಿಗೆ ಸತ್ಯಾಾಗ್ರಹ ಹಾಗೂ ಉಗ್ರ ಹೋರಾಟ ಮಾಡಲಾಗುವುದು ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಾರ್ಡ್ ನಿವಾಸಿಗಳಾದ ಅಭಿಷೇಕ, ದೇವರಾಜ, ಆನಂದ,ರಾಹುಲ್, ಕೃಷ್ಣ, ವಿರೇಶ, ವಿನೊದ್, ಶಂಕರ ರೆಡ್ಡಿಿ, ಬಸವ,ಅಮಿನ್, ಸುಂದರ, ಮಂಜುನಾಥ, ಇಮಾಮಸಾಬ, ಮದನ ಬಸವರಾಜ ಇತರರು ಆಗ್ರಹಿಸಿದರು.
ಕೆಕೆಆರ್ಡಿಬಿಯಿಂದ ಅಪೂರ್ಣ ರಸ್ತೆ ಕಾಮಗಾರಿ ಅನುದಾನ ದುರ್ಬಳಕೆ ಆರೋಪ

