ಸುದ್ದಿಮೂಲ ವಾರ್ತೆ ರಾಯಚೂರು, ಜ.20:
ಭಾರತ ಸರಕಾರದ ಅಂತರ ರಾಜ್ಯ ಯುವಜನ ವಿನಿಮಯ ಕಾರ್ಯಕ್ರಮಕ್ಕೆೆ ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್ಎಸ್ಎಸ್ ಸ್ವಯಂ ಸೇವಕಿಯರು ಆಯ್ಕೆೆಯಾಗಿದ್ದಾಾರೆ.
ಕೇಂದ್ರ ಸರಕಾರದ ಯುವಜನ ವ್ಯವಹಾರ ಇಲಾಖೆಯ ಮೇರಾ ಯುವ ಭಾರತ್ (ಮೈ ಭಾರತ) ವತಿಯಿಂದ ಹಮ್ಮಿಿಕೊಳ್ಳಲಾಗಿರುವ ಕಾರ್ಯಕ್ರಮ ತೆಲಂಗಾಣ ರಾಜ್ಯದ ವಾರಂಗಲ್ ನಗರದಲ್ಲಿ ಜ.24 ರವರೆಗೆ ಜರುಗಲಿದೆ.
ಎನ್ಎಸ್ಎಸ್ ಘಟಕದ ಪ್ರತಿಭಾನ್ವಿಿತ ಮತ್ತು ಕ್ರಿಿಯಾಶೀಲ ಸ್ವಯಂ ಸೇವಕಿಯರಾದ ಪಿ.ಸಂಗೀತಾ, ಆರ್.ಮೈತ್ರಿಿ, ಸುಷ್ಮಾಾ, ಭವಾನಿ, ಸಿ. ಲಕ್ಷ್ಮೀಘಿ, ಸ್ವಪ್ನಾಾ ಮತ್ತು ರಾಘವಿ ಆಯ್ಕೆೆಯಾಗಿದ್ದಾಾರೆ.
ಆಯೋಜಕ ರಾಜ್ಯ ಮತ್ತು ಆಹ್ವಾಾನಿತ ರಾಜ್ಯಗಳ ಪರಸ್ಪರ ಭಾಷೆ, ಆಚಾರ-ವಿಚಾರ, ಖಾದ್ಯ ಸಂಸ್ಕೃತಿ, ಪಾರಂಪರಿಕ ತಾಣಗಳ ಪರಿಚಯ, ಯುವ ವಿಚಾರಗಳ ಮಂಡನೆ, ಪ್ರಾಾದೇಶಿಕ ಹಾಗೂ ಸ್ಥಳೀಯ ಇತಿಹಾಸ, ಜೀವನ ಶೈಲಿ ಮುಂತಾದ ವಿಷಯಗಳ ಪರಸ್ಪರ ವಿನಿಮಯದ ಉದ್ದೇಶ ಕಾರ್ಯಕ್ರಮ ಹೊಂದಿದೆ ಎಂದು ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷ ಕುಮಾರ ರೇವೂರ ಮಾಹಿತಿ ನೀಡಿದ್ದಾಾರೆ.
ಪ್ರಾಾಂಶುಪಾಲೆ ಡಾ. ಸುಗುಣಾ ಬಸವರಾಜ್ ವಿದ್ಯಾಾರ್ಥಿನಿ ಸ್ವಯಂ ಸೇವಕಿಯರ ಆಯ್ಕೆೆಗೆ ಹರ್ಷ ವ್ಯಕ್ತಪಡಿಸಿ ತಂಡಕ್ಕೆೆ ಶುಭ ಹಾರೈಸಿದ್ದಾಾರೆ.
ಯುವಜನ ವಿನಿಮಯ ಕಾರ್ಯಕ್ರಮಕ್ಕೆ ರಾಯಚೂರು ವಿದ್ಯಾರ್ಥಿನಿಯರ ಆಯ್ಕೆ

