ಸುದ್ದಿಮೂಲ ವಾರ್ತೆ ಸಿಂಧನೂರು, ಜ.20:
ಮುಂಗಾರು ಹಂಗಾಮಿನ ಜೋಳ ನೊಂದಣಿ ಮತ್ತು ಖರೀದಿ ಪ್ರಾಾರಂಭಿಸುವಂತೆ ಒತ್ತಾಾಯಿಸಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾಾರರ ಮುಖಾಂತರ ಮುಖ್ಯಮಂತ್ರಿಿಗಳಿಗೆ ಮನವಿ ರವಾನಿಸಿದರು.
ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ಮಾತನಾಡಿ, ಕೆಳಭಾಗದ ರೈತರು ಅತಿ ಹೆಚ್ಚು ಜೋಳದ ಬೆಳೆಗೆ ಅವಲಂಭಿತರಾಗಿದ್ದಾಾರೆ. ಸರಕಾರ ಖರೀದಿ ಕೇಂದ್ರಗಳ ಮುಖಾಂತರ ನೊಂದಣಿ ಕಾರ್ಯ ಪ್ರಾಾರಂಭಿಸಿ ಎರಡೇ ದಿನದಲ್ಲಿ ಮುಕ್ತಾಾಯ ಮಾಡಿದ್ದು ರೈತರಿಗೆ ಮಾಡಿದ ದ್ರೋಹವಾಗಿದೆ. ನೊಂದಣಿ ಕಾರ್ಯ ಸ್ಥಗಿತಗೊಂಡಿದ್ದರಿಂದ ತಾಲ್ಲೂಕಿನ ಶೇ.50ರಷ್ಟು ರೈತರು ವಂಚಿತರಾಗಿದ್ದಾಾರೆ. ಕೂಡಲೇ ಮುಂಗಾರು ನೊಂದಣಿ ಮರು ಪ್ರಾಾರಂಭ ಮಾಡಿ ಮುಂಗಾರಿನಲ್ಲಿ ಜೋಳ ಬೆಳೆದ ರೈತರಿಗೆ ನ್ಯಾಾಯ ಒದಗಿಸಬೇಕು. ಬೇರೆ ಬೇರೆ ತಾಲ್ಲೂಕಿನ ರೈತ ನೊಂದಣಿ ಸಿಂಧನೂರಿನಲ್ಲಿ ಅತಿ ಹೆಚ್ಚು ಆಗಿದ್ದು, ಸಂಪೂರ್ಣ ತನಿಖೆ ನಡೆಸಿ ತಪ್ಪಿಿತಸ್ಥರ ವಿರುದ್ಧ ಕ್ರಮಜರುಗಿಸಬೇಕು ಎಂದು ಒತ್ತಾಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ನಾಗರಾಜ ಬಿಂಗಿ, ಪದಾಧಿಕಾರಿಗಳಾದ ನಿರುಪಾದೆಪ್ಪ ಅಡ್ಡಿಿ, ಯಮನಪ್ಪ ಪಗಡದಿನ್ನಿಿ, ರವಿ ಬಸ್ಸಾಾಪುರ ಇಜೆ, ಮುಖಂಡರಾದ ರಾಮುನಾಯಕ ಪುಲದಿನ್ನಿಿ, ಸಿದ್ದನಗೌಡ ಗೋನವಾರ, ಹಿರೇಲಿಂಗಪ್ಪ ಹಂಚಿನಾಳ, ಮಾಳಪ್ಪ ಪೂಜಾರಿ, ನಿಂಗಪ್ಪ ಬಿಂಗಿ, ದುರುಗಪ್ಪ ಸಂಗಾಪುರ ಇತರರು ಇದ್ದರು.
ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯಿಂದ ಮನವಿ ಜೋಳ ನೊಂದಣಿ, ಖರೀದಿ ಪ್ರಾರಂಭಿಸಲು ಆಗ್ರಹ

