ಸುದ್ದಿಮೂಲ ವಾರ್ತೆ ಮಸ್ಕಿ, ಜ.21:
ಕೇಂದ್ರ ಸರಕಾರದ ಭೇಟಿ ಬಚಾವೋ ,ಭೇಟಿ ಪಡಾವೋ ಯೋಜನೆಗೆ ಇಡೀ ಸಮಾಜವನ್ನೇ ಮುನ್ನಡೆಸುವ ಶಕ್ತಿಿಯಿದೆ ಎಂದು ಮಸ್ಕಿಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಪಂಪಾಪತಿ ಹೂಗಾರ ಅಭಿಪ್ರಾಾಯ ವ್ಯಕ್ತಪಡಿಸಿದರು.
ಮಸ್ಕಿಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಿ ಇಲಾಖೆಯಿಂದ ಬುಧವಾರ ನಡೆದ ಹೆಣ್ಣು ಮಕ್ಕಳನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಎಂಬ ಕಾರ್ಯಕ್ರಮದ ಲ್ಲಿ ಅವರು ಮಾತನಾಡಿದರು.
ಹೆಣ್ಣು ಸಂತಾನದ ಪ್ರಮಾಣ ಗಣನೀಯವಾಗಿ ಕಡಿಮೆಯಿದೆ. 1961 ರಲ್ಲಿ 1000 ಗಂಡುಗಳಿಗೆ 961 ಹೆಣ್ಣು ಮಕ್ಕಳಿದ್ದರು. ಆದರೆ, 2011 ರಲ್ಲಿ 1000 ಗಂಡುಗಳಿಗೆ 918 ಹೆಣ್ಣು ಮಕ್ಕಳಿದ್ದಾರೆಂಬ ಮಾಹಿತಿ ತಲ್ಲಣಗೊಳಿಸುತ್ತದೆ. ಹೀಗಾಗಿ ಗಂಡು, ಹೆಣ್ಣು ಸಂತಾನದ ಅನುಪಾತ ಸಾಕಷ್ಟು ವ್ಯತ್ಯಾಾಸ ಕಂಡು ಬರುತ್ತಿಿದ್ದು, ಇದರಿಂದ ಸಾಮಾಜಿಕವಾಗಿ, ಕೌಟುಂಬಿಕವಾಗಿ ಆಗುತ್ತಿಿರುವ ತೊಂದರೆ ತಪ್ಪಿಿಸಲು ಪ್ರಧಾನಿ ಇಂತಹ ಮಹತ್ವದ ಯೋಜನೆಯನ್ನು ಅನುಷ್ಠಾಾನಕ್ಕೆೆ ತಂದಿದ್ದಾರೆ. ಈ ಕುರಿತು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸಮಾಜಕ್ಕೆೆ ಜಾಗೃತಿ ಮೂಡಿಸಬೇಕು. ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಿ ಇಲಾಖೆಯ ಮೇಲ್ವಿಿಚಾರಕಿ ಶಿವಲೀಲಾ ಹಿರೇಮಠ. ಮಾತನಾಡಿ, ಗಂಡು, ಹೆಣ್ಣಿಿನ ಅನುಪಾತ ಅವಲೋಕಿಸಿಯಾದರೂ ನಾವು ಎಚ್ಚೆೆತ್ತುಕೊಳ್ಳಬೇಕಿದೆ. ಹೆಣ್ಣಿಿಗೆ ಹೆಣ್ಣೆೆ ಶತ್ರು ಆಗಬಾರದು. ತನಗೆ ಗಂಡು ಮಗುವೇ ಬೇಕು ಎನ್ನುವ ಆಸೆ ಬಿಡಬೇಕು. ಮನೆಯಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳನ್ನು ಸಮಾನವಾಗಿ ನೋಡುವ ಮನೋಭಾವ ಎಲ್ಲರಲ್ಲೂ ಮೂಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸುರೇಶ್ ಹರಸೂರು,ಮು ಗು ಮೋಹನ್ ಬಾವಿಮನಿ, ಜಿ ವೆಂಕಟೇಶ್,ಅಮರೇಶ ಪತ್ತಾಾರ,ಡಾ. ಅಮರೇಶ, ಶಶಿರೇಖಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ವಿದ್ಯಾಾರ್ಥಿನಿಯರು ಭಾಗಿಯಾಗಿದ್ದರು.
ಹೆಣ್ಣು ಮಗು ರಕ್ಷಿಸಿ, ಓದಿಸಿ ಕಾರ್ಯಕ್ರಮ

