ಸುದ್ದಿಮೂಲ ವಾರ್ತೆ ರಾಯಚೂರು, ಜ.21:
ಆನಂದ ಮಾರ್ಗ ಪ್ರಚಾರಕ ಸಂಘದಿಂದ ಜ. 23, 24 ಹಾಗೂ 25ರಂದು ನಗರದ ಬೂಬ್ ಭವನದಲ್ಲಿ ಧ್ಯಾಾನ ಯೋಗ ಸಾಧನಾ ಶಿಬಿರ ಹಮ್ಮಿಿಕೊಳ್ಳಲಾಗಿದೆ ಎಂದು ಆನಂದ ಮಾರ್ಗ ಪ್ರಚಾರಕ ಸಂಘದ ತರಬೇತುದಾರರಾದ ಆಚಾರ್ಯ ಕೃಪಾಮಯಾನಂದ ಅವಧೂತರು ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಇಂದಿನ ಒತ್ತಡ ಭರಿತ ಜೀವನದಲ್ಲಿ ಮಾನಸಿಕ ಶಾಂತಿ, ದೈಹಿಕ ಆರೋಗ್ಯ ಹಾಗೂ ಆತ್ಮೋೋನ್ನತಿಗೆ ಧ್ಯಾಾನ ಮತ್ತು ಯೋಗ ಅತ್ಯಂತ ಅಗತ್ಯವಾಗಿದ್ದು, ಈ ಉದ್ದೇಶದಿಂದ ಮೂರು ದಿನಗಳ ಉಚಿತ ಸಾಧನಾ ಶಿಬಿರ ಆಯೋಜಿಸಲಾಗಿದೆ ಉಚಿತವಾಗಿರುವ ಈ ಶಿಬಿರದಲ್ಲಿ ಎಲ್ಲರೂ ಭಾಗವಹಿಸಲು ಮನವಿ ಮಾಡಿದರು.
ಶಿಬಿರದಲ್ಲಿ ಅನುಭವಿ ಯೋಗಗುರುಗಳಿಂದ ಧ್ಯಾಾನ ವಿಧಾನ, ಪ್ರಾಾಣಾಯಾಮ, ಯೋಗಾಭ್ಯಾಾಸ ಹಾಗೂ ಜೀವನ ಮೌಲ್ಯಗಳ ಕುರಿತು ಮಾರ್ಗದರ್ಶನ ನೀಡಲಾಗುವುದು. ವಿದ್ಯಾಾರ್ಥಿಗಳು, ಉದ್ಯೋೋಗಸ್ಥರು, ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದವರು ಭಾಗವಹಿಸಬಹುದಾಗಿದೆ.
ರಾಜ್ಯದ ಹಲವು ಜಿಲ್ಲೆಗಳ 150 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಲಿದ್ದು ಅವರಿಗೆ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆೆ ಕಲ್ಪಿಿಸಲಾಗಿದೆ . ಈ ಹಿನ್ನೆೆಲೆಯಲ್ಲಿ ನಗರದ ಸಾರ್ವಜನಿಕರು ಹೆಚ್ಚಿಿನ ಸಂಖ್ಯೆೆಯಲ್ಲಿ ಪಾಲ್ಗೊೊಂಡು ಶಿಬಿರದ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಿಯಲ್ಲಿ ಆಚಾರ್ಯ ಮನೋಜಿತಾನಂದ ಅವಧೂತರು , ರಸಸಿದ್ಧಾಾನಂದ , ಸುರೇಂದ್ರ ಕುಮಾರ ಬುಕ್ತಿಿ , ದಯಾನಂದ , ಬಸವರಾಜ್ ಬಿನ್ನಾಾಳ್, ಮದನಕುಮಾರ ಮಿತ್ರ ಇದ್ದರು.

