ಸುದ್ದಿಮೂಲ ವಾರ್ತೆ ಕವಿತಾಳ, ಜ.21:
ಮಕ್ಕಳಿಗೆ ಪ್ರಾಾಥಮಿಕ ಹಂತದಲ್ಲಿ ಉತ್ತಮ ಶಿಕ್ಷಣ ನೀಡಿದಲ್ಲಿ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಹೇಳಿದರು.
ಹಿರೇದಿನ್ನಿಿ ಗ್ರಾಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಾಟಿಸಿ ಶಾಸಕರು ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಕಲಿಕಾ ಉತ್ಸಾಾಹ ಹೆಚ್ಚುತ್ತದೆ ವಿದ್ಯಾಾರ್ಥಿಗಳು ಯಾವುದೇ ದುಶ್ಚಟಗಳಿಗೆ ಒಳಗಾಗದೆ ಉತ್ತಮ ಶಿಕ್ಷಣ ಪಡೆದು ತಂದೆ ತಾಯಿಗೆ ಮತ್ತು ಶಾಲೆಗೆ ಕೀರ್ತಿ ತರುವ ಕೆಲಸ ಮಾಡಬೇಕು ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಗೆ ಹೋಗಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಇರಕಲ್ ಮಠದ ಬಸವ ಪ್ರಸಾದ ಸ್ವಾಾಮೀಜಿ ಮತ್ತು ನಿರೂಪಾದೆಪ್ಪ ವಕೀಲ ಮಾತನಾಡಿದರು. ಭಾಗ್ಯವಂತಿ ಅಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪಿ ಎಸ್ ಐ ಗುರುಚಂದ್ರ ಯಾದವ, ಅಯ್ಯಮ್ಮ ಯಲ್ಲಪ್ಪ ಅರಳಿಬಂಡಿ, ಪಂಪಾಪತಿ ಹೂಗಾರ, ಮಂಜುನಾಥ ಹಾಲಾಪುರು, ಕಳಕಪ್ಪ ಆದಿಮನಿ, ಅರವಿಂದ ಪಾಟೀಲ್, ಚನ್ನವಿರ ಜೋತಾನ, ಈರಪ್ಪ ಡಿ, ಆದೇಶ, ಬಾಲಾಸ್ವಾಾಮಿ, ಹನುಮಂತರಾಯ, ಶಿವಪ್ಪ, ಪರಶುರಾಮ ಹೆಗ್ಗಡದಿನ್ನಿಿ, ನಾಗರಾಜ ನೀಲಗಲ್, ಪರಸಪ್ಪ ನೀಲಗಲ್, ಬಸವರಾಜ ಮಾನ್ವಿಿ, ಈರಣ್ಣ ಮಾನ್ವಿಿ, ಮುಖ್ಯ ಗುರು ಪ್ರಸನ್ನಯ್ಯ, ರೇಣುಕಾ ರಾಜ, ಹಂಪಯ್ಯ, ತಿಮ್ಮಪ್ಪ, ನಾಗಮ್ಮ, ವಿಜಯ ಲಕ್ಷ್ಮಿಿ ಉಪಸ್ಥಿಿತರಿದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರಾಥಮಿಕ ಹಂತವೇ ಶಿಕ್ಷಣಕ್ಕೆ ಬುನಾದಿ- ತುರ್ವಿಹಾಳ

