ಸುದ್ದಿಮೂಲ ವಾರ್ತೆ ಬಳಗಾನೂರು, ಜ.21:
ಪಟ್ಟಣದಲ್ಲಿ ಮನೆಗಳಿಗೆ ನುಗ್ಗಿಿ ಟಿವಿ ,ಕನ್ನಡಿ, ವಾಹನಗಳ ಕಿಟಕಿ ಕನ್ನಡಿಗಳನ್ನು ಒಡೆದು ಹಾಕಿ ಮೊಬೈಲ್ ಕಸಿದುಕೊಂಡು ಮನುಷ್ಯರ ಮೇಲೆ ದಾಳಿಮಾಡುತ್ತಿಿದ್ದ ಕೋತಿಯನ್ನು ಪಪಂ ಅಧಿಕಾರಿಗಳು ನಿಯೋಜನೆ ಮಾಡಿದ ಬದಾಮಿತಾಲ್ಲೂಕಿಚೋಳಚಗುಡ್ಡದ ವೀರಯ್ಯ ಎಂ.ಸರಗಣಾಚಾಮಠ ಅವರ ನೇತೃತ್ವದ ತಂಡ ಸೆರೆ ಹಿಡಿಯುವಲ್ಲಿ ಯಶಸ್ವಿಿಯಾಗಿದ್ದಾಾರೆ.
ಪಪಂ ಮುಖ್ಯಾಾಧಿಕಾರಿ ಗೋಪಾಲನಾಯ್ಕ್ ಮತ್ತು ಇತರೆ ಪಪಂ ಅಧಿಕಾರಿಗಳೊಂದಿಗೆ ತಂಡ ಆಗಮಿಸಿ ತಂತ್ರಗಾರಿಕೆ ರೂಪಿಸಿ ಕೋತಿಯನ್ನು ಹಿಡಿಯುವಲ್ಲಿ ಯಶಸ್ವಿಿಯಾದರು.
ಈ ಸಂದರ್ಭದಲ್ಲಿ ಪಪಂ ಮುಖ್ಯಾಾಧಿಕಾರಿ ಗೋಪಾಲನಾಯ್ಕ ಎಸ್ಡಿಎ ತಿರುಪತಿ, ಆರೋಗ್ಯ ನಿರೀಕ್ಷಕ ರಾಮನರೇಶಯಾದವ,ಕರವಸೂಲಿಗಾರ ರುದ್ರಮುನಿ, ಈಶ್ವರಯ್ಯಸ್ವಾಾಮಿ, ರವಿಕುಮಾರ, ಪೌರಕಾರ್ಮಿಕರಾದ ಸುರೇಶ, ರಮೇಶ ಮತ್ತಿಿತರರು ಇದ್ದರು.
ಕೋತಿ ಸೆರೆ : ನಿಟ್ಟುಸಿರು ಬಿಟ್ಟ ಜನತೆ

