ಸುದ್ದಿಮೂಲ ವಾರ್ತೆ ಸಿಂಧನೂರು, ಜ.21:
ನಗರದ ಸಂಕೇತ ಶಿಕ್ಷಣ ಸಂಸ್ಥೆೆಯ ಫಿನಿಕ್ಸ್ ಶಾಲೆಯ ನರ್ಸರಿ ವಿಭಾಗದ ವಿದ್ಯಾಾರ್ಥಿನಿ ಶ್ರೀರಕ್ಷಾ ಇವರು ಇಂಡಿಯಾ ಬುಕ್ ಆ್ ರೆಕಾರ್ಡ್ಸ್ನ ಅಚೀವ್ಮೆಂಟ್ ಅವಾರ್ಡ್ ಗೌರವಕ್ಕೆೆ ಭಾಜನಳಾಗಿ ಶಿಕ್ಷಣ ಸಂಸ್ಥೆೆಗೆ ಕೀರ್ತಿ ತಂದಿದ್ದಾಾಳೆ.
ನಗರದ ಆದರ್ಶ ಕಾಲೋನಿಯ ಪ್ರಶಾಂತ ಕುಲಕರ್ಣಿ ಹಾಗೂ ಲಕ್ಷ್ಮೀ ಕುಲಕರ್ಣಿ ಇವರ ಪುತ್ರಿಿ ಶ್ರೀರಕ್ಷಾ ವಿಶಿಷ್ಟ ಸಾಧನೆ ಮಾಡಿದ್ದಾಾಳೆ. ಗ್ರಹಗಳ ಹೆಸರು, ಜಗತ್ತಿಿನ 7 ಭೂಖಂಡಗಳ ಹೆಸರು, ಭಾರತದ ನೆರೆಹೊರೆಯ ದೇಶಗಳು, ದೇಶದ 28 ರಾಜ್ಯಗಳು, ಅವುಗಳ ರಾಜಧಾನಿ, 8 ಕೇಂದ್ರಾಾಡಳಿತ ಪ್ರದೇಶಗಳು, ಭಾರತದ ರಾಷ್ಟ್ರಧ್ವಜ, ರಾಷ್ಟ್ರಲಾಂಛನ, ರಾಷ್ಟ್ರಗೀತೆ ಹಾಗೂ ಅದರ ರಚನೆಕಾರರು, ರಾಷ್ಟ್ರದ ಹಾಡು, ರಾಷ್ಟ್ರೀಯ ಪ್ರಾಾಣಿ, ರಾಷ್ಟ್ರ ಪಕ್ಷಿ, ರಾಷ್ಟ್ರೀಯ ನದಿ, ರಾಷ್ಟ್ರೀಯ ಹಣ್ಣು, ಕೇಂದ್ರ ಸರಕಾರದ ಪ್ರಮುಖರ ಹೆಸರುಗಳು, ರಾಜ್ಯ ಸರಕಾರದ ಪ್ರಮುಖರ ಹೆಸರುಗಳು, ಸ್ಥಳೀಯ ಶಾಸಕರು, 12 ಬಣ್ಣಗಳ ಹೆಸರು, ಕಂಪ್ಯೂೂಟರ್ನ 5 ಭಾಗಗಳು, ಕರ್ನಾಟಕದ 24 ಜಿಲ್ಲೆೆಗಳ ಹೆಸರು, ಕರ್ನಾಟಕದ 8 ಜನ ಜ್ಞಾಾನಪೀಠ ಪ್ರಶಸ್ತಿಿ ಪುರಸ್ಕೃತ ಸಾಹಿತಿಗಳ ಹೆಸರು, ಕನ್ನಡದ 12 ಮಾಸಗಳು ಹಾಗೂ ವಾರಗಳು, ಇಂಗ್ಲಿಿಷಿನ ಕ್ಯಾಾಲೆಂಡರ್ ತಿಂಗಳು ಹಾಗೂ ವಾರಗಳು, ಸಂಸ್ಕೃತದ ಶ್ಲೋೋಕಗಳು-ಅಂಕಿಗಳು-ವಾರಗಳು ಹೀಗೆ ಹಲವಾರು ವಿಷಯಗಳ ಮಾಹಿತಿಗಳನ್ನು ನಿಖರವಾಗಿ ನಿರರ್ಗಳವಾಗಿ ಪ್ರಸ್ತುತಪಡಿಸಿ ತನ್ನ ಪ್ರತಿಭೆ ಮೆರೆದಿದ್ದಾಾಳೆ.
ಶ್ರೀರಕ್ಷಾಳಿಗೆ ಅವರ ತರಗತಿ ಶಿಕ್ಷಕಿ ಕೈರೂನಬೇಗಂ, ತಾಯಿ ಲಕ್ಷ್ಮೀ ಕುಲಕರ್ಣಿ ಹಾಗೂ ಪ್ರತಿಭಾ ಲಕ್ಷ್ಮಣರಾವ ಕುಲಕರ್ಣಿ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ್ದಾಾರೆ. ವಿದ್ಯಾಾರ್ಥಿನಿಯ ಸಾಧನೆಗೆ ಸಂಸ್ಥೆೆಯ ಕಾರ್ಯದರ್ಶಿ ಎಸ್.ಅನಿಲ್ರಾಜ ಸಹಕಾರ ನೀಡಿ ಪ್ರೋೋತ್ಸಾಾಹಿಸಿದ್ದಾಾರೆ.
ಶ್ರೀರಕ್ಷಾಗೆ ಇಂಡಿಯಾ ಬುಕ್ ಆ್ ರೆಕಾರ್ಡ್ಸ್ನ ಅಚೀವ್ಮೆಂಟ್ ಅವಾರ್ಡ್

