ಸುದ್ದಿಮೂಲ ವಾರ್ತೆ ಬೀದರ್, ಜ.21:
ಮಾಜಿ ಸೈನಿಕರ ವಿವಿಧ ಸಮಸ್ಯೆೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಭೂ ಸೇನೆಯ ಕರ್ನಾಟಕ, ಕೇರಳ ಸಬ್ ಏರಿಯಾ ಲೆಫ್ಟಿಿನೆಂಟ್ ಕರ್ನಲ್ ಅನಿರುದ್ಧ್ ಭರವಸೆ ನೀಡಿದರು.
ನಗರದ ಏರ್ೆರ್ಸ್ ಸ್ಟೇಷನ್ನ ಆಡಿಟೋರಿಯಂನಲ್ಲಿ ಈಚೆಗೆ ನಡೆದ ಕೆ.ಕೆ. ಸಬ್ ಏರಿಯಾ ಮಾಜಿ ಸೈನಿಕರ ಸಭೆಯಲ್ಲಿ ಅವರು ಮಾತನಾಡಿದರು.
ವೈದ್ಯಕೀಯ ವೆಚ್ಚದ ಮರು ಪಾವತಿ, ಕ್ಯಾಾಂಟೀನ್ ಮದ್ಯ ನೀಡಿಕೆ ಹಾಗೂ ಪಿಂಚಣಿ ಪಾವತಿಯಲ್ಲಿ ಮಾಜಿ ಸೈನಿಕರಿಗೆ ಆಗುತ್ತಿಿರುವ ಸಮಸ್ಯೆೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆೆ ತರಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾಜಿ ಸೈನಿಕರು ಆರು ತಿಂಗಳು ಕಳೆದರೂ ಕೇಂದ್ರ ಸರ್ಕಾರ ಔಷಧಿ ಖರೀದಿಯ ಹಣ ಸಂದಾಯ ಮಾಡಿಲ್ಲ. ಬೀದರ್ನ ಕ್ಯಾಾಂಟೀನ್ನಲ್ಲಿ ಎರಡು ತಿಂಗಳ ಕೋಟಾದ ಮದ್ಯ ಏಕಕಾಲಕ್ಕೆೆ ನೀಡಲಾಗುತ್ತಿಿಲ್ಲ. ಮದ್ಯವನ್ನು ತೆರೆದು ಕೊಡಲಾಗುತ್ತಿಿದೆ. ಪಿಂಚಣಿ ಹಣ ಸರಿಯಾದ ಸಮಯಕ್ಕೆೆ ಸಂದಾಯ ಆಗುತ್ತಿಿಲ್ಲ. ಇದರಿಂದಾಗಿ ಮಾಜಿ ಸೈನಿಕರ ಕುಟುಂಬಗಳು ತೀವ್ರ ತೊಂದರೆ ಅನುಭವಿಸುತ್ತಿಿವೆ ಎಂದು ಮಾಜಿ ಸೈನಿಕರು ಸಭೆಯ ಗಮನ ಸೆಳೆದರು.
ಮೇಲಾಧಿಕಾರಿಗಳ ಜತೆ ಚರ್ಚೆ ನಡೆಸಿ ಸಮಸ್ಯೆೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಮಂಡಿಸಿದರು.
ಅಖಿಲ ಕರ್ನಾಟಕ ಬೀದರ್ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ರಾಜಕುಮಾರ ಲದ್ದೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಾಬುರಾವ್ ಕುಂಬಾರವಾಡ, ಎ.ಎಂ. ಶಾಮಸಿಂಗ್, ಸುಬೆದಾರ್ಗಳಾದ ದಿಲೀಪ್ ಯಾದವ್, ಸುರೇಶ್, ರಘುರಾಮ್, ಪ್ರಮುಖರಾದ ವಿಠ್ಠಲರಾವ್ ಕಡೆಪುರ, ರಮೇಶ ಮೂಲಗೆ ಮಾರುತಿ ಬಿರಾದಾರ, ವಿಲಾಸರಾವ್, ಶಂಕರ ಸಾವಳೆ ಇದ್ದರು. ಜಿಲ್ಲೆಯ 150 ಮಾಜಿ ಸೈನಿಕರು ಪಾಲ್ಗೊೊಂಡಿದ್ದರು.
ಲೆಫ್ಟಿಿನೆಂಟ್ ಕರ್ನಲ್ ಅನಿರುದ್ಧ್ ಭರವಸೆ ಮಾಜಿ ಸೈನಿಕರ ಸಮಸ್ಯೆ ಶೀಘ್ರ ಪರಿಹಾರ

