ಸುದ್ದಿಮೂಲ ವಾರ್ತೆ ಬೆಂಗಳೂರು, ಜ.22:
ಮಾಜಿ ಸಚಿವ ಭೀಮಣ್ಣ ಖಂಡ್ರೆೆ ಧೈರ್ಯವಂತ ರಾಜಕಾರಣಿ. ಅನಿಸಿದ್ದನ್ನು ಯಾವುದೇ ಭೀತಿ ಹಾಗೂ ಮುಲಾಜಿಲ್ಲದೆ ಹೇಳುತ್ತಿಿದ್ದರು. ಅವರು ವ್ಯವಸ್ಥೆೆಯ ವಿರೋಧಿಯಾಗಿದ್ದರು. ಯುವ ರಾಜಕಾರಣಿಗಳಿಗೆ ಅವರ ಸೈದ್ಧಾಾಂತಿಕ ನಿಲುವು ಮಾದರಿ ಎಂದು ವಿಧಾನ ಪರಿಷತ್ ಸದಸ್ಯರು ಬಣ್ಣಿಿಸಿದರು.
ಗುರುವಾರ ವಿಧಾನ ಪರಿಷತ್ನಲ್ಲಿ ಅಗಲಿದ ಮಾಜಿ ಸಚಿವ ಭೀಮಣ್ಣ ಖಂಡ್ರೆೆ ಅವರ ಸಂತಾಪ ಸೂಚನೆ ಕಲಾಪದಲ್ಲಿ ಪಾಲ್ಗೊೊಂಡು ಮಾತನಾಡಿದರು. ಪರಿಷತ್ತಿಿನ ಸಭಾ ನಾಯಕ ಸಚಿವ ಎನ್.ಎಸ್.ಭೋಸರಾಜು ಅವರು ಸಂತಾಪ ಸೂಚಕ ಮಂಡಿಸಿದರು.
ಭೀಮಣ್ಣ ಖಂಡ್ರೆೆ ಅವರು 1925ರ ನವೆಂಬರ್ 1ರಂದು ಬೀದರ್ನ ಭಾಲ್ಕಿಿಯಲ್ಲಿ ಜನಿಸಿ 102 ವರ್ಷಗಳ ತುಂಬು ಜೀವನ ನಡೆಸಿದರು. ಜ.16 2026ರಂದು ಮೃತಪಟ್ಟರು. ಕಾನೂನು ಪದವಿ ಪಡೆದ ಇವರು ವಕೀಲ ವೃತ್ತಿಿ ನಡೆಸುತ್ತಿಿದ್ದರು. ಸ್ವಾಾತಂತ್ರ್ಯ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪಾಲ್ಗೊೊಂಡು ಪ್ರಮುಖ ಪಾತ್ರ ವಹಿಸಿದ್ದರು. 1953ರಲ್ಲಿ ಭಾಲ್ಕಿಿ ಪುರಸಭೆ ಸದಸ್ಯರಾಗಿ ಗೆದ್ದು ಅಧ್ಯಕ್ಷರಾದರು. ಆ ಮೂಲಕ ಅವರು ರಾಜಕೀಯ ಜೀವನ ಪ್ರವೇಶಿಸಿದರು. ಭೀಮಣ್ಣ ಖಂಡ್ರೆೆ ಅವರು 1962, 1967, 1978 ಹಾಗೂ 1983ರಲ್ಲಿ ಭಾಲ್ಕಿಿ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆೆಯಾಗಿದ್ದರು. 1988ರಿಂದ 94 ಹಾಗೂ 1994ರಿಂದ 2000 ಅವಧಿಗೆ ಎರಡು ಭಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ವೀರಪ್ಪ ಮೊಯ್ಲಿಿ ಸಚಿವ ಸಂಪುಟದಲ್ಲಿ 1992ರಿಂದ 1994ರವರೆಗೆ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆೆ ಸ್ಥಾಾಪಿಸಿ ಗಡಿಭಾಗದ ಮಕ್ಕಳಿಗೆ ಶಿಕ್ಷಣ ನೀಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇಂತ ಧೀಮಂತ ನಾಯಕನನ್ನು ರಾಜ್ಯ ಕಳೆದುಕೊಂಡಿದೆ ಎಂದು ಅವರು ಹೇಳಿದರು.
ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ ಭೀಮಣ್ಣ ಖಂಡ್ರೆೆ ತುಂಬಾ ಧೈರ್ಯವಂತರು ವಿಧಾನಸಭೆ ಕಲಾಪದಲ್ಲಿ ಅವರು ಹಾವನೂರು ವರದಿ ಹರಿದು ಹಾಕಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಆದರೆ ಬಡವರ ಪರ ನಿಲ್ಲುತ್ತಿಿದ್ದರು. ವ್ಯವಸ್ಥೆೆಯನ್ನು ಮುಲಾಜಿಲ್ಲದೆ ಟೀಕಿಸುತ್ತಿಿದ್ದರು ಎಂದರು.
ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಭೀಮಣ್ಣ ಖಂಡ್ರೆೆ ಸಿದ್ಧಾಾಂತ ಬದ್ಧ ರಾಜಕಾರಣಿ. ಎಂತ ಕಠಿಣ ಸ್ಥಿಿತಿಯಲ್ಲೂ ಅವರು ಸಿದ್ಧಾಾಂತವನ್ನು ಬಿಟ್ಟುಕೊಡುತ್ತಿಿರಲಿಲ್ಲ. ನಾನು ಯುವ ಕಾಂಗ್ರೆೆಸ್ ಮುಖಂಡನಾಗಿದ್ದ ವೇಳೆ ಅವರು ಸಾರಿಗೆ ಸಚಿವರಾಗಿದ್ದರು. ಆಗ ಬಸ್ ಪಾಸ್ ದರ ಏರಿಕೆಯಾಗಿತ್ತು. ನಾನು ಅವರನ್ನು ಭೇಟಿ ಮಾಡಿ ದರ ಇಳಿಸುವಂತೆ ಮನವಿ ಮಾಡಿದ್ದೆ. ಸ್ಥಳದಲ್ಲೇ ಅವರು ಬಸ್ ಪಾಸ್ ದರ ಇಳಿಸಿ ವಿದ್ಯಾಾರ್ಥಿಗಳ ನೆರವಿಗೆ ಬಂದಿದ್ದರು ಎಂದರು.
ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಮಾತನಾಡಿ ಭೀಮಣ್ಣ ಖಂಡ್ರೆೆ ಅವರು ನಮಗೆಲ್ಲ ಆದರ್ಶವಾಗಿದ್ದರು. ಯುವ ರಾಜಕಾರಣಿಗಳಿಗೆ ಅವರು ಯಾವತ್ತೂ ಆದರ್ಶ. ಅವರ ಧೈರ್ಯ, ನಿಲುವು ಎಲ್ಲರಿಗೂ ಇಷ್ಟವಾಗುತ್ತಿಿತ್ತು. ಉರ್ದು ಮಿಶ್ರಿತ ಕನ್ನಡ ಮಾತನಾಡುವುದನ್ನು ಕೇಳಲು ಸೊಗಸು ಎಂದು ಬಣ್ಣಿಿಸಿದರು.
ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಾಮಿ ಅವರು ಮಾತನಾಡಿ, ಭೀಮಣ್ಣ ಖಂಡ್ರೆೆ ಕೊನೆವರೆಗೂ ಖಾದಿಯನ್ನು ಬಳಸಿ ಸರಳವಾಗಿ ಜೀವಿಸಿದರು. ಖಾದಿ ಬಿಟ್ಟರೆ ಅವರು ಬಳಸುತ್ತಿಿದ್ದದ್ದು ರೇಷ್ಮೆೆ ವಸವನ್ನು ಅವರು ರೇಷ್ಮೆೆಯ ಕೋಟು ಧರಿಸಿ ವಿಧಾನಸಭೆ ಬರುತ್ತಿಿದ್ದದ್ದು ಎಲ್ಲರನ್ನು ಸೆಳೆಯುತ್ತಿಿತ್ತು. ಇವರ ಉಡುಗೆಯನ್ನು ಮಾಜಿ ಸಿಎಂ ದಿ.ಎಸ್.ಎಂ.ಕೃಷ್ಣ ಕೂಡ ಹೊಗಳುತ್ತಿಿದ್ದರು ಎಂದರು.
ವಿಧಾನ ಪರಿಷತ್ನಲ್ಲಿ ದಿ. ಭೀಮಣ್ಣ ಖಂಡ್ರೆ ಅವರಿಗೆ ಸಂತಾಪ ಭೀಮಣ್ಣ ಖಂಡ್ರೆ ಧೈರ್ಯವಂತ ರಾಜಕಾರಣಿ

