ಸುದ್ದಿಮೂಲ ವಾರ್ತೆ ಬೆಂಗಳೂರು, ಜ.22:
ರಾಜ್ಯದ ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆೆ, ವಿಧಾನಸಭೆಯ ಮಾಜಿ ಸದಸ್ಯರಾದ ಕೆ.ಲಕ್ಕಣ್ಣ ಮತ್ತು ವಿಶ್ವ ವಿಖ್ಯಾಾತ ಪರಿಸರ ವಿಜ್ಞಾನಿ ಪ್ರೊೊ ಮಾಧವ ಗಾಡ್ಗೀಳ್ ಅವರ ನಿಧನಕ್ಕೆೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಸಂತಾಪ ಸಲ್ಲಿಸಲಾಯಿತು.
ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರಿಗೆ ಅಪಮಾನ ಮಾಡಲಾಗಿದೆ ಎಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದರೆ, ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ ಎಂದು ಕಾಂಗ್ರೆೆಸ್ ಶಾಸಕರು ಆರೋಪಿಸಿ ಪರಸ್ಪರ ಮಾತನಾಡುವ ವೇಳೆ ಉಂಟಾದ ಗದ್ದಲದ, ಗೊಂದಲದ ನಡುವೆಯೇ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸಂತಾಪ ಸೂಚನಾ ನಿರ್ಣಯವನ್ನು ಕೈಗೆತ್ತಿಿಕೊಂಡು ಕಳೆದ ವಿಧಾನಸಭೆಯ ಅಧಿವೇಶನದ ನಂತರ ಡಾ.ಭೀಮಣ್ಣ ಖಂಡ್ರೆೆ, ಕೆ.ಲಕ್ಕಣ್ಣ ಮತ್ತು ಪ್ರೊೊ ಮಾಧವ ಗಾದ್ಗೇಳ್ ಅವರ ನಿಧನವಾಗಿರುವುದನ್ನು ಅತ್ಯಂತ ವಿಷಾದದಿಂದ ಸದನಕ್ಕೆೆ ತಿಳಿಸಿದರು.
ಭೀಮಣ್ಣ ಖಂಡ್ರೆೆಯವರು ಭಾಲ್ಕಿಿಯಲ್ಲಿ ಜನಿಸಿದ್ದು, ವಕೀಲರಾಗಿಯೂ ಕಾರ್ಯ ನಿರ್ವಹಿಸಿದ್ದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆೆ ಸ್ಥಾಾಪಿಸುವ ಮೂಲಕ ಗಡಿಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಾಂದಿ ಹಾಡಿದ್ದರು. ನೂತನ ಅನುಭವ ಮಂಟಪ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಸ್ವಾಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಹೈದ್ರಾಾಬಾದ್ ಕರ್ನಾಟಕ ವಿಮೋಚನೆಗಾಗಿ ಹೋರಾಡಿದ್ದರು. ಏಕೀಕರಣದ ರೂವಾರಿಯಾಗಿದ್ದರು.
ವಿಧಾನಸಭೆಗೆ ನಾಲ್ಕು ಬಾರಿ ಆಯ್ಕೆೆಯಾಗಿದ್ದರು. ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದರು. ಕನ್ನಡ ಶಿಕ್ಷಣ, ಶರಣತ್ವದ ದೀಕ್ಷೆ ಪಡೆದಿದ್ದ ಖಂಡ್ರೆೆಯವರು ಉರ್ದು, ಪಾರ್ಸಿ, ಇಂಗ್ಲಿಿಷ್ ಭಾಷೆಯ ಮೇಲೆ ಹಿಡಿತ ಹೊಂದಿದ್ದರು. ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು 6 ದಶಕಗಳ ಕಾಲ ರೈತ ಚಳವಳಿ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ರಾಜ್ಯಕ್ಕೆೆ ಅಪಾರ ಕೊಡುಗೆ ನೀಡಿದ್ದಾರೆ. ಶತಾಯುಷಿ, ಸ್ವಾಾತಂತ್ರ್ಯಹೋರಾಟಗಾರ, ಸಜ್ಜನರಾಗಿದ್ದ ಖಂಡ್ರೆೆಯವರು ಜ.16 ರಂದು ನಿಧನ ಹೊಂದಿದ್ದಾರೆ ಎಂದರು.
ಕೆ.ಲಕ್ಕಣ್ಣ ಅವರು ಕುಣಿಗಲ್ ತಾಲ್ಲೂಕಿನ ಹೊಸೂರು ಗ್ರಾಾಮದಲ್ಲಿ ಜನಿಸಿದ್ದರು. ಕೈಗಾರಿಕೋದ್ಯಮಿಯಾಗಿದ್ದ ಅವರು 2 ಬಾರಿ ಬೆಂಗಳೂರು ನಗರ ಪಾಲಿಕೆ ಸದಸ್ಯರಾಗಿದ್ದರು. ಸಾಮಾಜಿಕ ಕಳಕಳಿ ಹೊಂದಿದ್ದ ಅವರು 1989 ರಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ 9ನೇ ವಿಧಾನಸಭೆಗೆ ಆಯ್ಕೆೆಯಾಗಿದ್ದರು. ಜ.11 ರಂದು ನಿಧನ ಹೊಂದಿದ್ದಾರೆ ಎಂದು ಸಭಾಧ್ಯಕ್ಷರು ತಿಳಿಸಿದರು.
ಮಾಧವ ಗಾಡ್ಗೀಳ್ ಅವರು ಪುಣೆಯಲ್ಲಿ ಜನಿಸಿದ್ದು, ಪರಿಸರಕ್ಕೆೆ ಸಂಬಂಧಿಸಿದಂತೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆೆಯಲ್ಲಿ ಪರಿಸರಿಕ ವಿಜ್ಞಾನ ಕೇಂದ್ರ ಮತ್ತು ಸೆಂರ್ಟ ಪಾರ್ಕ್ ಥಿಯೇರಿಟಿಕಲ್ ಸಂಸ್ಥೆೆಗಳನ್ನು ಸ್ಥಾಾಪಿಸುವ ಮೂಲಕ ಭಾರತದಲ್ಲಿ ಆಧುನಿಕ ಪರಿಸರ ಸಂಶೋಧನೆಗಳ ಅಧ್ಯಯನಕ್ಕೆೆ ನಾಂದಿ ಹಾಡಿದ್ದರು. ಹಲವಾರು ಸಂಸ್ಥೆೆಗಳನ್ನು ಸ್ಥಾಾಪಿಸಿ ಬೆಳೆಸಿದ್ದ ಅವರು ಪಶ್ಚಿಿಮ ಘಟ್ಟಗಳ ತಜ್ಞರ ಸಮಿತಿಯ ಅಧ್ಯಕ್ಷರಾಗಿದ್ದರು. 250ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ವಿಶ್ವಸಂಸ್ಥೆೆಯ ಅತ್ಯುನ್ನತ ಪ್ರಶಸ್ತಿಿ, ಚಾಂಪಿಯನ್ ಆ್ ದಿ ಅರ್ಥ್ ಗೌರವಕ್ಕೆೆ ಪಾತ್ರರಾಗಿದ್ದರು. ಪದಶ್ರೀ, ಪದಭೂಷಣ, ಶಾಂತಿ ಸ್ವರೂಪ್ ಭಟ್ನಾಾಗರ್, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿಿ, ಕನ್ನಡ ರಾಜ್ಯೋೋತ್ಸವ ಪ್ರಶಸ್ತಿಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಿಗಳಿಗೆ ಭಾಜನರಾಗಿದ್ದರು. ಗಾಡ್ಗೀಳ್ ಅವರು ಜ.7 ರಂದು ನಿಧನ ಹೊಂದಿದ್ದಾರೆ ಎಂದು ವಿಷಾದಿಸಿದರು.
ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿಿ ಸಿದ್ದರಾಮಯ್ಯ, ಭೀಮಣ್ಣ ಖಂಡ್ರೆೆ ಅವರು 103 ವರ್ಷಗಳ ಕಾಲ ಬದುಕಿದ್ದ ಶತಾಯುಷಿ. ನಾಲ್ಕು ಬಾರಿ ಶಾಸಕರಾಗಿದ್ದರು. ಮಹಾತಗಾಂಧೀಜಿಯಿಂದ ಪ್ರೇರಣೆ ಪಡೆದು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದ್ದರು ಎಂದು ಅವರ ಗುಣಗಾನ ಮಾಡಿದರು.ಅದೇ ರೀತಿ ಕೆ.ಲಕ್ಕಣ್ಣ ಹಾಗೂ ಪ್ರೊೊ. ಮಾಧವ ಗಾಡ್ಗೀಳ್ ಅವರ ಗುಣಗಾನ ಮಾಡಿ ಅವರ ನಿಧನಕ್ಕೆೆ ಸಂತಾಪ ಸೂಚಿಸಿದರು.
ಬಳಿಕ ವಿರೋಧಪಕ್ಷದ ನಾಯಕ ಆರ್.ಅಶೋಕ್, ಬಿ.ವೈ.ವಿಜಯೇಂದ್ರ, ಸಚಿವರಾದ ಶರಣಪ್ರಕಾಶ್ ಪಾಟೀಲ್, ಕೆ.ಜೆ.ಜಾರ್ಜ್, ಜಿ.ಟಿ.ದೇವೇಗೌಡ, ಎಂ.ಟಿ.ಕೃಷ್ಣಪ್ಪ, ಬಿ.ಆರ್.ಪಾಟೀಲ್, ಶರಣು ಸಲಗರ ಮೊದಲಾದ ಶಾಸಕರು ಪಕ್ಷಭೇದ ಮರೆತು ಸಂತಾಪ ಸೂಚಿಸಿದರು. ಅಗಲಿದ ಗಣ್ಯರ ಗೌರವಾರ್ಥ ಸದನದಲ್ಲಿ ಮೌನಾಚರಣೆ ಮಾಡುವ ಮೂಲಕ ಸಂತಾಪ ಸಲ್ಲಿಸಲಾಯಿತು.
ಭೀಮಣ್ಣ ಖಂಡ್ರೆ, ಗಾಡ್ಗೀಳ್, ಲಕ್ಕಪ್ಪಗೆ ವಿಧಾನಸಭೆಯಲ್ಲಿ ಶ್ರದ್ಧಾಾಂಜಲಿ

