ಸುದ್ದಿಮೂಲ ವಾರ್ತೆ ರಾಯಚೂರು,ಜ.22:
ಜನವರಿ 30ರಿಂದ ೆಬ್ರವರಿ 13ರವರೆಗೆ ರಾಯಚೂರು ಜಿಲ್ಲೆಯ ಪ್ರತಿ ಗ್ರಾಾಮಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನವು ಅಚ್ಚುಕಟ್ಟಾಾಗಿ ನಡೆಯಬೇಕು. ಈ ಬಗ್ಗೆೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಈ ಬಗ್ಗೆೆ ಜಿಲ್ಲೆಯ ಪ್ರೌೌಢಶಾಲಾ ವಿದ್ಯಾಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜನವರಿ 21ರ ಬುಧವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲ ಗ್ರಾಾಮಗಳಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ, ಗ್ರಾಾಮ ಪಂಚಾಯತ ಸದಸ್ಯರಿಗೆ ಸ್ತಿಿಥ-ಶಕ್ತಿಿ ಸಂಘ, ಯುವಕ-ಯುವತಿ ಸಂಘ, ವಿವಿಧ ಸಂಸ್ಥೆೆಗಳ ಸದಸ್ಯರಿಗೆ ಹೆಚ್ಚಿಿನ ಜಾಗೃತಿ ಮೂಡಿಸಬೇಕು ಎಂದರು.
ಈ ವೇಳೆ ಕುಷ್ಠರೋಗ ಜನಜಾಗೃತಿಯ ಭಿತ್ತಿಿಪತ್ರ ಬಿಡುಗಡೆ ಮಾಡಿದರು.

