ಸುದ್ದಿಮೂಲ ವಾರ್ತೆ ಮಾನ್ವಿ, ಜ.22:
ಮಾನ್ವಿಿ ತಾಲೂಕಿನ ಚೀಕಲಪರ್ವಿ ಗ್ರಾಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿಿ ಇಲಾಖೆ ಮೂಲಕ ನಿರ್ಮಾಣ ಮಾಡಿರುವ ಚೆಕ್ ಡ್ಯಾಾಂ ಹಾಗೂ ಸಿಸಿ ರಸ್ತೆೆ ಕಾಮಗಾರಿಗಳು ಅಕ್ರಮ ಹಾಗೂ ಕಳಪೆ ಮಟ್ಟದಿಂದ ಕೂಡಿದ್ದು ಈ ಬಗ್ಗೆೆ ತನಿಖೆ ನಡೆಸಿ ಗುತ್ತೇದಾರರು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಾಯಿಸಿ ಗ್ರಾಾಮಸ್ಥರು ಜನಸೇವಾ ೌಂಡೇಶನ್ ಪದಾಧಿಕಾರಿಗಳೊಂದಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜನಸೇವಾ ೌಂಡೇಶನ್ ಮಾನ್ವಿಿ ತಾಲೂಕಾಧ್ಯಕ್ಷ ತಾಜುದ್ದೀನ್ ಚೀಕಲಪರ್ವಿ ಅವರು ಗ್ರಾಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 2 ಚೆಕ್ ಡ್ಯಾಾಂ ನಿರ್ಮಿಸಲು ಅಂದಾಜು 2 ಕೋಟಿ ರೂ. ಅನುದಾನ ಮಂಜೂರಾಗಿದ್ದರೂ ವಾಸ್ತವದಲ್ಲಿ ಒಂದೇ ಚೆಕ್ ಡ್ಯಾಾಂ ಕಾಮಗಾರಿ ಮಾಡಿದ್ದು ಇನ್ನೊೊಂದು ಚೆಕ್ ಡ್ಯಾಾಂ ಕಾಮಗಾರಿ ಮಾಡದೇ ಇರುವ ಬಗ್ಗೆೆ ಗ್ರಾಾಮಸ್ಥರಲ್ಲಿ ಅನುಮಾನಗಳು ಮೂಡಿವೆ.
ಅನುದಾನ ಬಿಡುಗಡೆ ಹಾಗೂ ಕಾಮಗಾರಿ ಸ್ಥಿಿತಿಗತಿಯ ಕುರಿತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡದಿರುವುದು ಸಾರ್ವಜನಿಕ ಹಣದ ದುರುಪಯೋಗಕ್ಕೆೆ ಸ್ಪಷ್ಟ ಸೂಚನೆಯಾಗಿದೆ ಎಂದು ಆರೋಪಿಸಿದರು.
ಅದೇ ರೀತಿ ಗ್ರಾಾಮದಲ್ಲಿ ನಿರ್ಮಾಣಗೊಂಡಿರುವ ಸಿಸಿ ರಸ್ತೆೆಗಳಲ್ಲೂ ಅಗತ್ಯ ತಾಂತ್ರಿಿಕ ಮಾನದಂಡಗಳನ್ನು ಪಾಲಿಸದೇ ಕಾಮಗಾರಿ ಮಾಡಲಾಗಿದೆ. ರಸ್ತೆೆಗಳಲ್ಲಿ ಈಗಾಗಲೇ ಬಿರುಕುಗಳು ಕಾಣಿಸಿಕೊಂಡಿವೆ. ಕೆಲವೇ ದಿನಗಳಲ್ಲಿ ರಸ್ತೆೆಗಳು ಹಾಳಾಗುವ ಆತಂಕ ಇದ್ದು ಗುಣಮಟ್ಟದ ಕೊರತೆಯಿಂದ ಮುಂದಿನ ದಿನಗಳಲ್ಲಿ ಗ್ರಾಾಮಸ್ಥರಿಗೆ ತೊಂದರೆ ಉಂಟಾಗಲಿದೆ ಎಂದು ತಿಳಿಸಿದರು.
ಈ ಎಲ್ಲಾ ಕಾಮಗಾರಿಗಳ ಕುರಿತು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿಗಳ ಗುಣಮಟ್ಟದ ತಾಂತ್ರಿಿಕ ತಪಾಸಣೆ ನಡೆಸಬೇಕು. ಅನುದಾನ ಬಳಕೆಯ ಕುರಿತು ಮಾಹಿತಿ ನೀಡಿ ತನಿಖೆ ನಡೆಸಬೇಕು. ಹಾಗೂ ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳು ಹಾಗೂ ಗುತ್ತೇದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಮಾನದಂಡದಂತೆ ಮರು ಕಾಮಗಾರಿ ಕೈಗೊಳ್ಳುವಂತೆ ಸೂಕ್ತ ಆದೇಶ ನೀಡಬೇಕೆಂದು ಒತ್ತಾಾಯಿಸಿದ ಅವರು ಸಾರ್ವಜನಿಕ ಹಾಗೂ ಸರಕಾರದ ಹಣ ಜನರ ಹಿತಕ್ಕಾಾಗಿಯೇ ಬಳಸಲ್ಪಡಬೇಕು ಎಂಬ ಉದ್ದೇಶದಿಂದ ಈ ಮನವಿ ಸಲ್ಲಿಸಲಾಗಿದ್ದು ನ್ಯಾಾಯ ಒದಗಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿಳಂಬ ಮಾಡದೇ ತ್ವರಿತ ಕ್ರಮ ಕೈಗೊಳ್ಳಬೇಕೆಂದು ತಾಜುದ್ದೀನ್ ಚೀಕಲಪರ್ವಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕಾ ಸಂಘಟನಾ ಕಾರ್ಯದರ್ಶಿಗಳಾದ ಸಿದ್ದಾರೆಡ್ಡಿಿ, ಸಿದ್ದಪ್ಪ ಇತರರು ಉಪಸ್ಥಿಿತರಿದ್ದರು.
ತನಿಖೆಗೆ ಜನಸೇವಾ ೌಂಡೇಶನ್ ಮನವಿ ಚೀಕಲಪರ್ವಿಯಲ್ಲಿ ಚೆಕ್ ಡ್ಯಾಾಂ, ಸಿಸಿ ರಸ್ತೆ ಕಾಮಗಾರಿಗಳು ಕಳಪೆ

