ಸುದ್ದಿಮೂಲ ವಾರ್ತೆ ರಾಯಚೂರು, ಜ.22:
ಭೂ ಒಡೆತನ ಯೋಜನೆಯಡಿ ಒಂದು ವಾರದಲ್ಲಿ ಅರ್ಹ ಲಾನುಭವಿಗಳಿಗೆ ಜಮೀನು ವಿತರಣೆಗೆ ವಿವಿಧ ನಿಗಮಗಳು ಕ್ರಮವಹಿಸದೆ ಹೋದರೆ ಜ.26ರಂದು ಗಣರಾಜ್ಯೋೋತ್ಸವದಂದು ಜಿಲ್ಲಾಾ ಉಸ್ತುವಾರಿ ಸಚಿವರ ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ಎಂಆರ್ಎಚ್ಎಸ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಾಪುರಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್, ಕರ್ನಾಟಕ ಆದಿಜಾಂಬವ, ತಾಂಡ ಅಭಿವೃದ್ಧಿಿ ನಿಗಮ ಹಾಗೂ ಅಲೆಮಾರಿ ಅಭಿವೃದ್ಧಿಿ ನಿಗಮಗಳ ಅಡಿಯಲ್ಲಿ ಜಾರಿಯಾಗಬೇಕಾದ ಭೂ ಒಡೆತನ ಯೋಜನೆ ಕಳೆದ 7 ವರ್ಷಗಳಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸುವಲ್ಲಿ ಜಿಲ್ಲಾಡಳಿತದ ನಿರ್ಲಕ್ಷಕ್ಕೆೆ ಆಕ್ರೋೋಶ ವ್ಯಕ್ತಪಡಿಸಿದರು.
ಜಿಲ್ಲೆೆಯ ಭೂ ರಹಿತರು, ಕೂಲಿಕಾರರು ಅರ್ಜಿ ಸಲ್ಲಿಸಿ ಭೂಮಿಗಾಗಿ ಕಾಯುತ್ತಿಿದ್ದಾಾರೆ. ಪರಿಶೀಲಿಸಿ ಅರ್ಹರಿಗೆ ಹಂಚಿಕೆ ಮಾಡಲು ವ್ಯವಸ್ಥಾಾಪಕರು ಮನಸು ಮಾಡುತ್ತಿಿಲ್ಲಘಿ. ಸಭೆಯನ್ನೂ ಮಾಡುತ್ತಿಿಲ್ಲ ಈ ಬಗ್ಗೆೆ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಖುದ್ದು ಸಿಎಂ, ಸಮಾಜ ಕಲ್ಯಾಾಣ ಸಚಿವರು, ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾಾಧಿಕಾರಿ, ನಿಗಮ ವ್ಯವಸ್ಥಾಾಪಕರಿಗೂ ಪತ್ರ ಬರೆದು ಕ್ರಮ ವಹಿಸಲು ಹೇಳಿದರೂ ಸ್ಪಂದಿಸಿಲ್ಲ ಹೀಗಾಗಿ 26ರೊಳಗೆ ಕ್ರಮ ವಹಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಅವರ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಿಯಲ್ಲಿ ದಲಿತ, ಮಹಿಳಾ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷೆೆ ವಿಜಯರಾಣಿ, ಎಸ್.ತಿಮ್ಮಪ್ಪ, ಹನುಮೇಶ ಹೊಸಪೇಟೆ, ನಾಗರಾಜ ಕಲ್ಮಲಾ, ಕರಿಯಪ್ಪ ತೋಳ ದಿನ್ನಿಿ ಇದ್ದರು.

