ಸುದ್ದಿಮೂಲ ವಾರ್ತೆ ಸಿಂಧನೂರು, ಜ.22:
ಅಯೋಧ್ಯೆೆಯಲ್ಲಿ ನಿರ್ಮಾಣಗೊಂಡಿ ರುವ ರಾಮಮಂದಿರದಲ್ಲಿ ಬಾಲರಾಮನ ಮೂರ್ತಿಗೆ ಪ್ರಾಾಣ ಪ್ರತಿಷ್ಠಾಾಪನೆಯಾಗಿ ಎರಡು ವರ್ಷಗಳಾದ ಹಿನ್ನಲೆಯಲ್ಲಿ ಸಿಂಧನೂರಿನ ಛತ್ರಪತಿ ಶಿವಾಜಿ ಮಹಾರಾಜ್ ಸೇವಾ ಟ್ರಸ್ಟ್ನಿಂದ ನಗರದ ಬಸ್ ನಿಲ್ದಾಾಣದ ಮುಂದೆ ಅನ್ನಸಂತರ್ಪಣೆ ನಡೆಯಿತು.
ಬಾಲರಾಮನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಟ್ರಸ್ಟ್ ನ ಗೌರವಾಧ್ಯಕ್ಷ ಕೆ.ವಿರೂಪಾಕ್ಷಪ್ಪ ಮಾತನಾಡಿ, ಐದು ನೂರು ವರ್ಷಗಳ ಹಿಂದೂಗಳ ಹೋರಾಟದ ಪ್ರತಿಲವಾಗಿ ಎರಡು ವರ್ಷಗಳ ಹಿಂದೆ ರಾಮನ ಮೂರ್ತಿ ಪ್ರತಿಷ್ಠಾಾಪನೆ ಮಾಡಲಾಯಿತು. ರಾಮಮಂದಿರ ನಿರ್ಮಾಣವಾಗಬೇಕು ಎಂದು ಅನೇಕ ಹಿಂದೂಗಳು ಪ್ರಾಾಣತ್ಯಾಾಗ ಮಾಡಿದ್ದಾಾರೆ. ಅವರನ್ನು ನಾವೆಲ್ಲರು ನೆನೆಯಬೇಕು ಎಂದರು.
ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ, ಸಿದ್ರಾಾಮೇಶ ಮನ್ನಾಾಪುರ, ಸುರೇಶ ನೆಕ್ಕಂಟಿ, ಜೆಡಿಎಸ್ ಮುಖಂಡ ಅಜಯ ದಾಸರಿ, ಟ್ರಸ್ಟ್ನ ಅಧ್ಯಕ್ಷ ವಿಶ್ವನಾಥ್ ಚೌದರಿ, ಉಪಾಧ್ಯಕ್ಷರಾದ ಉಮೇಶ್ ರಾವ್, ಶಶಿಧರ್ ಹಿರೇಮಠ, ಮಹಾವೀರ್ ಜೈನ, ಪ್ರಧಾನ ಕಾರ್ಯದರ್ಶಿ ದೇವರಾಜ್ ಪಾಟೀಲ್, ಖಜಾಂಚಿ ಟಿ ಕಿಶೋರ್ಕುಮಾರ್, ಸಹ ಖಜಾಂಚಿ ನಾಗೇಶ್ ಪವಾರ್, ಕಾನೂನು ಸಲಹೆಗಾರ ಗಿರೀಶ್, ಕಾರ್ಯದರ್ಶಿ ಕೆ ಜಗದೀಶ್, ಸಹಕಾರ್ಯದರ್ಶಿ ರವಿಕುಮಾರ್, ಕಾರ್ಯಕಾರಣಿ ಸದಸ್ಯರಾದ ಸುಖರಾಜ್, ವಿನೋದ್ ಭಾಂಡ್ಗೆೆ, ಸುಭಾಷ್ ಪವಾರ್, ಮನೋಹರ್ ಹಿರೇಮಠ್, ವೀರೇಶ್ ನಾಯಕ್, ಶಿವಕುಮಾರ್, ಉದಯ್ ಕುಮಾರ್ ಬೇಲ್ದಾಾರ್ ಹಾಗೂ ಇತರರು ಇದ್ದರು.
ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಎರಡು ವರ್ಷ : ಅನ್ನಸಂತರ್ಪಣೆ

