ಸುದ್ದಿಮೂಲ ವಾರ್ತೆ ಸಿಂಧನೂರು, ಜ.22:
ತಾಲ್ಲೂಕಿನ ತಾತಪ್ಪಕ್ಯಾಾಂಪಿನಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಮಿಶ್ರತಳಿ ಆಕಳುಗಳ ಹಾಲು ಕರೆಯುವ ಸ್ಪರ್ಧೆ ಹಾಗೂ ಮಿಶ್ರತಳಿ ಕರುಗಳ ಪ್ರದರ್ಶನ ಸ್ಪರ್ಧೆ ನಡೆಯಿತು.
ಹಾಲು ಕರೆಯುವ ಸ್ಪರ್ಧೆಯಲ್ಲಿ ದೇವಪ್ಪ ಬೇರಗಿ ಪ್ರಥಮ, ಯಂಕಪ್ಪ ಬೇರ್ಗಿ ದ್ವಿಿತೀಯ ಹಾಗೂ ರಮೇಶ್ ಮುಧೋಳ್ ಮೂರನೇ ಸ್ಥಾಾನ ಪಡೆದುಕೊಂಡರು. ಮಿಶ್ರ ತಳಿ ಕರುಗಳ ಪ್ರದರ್ಶನ ಸ್ಪರ್ಧೆಯಲ್ಲಿ ಭೀಮಣ್ಣ ವಿರುಪಾಪುರ ಪ್ರಥಮ ಸ್ಥಾಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಆಡಳಿತ ಮುಖ್ಯ ಪಶು ವೈದ್ಯಾಾಧಿಕಾರಿ ಡಾ.ಶರಣೆಗೌಡ ಪಾಟೀಲ್, ಮುಖ್ಯ ಪಶು ವೈದ್ಯಾಾಧಿಕಾರಿಗಳಾದ ಡಾ.ರವೀಂದ್ರನಾಥ್ ಸರ್ಕಾರ್, ಹಾಗೂ ಡಾ.ಅಖಿಲ್ ಜೆ.ಎಚ್, ಕೃತಕ ಗರ್ಭಧಾರಣ ಕಾರ್ಯಕರ್ತರಾದ ಅಭಿಜಿತ್ ಬಾಲ, ಸುಮನ್ ಗೇನ ಹಾಗೂ ಅಪ್ಪಾಾಜಿ ನಾಯಕ್ ಹಾಗೂ ಕ್ಯಾಾಂಪಿನ ಮುಖಂಡರು ಉಪಸ್ಥಿಿತರಿದ್ದರು.
ತಾತಪ್ಪ ಕ್ಯಾಾಂಪಿನಲ್ಲಿ ಮಿಶ್ರತಳಿ ಆಕಳ ಹಾಲು ಕರೆಯುವ ಸ್ಪರ್ಧೆ

