ಸುದ್ದಿಮೂಲ ವಾರ್ತೆ ಮುದಗಲ್, ಜ.22:
ಸಮೀಪದ ಹುನೂರು ಗ್ರಾಾಮದ ಶ್ರೀ ಕ್ಷೇತ್ರ ಅಮ್ಮನಕಟ್ಟಿಿಯ ಸಾಧ್ವಿಿ ಶಿರೋಮಣಿ ತುರಡಗಿ ತಿಮ್ಮಮ್ಮನವರ 213ನೇ ಆರಾಧನಾ ಮಹೋತ್ಸವ ಸೋಮವಾರ ಅತ್ಯಂತ ಶ್ರದ್ಧಾಾ-ಭಕ್ತಿಿಯಿಂದ ಜರುಗಿತು.
ಬೆಳಿಗ್ಗೆೆ ತುರಡಗಿ ಗ್ರಾಾಮದಿಂದ ಪಲ್ಲಕ್ಕಿಿಯೊಂದಿಗೆ ಶ್ರೀ ಸಾಧ್ವಿಿ ಶಿರೋಮಣಿ ತುರಡಗಿ ತಿಮ್ಮಮ್ಮನವರನ್ನು ಹರಿನಾಮ ಕೀರ್ತನೆ ಹಾಗೂ ವಿವಿಧ ವಾದ್ಯಗಳು, ಬಾಜಾ ಭಜಂತ್ರಿಿ ಮಂಡಳಿಗಳ ವೈಭವದೊಂದಿಗೆ ಹುನೂರು ಗ್ರಾಾಮದ ಮೂಲಕ ಶ್ರೀ ಕ್ಷೇತ್ರ ಅಮ್ಮನಕಟ್ಟೆೆಗೆ ತರಲಾಯಿತು.
ನಂತರ ಲೋಕಕಲ್ಯಾಾಣಾರ್ಥ ಪವಮಾನ ಹೋಮ, ಭಾಗವತ ಪ್ರವಚನ, ಮಹಾಪೂಜೆ, ನೈವೇದ್ಯ, ಮಹಾಮಂಗಳಾರತಿ, ತೀರ್ಥ ಪ್ರಸಾದ ಜರುಗಿತು.
ಕಾರ್ಯಕ್ರಮದಲ್ಲಿ ಮಠದ ಪಂಚಾಂಗ ಲೋಕಾರ್ಪಣೆ ಮಾಡಿದ ಶ್ರೀ ಮತ್ ಕಣ್ವ ಮಠಾಧೀಶ ಶ್ರೀವಿದ್ಯಾಾಕಣ್ವ ವಿರಾಜತೀರ್ಥ ಶ್ರೀಪಾದಂಗಳು ಆಶೀರ್ವಚನ ನೀಡಿದರು.
ಪಂಚಾಂಗ ಒಂದು ದಿನ ಓದುವುದಲ್ಲ, ಆಯಾ ಕಾಲಕ್ಕೆೆ ವೃತ, ನಿಯಮ, ಧಾರ್ಮಿಕ ಆಚರಣೆ, ಹಬ್ಬ ಹರಿದಿನಗಳನ್ನು ಆಚರಿಸಬೇಕು. ಸಂಧ್ಯಾಾವಂದನೆಗೆ ಪಂಚಾಂಗ ನೋಡಿ ದಿನದ ಮಹತ್ವ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಭಕ್ತರು ದೀಡ್ ನಮಸ್ಕಾಾರ, ಮುಡುಪು, ಹರಕೆ ತೀರಿಸಿ ಅಮ್ಮನ ಕೃಪೆಗೆ ಪಾತ್ರರಾದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ಸನ್ಮಾಾನಿಸಲಾಯಿತು.
ಜಾತ್ರಾಾ ಮಹೋತ್ಸವಕ್ಕೆೆ ರಾಜ್ಯ-ಹೊರರಾಜ್ಯ ಸೇರಿದಂತೆ ಕಿಡದೂರು, ಹುನೂರು, ತುರಡಗಿ ಹಾಗೂ ಸುತ್ತಮುತ್ತಲಿನ ಗ್ರಾಾಮದ ಸಹಸ್ರಾಾರು ಭಕ್ತರು ಅಮ್ಮನ ಜಾತ್ರಾಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.
ಹುನೂರು : ಸಾಧ್ವಿ ಶಿರೋಮಣಿ ತಿಮ್ಮಮ್ಮನ ಆರಾಧನೆ ಮಹೋತ್ಸವ

