ಸುದ್ದಿಮೂಲ ವಾರ್ತೆ ರಾಯಚೂರು, ಜ.24:
ರಾಯಚೂರಿಗೆ ಆರೋಗ್ಯಕ್ಕಾಾಗಿ ಏಮ್ಸ್ ನೀಡಿ ಎಂದು ಕೇಂದ್ರ ಸರ್ಕಾರಕ್ಕೆೆ ಆಗ್ರಹಿಸಿ ನಾಲ್ಕು ವರ್ಷದಿಂದ ಹೋರಾಟ ಮಾಡುತ್ತಿಿದ್ದೇವೆ. ಆದರೆ, ಆರ್ಟಿಪಿಎಸ್ನಲ್ಲಿ ಅಣು ವಿದ್ಯುತ್ ಸ್ಥಾಾವರ ಸ್ಥಾಾಪಿಸಿ ನಮಗೆ ವಿಷ ಕೊಡಲು ಮುಂದಾಗಿದೆ ಎಂದು ನಾಗರಿಕ ವೇದಿಕೆ ಮುಖಂಡ ಡಾ.ಬಸವರಾಜ ಕಳಸ ಆಕ್ರೋೋಶ ವ್ಯಕ್ತಪಡಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ರಾಯಚೂರು ತಾಲೂಕಿನ ಶಕ್ತಿಿನಗರದ ಆರ್ಟಿಪಿಎಸ್ನಲ್ಲಿ ಅಣುವಿದ್ಯುತ್ ಸ್ಥಾಾವರ ಸ್ಥಾಾಪಿಸುವ ಉದ್ದೇಶದಿಂದ ಕಳೆದ ಎರಡು ದಿನಗಳ ಹಿಂದೆ ಕೇಂದ್ರದ ನ್ಯೂಕ್ಲಿಿಯರ್ ಪವರ್ ಕಾರ್ಪೋರೇಷನ್ ಆ್ ಇಂಡಿಯಾದ ಮೂವರು ಅಧಿಕಾರಿಗಳ ತಂಡ ಭೇಟಿ ನೀಡಿ ಸ್ಥಳ ಪರಿಶೀಲಿಸಿ ತೆರಳಿರುವುದು ಈ ಭಾಗದ ಜನರ ಆತಂಕ ಹೆಚ್ಚಿಿಸಿದೆ ಎಂದರು.
ಒಂದೊಮ್ಮೆೆ ಅಣು ವಿದ್ಯುತ್ ಕೇಂದ್ರ ಸ್ಥಾಾಪಿಸಿದರೆ ಭವಿಷ್ಯದಲ್ಲಿ ಕ್ಯಾಾನ್ಸರ್, ಶ್ವಾಾಸಕೋಶ ರೋಗದಿಂದ ಬಳಲುಲವ ಆತಂಕ ವ್ಯಕ್ತವಾಗಿದ್ದು ಇದು ಕೈಗಾದಲ್ಲಿಘಿ, ಭೂಪಾಲ್ನಲ್ಲೂ ಸಾಬೀತಾಗಿದೆ ಎಂದು ದುಗುಡ ವ್ಯಕ್ತಪಡಿಸಿದರು.
ನಮಗೆ ಏಮ್ಸ್ ಆರೋಗ್ಯ ಸಂಶೋಧನೆಯ ಸಂಸ್ಥೆೆ ಸ್ಥಾಾಪಿಸಿ ಎಂದು ನಿರಂತರ ಹೋರಾಟ ಮಾಡುತ್ತಿಿದ್ದೇವೆ ಅದನ್ನೂ ಪರಿಗಣಿಸದ ಕೇಂದ್ರ ಸರ್ಕಾರ ನಾವು ಕೇಳದ, ನಮಗೆ ಬೇಡವಾದ ವಿಷ ಕೊಡುವ ಕೆಲಸ ಮಾಡಿದ್ದಾಾರೆ ಎಂದು ಟೀಕಿಸಿದರು.
ಈ ಭಾಗದ ಜನಪ್ರತಿನಿಧಿಗಳು, ಜನ ಸಾಮಾನ್ಯರು, ಸಂಘಟನೆ ಪ್ರತಿನಿಧಿಗಳು ಸಾಂಘಿಕವಾಗಿ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.
ಈ ಬಗ್ಗೆೆ ಆರ್ಟಿಪಿಎಸ್ ಅಧಿಕಾರಿಗಳು, ಜಿಲ್ಲಾಾಡಳಿತ ಹಾಗೂ ಜನಪ್ರತಿನಿಧಿಗಳು ಅಣು ವಿದ್ಯುತ್ ಸ್ಥಾಾವರ ಸ್ಥಾಾಪಿಸುವ ನಿರ್ಧಾರ ವಿರೋಧಿಸಬೇಕು ಕೇಂದ್ರ ಸರ್ಕಾರವೂ ಸಹಿತ ತೀರ್ಮಾನದಿಂದ ಹಿಂದೆ ಸರಿಯಬೇಕು. ಹಠಮಾರಿತನ ತೋರಿದರೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಿಯಲ್ಲಿ ಎಸ್.ಮಾರೆಪ್ಪ ವಕೀಲ, ಅಶೋಕಕುಮಾರ ಜೈನ್, ಮಲ್ಲಣ್ಣ ದಿನ್ನಿಿಘಿ, ಜೈಭೀಮ್,ನರಸಿಂಹಲು ಇದ್ದರು.
ಆರ್ಟಿಪಿಎಸ್ನಲ್ಲಿ ಅಣು ಸ್ಥಾಾವರ ವಿದ್ಯುತ್ ಕೇಂದ್ರ ಸ್ಥಾಪನೆ ಸಲ್ಲದು – ಡಾ.ಕಳಸ

