ಸುದ್ದಿಮೂಲ ವಾರ್ತೆ ಸಿಂಧನೂರು, ಜ.24:
ತ್ರಿಿವಿಧ ದಾಸೋಹಿ,
ನಡೆದಾಡಿದ ದೇವರು ವಳಬಳ್ಳಾಾರಿಯ ಲಿಂ.ಚನ್ನಬಸವ ಶಿವಯೋಗಿಗಳವರ 43ನೇ ಜಾತ್ರಾಾ ಮಹೋತ್ಸವದ ಅಂಗವಾಗಿ ರವಿವಾರ ಸಂಜೆ ಮಹಾರಥೋತ್ಸವ ನಡೆಯಲಿದ್ದು, ನಂತರ ಧಾರ್ಮಿಕ ಸಮ್ಮೇಳನದಲ್ಲಿ ಸಂತ ಸಾಧಕರ ಸಮಾಗಮ, ಯಡಿಯೂರ ತೋಂಟದ ಸಿದ್ದಲಿಂಗೇಶ್ವರ ಶಿವಯೋಗಿಗಳ ಪುರಾಣ ಪ್ರವಚನ ಮಂಗಲ ನಡೆಯಲಿದೆ ಎಂದು ವಳಬಳ್ಳಾಾರಿ ಮಠದ ಕಿರಿಯ ಸ್ವಾಾಮೀಜಿ ಬಸವಲಿಂಗ ಮಹಾಸ್ವಾಾಮಿಗಳು ತಿಳಿಸಿದ್ದಾಾರೆ.
ಬೆಳಿಗ್ಗೆೆ ಜಂಗಮವಟುಗಳಿಗೆ ಇಷ್ಟಲಿಂಗ ಅಯ್ಯಾಾಚಾರ ಜರುಗಲಿದೆ. ಬೆಳಿಗ್ಗೆೆ 10 ಗಂಟೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಶ್ರೀಮಠದ ಪೀಠಾಧಿಪತಿ ಡಾ.ಸಿದ್ದಲಿಂಗ ಮಹಾಸ್ವಾಾಮಿಗಳು ನೇತೃತ್ವದಲ್ಲಿ ನಡೆಯಲಿರುವ ಜಾತ್ರಾಾ ಮಹೋತ್ಸವದಲ್ಲಿ ಕೊಟ್ಟೂರು ಸಂಸ್ಥಾಾನಮಠದ ಜಗದ್ಗುರು ಬಸವಲಿಂಗ ಮಹಾಸ್ವಾಾಮಿಗಳು ಸನ್ನಿಿಧಾನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಹಾಲ್ವಿಿಯ ಚರಣಗಿರಿ ಸಂಸ್ಥಾಾನಮಠದ ಅಭಿನವ ಮಹಾಂತಸ್ವಾಾಮಿಗಳು ನೇತೃತ್ವವಹಿಸಲಿದ್ದು, ನಂದವಾಡಗಿ-ಅಳಂದ ಮಹಾಂತೇಶ್ವರಮಠದ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಾಮಿಗಳು, ಸಂತೆ ಕಲ್ಲೂರಿನ ಗುರುಬಸವ ಮಹಾಸ್ವಾಾಮಿಗಳು, ಹಡಗಲಿಯ ರುದ್ರಮುನಿ ಶಿವಾಚಾರ್ಯರು, ಯದ್ದಲದೊಡ್ಡಿಿಯ ಮಹಾಲಿಂಗ ಮಹಾಸ್ವಾಾಮಿಗಳು, ನಂದವಾಡಗಿ ಚನ್ನಬಸವ ಶಿವಾಚಾರ್ಯರು, ಮಸ್ಕಿಿಯ ವರರುದ್ರಮುನಿ ಶಿವಾಚಾರ್ಯರು, ಅಡವಿ ಅಮರೇಶ್ವರದ ತೋಂಟದಾರ್ಯ ಮಹಾಸ್ವಾಾಮಿಗಳು ಸೇರಿದಂತೆ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾಾರೆ.
ಯಡಿಯೂರ ಸಿದ್ದಲಿಂಗೇಶ್ವರ ಪುರಾಣ ಮಂಗಲ ಇಂದು ವಳಬಳ್ಳಾರಿ ತಾತನವರ 43ನೇ ಜಾತ್ರಾ ಮಹೋತ್ಸವ

