ಮತದಾನದ ಮಹತ್ವ ಕುರಿತು ಒತ್ತಿಿ ಹೇಳುವ ಪರಿಸ್ಥಿಿತಿ ಯಾವ ದೇಶಕ್ಕೂ ಬರಬಾರದು. ಪ್ರತಿಯೊಬ್ಬ ಮತದಾರನು ಮತದಾನದ ಮಹತ್ವ ಅರಿತುಕೊಂಡು ಪ್ರಜಾಪ್ರಭುತ್ವಕ್ಕೆೆ ನ್ಯಾಾಯ ಒದಗಿಸಬೇಕು. ಮತದಾನ ಪ್ರಜೆಗಳ ಬ್ರಹ್ಮಾಾಸ. ಒಂದು ಮತ ಒಂದು ಮೌಲ್ಯ ಎಂಬ ತತ್ವವನ್ನು ತಿಳಿದು ಸಂವಿಧಾನ ನೀಡಿದ ಮತದಾನದ ಅಸವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ನಾಯಕನನ್ನು ಆಯ್ಕೆೆ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆೆ ಗಟ್ಟಿಿಗೊಳಿಸಬೇಕಾಗಿದೆ. ದೇಶದ ಅಭಿವೃದ್ಧಿಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ.
ಮತ ಹಾಕಿ ಏನು ಮಾಡುವುದಿದೆ. ನನ್ನ ಒಂದು ಮತದಿಂದ ಕುಲಗೆಟ್ಟ ವ್ಯವಸ್ಥೆೆ ಬದಲಿಸಲು ಸಾಧ್ಯವೇ ? ಎಂಬ ಸಿನಿಕತನದ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತವೆ. ಓಟನಿಂದ ದೇಶ ಬದಲಾವಣೆಯಾಗದು. ಉದ್ಧಾಾರವಾಗೋದು ರಾಜಕಾರಣಿಗಳೇ ಹೊರತು ದೇಶವಲ್ಲ ಎಂಬ ಮಾತುಗಳನ್ನು ಕೇಳಿದಾಗ ಇಡೀ ವ್ಯವಸ್ಥೆೆಯ ಬಗ್ಗೆೆ ವಾಕರಿಕೆ ಬರುವಷ್ಟು ಅಸಹ್ಯವೆನಿಸುತ್ತದೆ ನಿಜ, ಆದರೆ ದಾರಿ ತಪ್ಪಿಿದ ಪ್ರಜಾಪ್ರಭುತ್ವ ಸರಿ ದಾರಿಗೆ ತರುವ ಜವಾಬ್ದಾಾರಿ ಮತದಾರರ ಮೇಲಿರುವುದಂತೂ ಸತ್ಯ. ವ್ಯವಸ್ಥೆೆಯ ಬಗ್ಗೆೆ ನಿರಾಶರಾಗಬೇಕಿಲ್ಲ, ರಾಜಕೀಯ ನಿರುತ್ಸಾಾಹವೂ ಒಳ್ಳೆೆಯ ಲಕ್ಷಣವಲ್ಲ. ಬದಲಾವಣೆ ಬಯಸುವವರು ಮತದಾರರೇ ಬದಲಾವಣೆ ಮಾಡಬೇಕಾಗಿರುವವರು ಮತದಾರರೇ ಎಂಬುದನ್ನು ಎಲ್ಲಾ ಮತದಾರರು ಮನಗಂಡು ಸಂವಿಧಾನದತ್ತವಾದ ಅತ್ಯುತ್ತಮ ಅಸ ಚಲಾಯಿಸಿ
ನಮ್ಮ ವ್ಯವಸ್ಥೆೆಯನ್ನು ನಾವೇ ಸರಿ ಮಾಡಿಕೊಳ್ಳಬೇಕಾಗಿದೆ. ಜನರ ಅಭಿಪ್ರಾಾಯಗಳನ್ನು ಆಳುವವರು ಕೂಡಾ ಹಗುರವಾಗಿ ಪರಿಗಣಿಸಬಾರದು.
ಪ್ರಜಾಪ್ರಭುತ್ವ ವ್ಯವಸ್ಥೆೆಯಲ್ಲಿ ಚುನಾವಣೆಗೆ ಮಹತ್ವದ ಸ್ಥಾಾನವಿದೆ. ಒಂದು ರಾಷ್ಟ್ರದ ಎಲ್ಲ ಅರ್ಹ ಪ್ರಜೆಗಳು ಮಧ್ಯವರ್ತಿಗಳ ಸಹಾಯವಿಲ್ಲದೆ ತಮಗೆ ಸರಿ ಎನಿಸಿದ ವ್ಯಕ್ತಿಿ ಗೌಪ್ಯ ಮತದಾನದ ಮೂಲಕ ತಾವೇ ಆಯ್ಕೆೆ ಮಾಡಿಕೊಳ್ಳುವ ವ್ಯವಸ್ಥೆೆಯಲ್ಲಿ ಸರ್ವ ಮತದಾರರು ಪಾಲ್ಗೊೊಂಡು ತಮ್ಮ ಪರಮಾಧಿಕಾರ ಚಲಾಯಿಸಬೇಕು. ಮತವನ್ನು ಹಣದ ಆಸೆಗೆ ಆಮಿಷಕ್ಕೆೆ ಮಾರಾಟ ಮಾಡಬಾರದು. ಮತ ಮಾರಿಕೊಂಡರೆ ನಮ್ಮನ್ನು ನಾವೇ ಮಾರಿಕೊಂಡಂತೆಯೇ ಸರಿ. ನಾವೇ ರೊಕ್ಕಕ್ಕೆೆ ಓಟು ಹಾಕಿದ್ರೆೆ ರಾಜಕಾರಣಿಗಳು ಭ್ರಷ್ಟರಾಗಲಿಕ್ಕೆೆ ಸ್ವಲ್ಪ ಮಟ್ಟಿಿಗೆ ನಾವು ಕಾರಣರಾಗುತ್ತೇವೆ ಅಲ್ಲವೆ ?
ಓಟಿನಾ ಬೆಲೆಯೇನು ಗೊತ್ತಿಿಲ್ಲವೀ ಜನಕೆ ನೋಟಿನಾಸೆಗೆ ಓಟು ಕೊಡುತಿಹರು ಪಾಪ ಓಟ್ ತನ್ನ ಹಕ್ಕೆೆಂಬುದರಿತಿರದಿಲೆಕ್ಷನ್ ದಾಟದಲಿ ಬಲಿಪಶು ಪ್ರಜೆಯು ಕರಜ್ಞ
ಪಂ. ರಾಜಗುರು ಗುರುಸ್ವಾಾಮಿ ಕಲಿಕೇರಿಯವರ ಈ ವಚನವನ್ನು ತಿಳಿದು ಓಟು ನೋಟಿಗೆ ಮಾರಾಟ ಮಾಡಿ ಬಲಿಪಶುವಾಗುವುದು ಬೇಡ ನಮ್ಮ ಮತದಾನ ನಮ್ಮ ಇಚ್ಛೆೆ, ಧ್ವನಿ, ಆಯ್ಕೆೆ, ಒಪ್ಪಿಿಗೆ, ಜನಾದೇಶ. ನಿಜವಾದ ಹೈಕಮಾಂಡ್ ಎಂದರೆ ಮತದಾರರೇ ಎಂಬುದನ್ನು ಮೊದಲು ಮತದಾರರಾದ ನಾವೇ ಮನಗಾಣಬೇಕಾಗಿದೆ. ಪ್ರಜಾಪ್ರಭುತ್ವ ಯಶಸ್ವಿಿಯಾಗಬೇಕಾದರೆ ಸರ್ವರೂ ಶಿಕ್ಷಣ ಪಡೆಯಬೇಕು. ಸರ್ವ ಮತದಾರರು ಸಾರ್ವತ್ರಿಿಕ ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಜವಾಬ್ದಾಾರಿಯನ್ನು ಪ್ರದರ್ಶಿಸಬೇಕು.
ನಿಯತಕಾಲಿಕವಾಗಿ ನಡೆಯುವ ಚುನಾವಣೆಗಳಲ್ಲಿ ಕಣದಲ್ಲಿರುವ ಯಾವುದೇ ಅಭ್ಯರ್ಥಿ ಮತದಾರರಿಗೆ ಮೆಚ್ಚುಗೆಯಾಗದಿದ್ದರೆ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಿ ಮತ ಚಲಾಯಿಸುವ ಸೌಲಭ್ಯ ಕಲ್ಪಿಿಸಲಾಗಿದೆ. ಅದುವೇ ನೋಟಾ (ಘೆಅ-ಘೆಟ್ಞಛಿ ಟ್ಛ ಠಿಛಿ ಚಿಟಛಿ) ಆಯ್ಕೆೆ ಎಂಬುದನ್ನು ಎಲ್ಲಾ ಮತದಾರರು ತಿಳಿಯಬೇಕಾಗಿದೆ.
ಹೆಚ್ಚುತ್ತಿಿರುವ ಚುನಾವಣಾ ಭ್ರಷ್ಟಾಾಚಾರದ ಹಿನ್ನೆೆಲೆಯಲ್ಲಿ ಜಾರಿಗೆ ತಂದ ಮತದಾರನ ಗುರುತಿನ ಚೀಟಿ (ಉಐಇ) ಒಂದು ಉಪಯುಕ್ತ ಸಾಧನವಾಗಿ ಪ್ರಾಾಮುಖ್ಯತೆ ಪಡೆದಿರುವುದು ಎಲ್ಲರಿಗೂ ತಿಳಿದ ವಿಷಯವೇ. ಆದ್ದರಿಂದ, ಪ್ರತಿಯೊಬ್ಬರು ಗುರುತಿನ ಚೀಟಿಯೊಂದಿಗೆ ಮತ ಚಲಾಯಿಸುವುದರಿಂದ ಒಬ್ಬರ ಬದಲಾಗಿ ಮತ್ತೊೊಬ್ಬರು ಮತದಾನ ಮಾಡುವುದನ್ನು ತಡೆಯಬಹುದು. ಇಂದು ಮತದಾರರ ಪಟ್ಟಿಿಯಲ್ಲಿ ಮತದಾರನ ಭಾವಚಿತ್ರ ಮುದ್ರಿಿತವಾಗಿರುವುದರಿಂದ ಮತ್ತೊೊಬ್ಬ ಮತ ಚಲಾಯಿಸಲು ಸಾಧ್ಯವಿಲ್ಲ. ಚುನಾವಣಾ ಆಯೋಗ ಅನೇಕ ಚುನಾವಣಾ ಸುಧಾರಣೆಗಳನ್ನು ಜಾರಿಗೆ ತಂದಿರುವುದು ಶ್ಲಾಾಘನೀಯ. ಚುನಾವಣಾ ಆಯೋಗದ ಸುಧಾರಣೆಗಳ ಜೊತೆಗೆ ನಾವುಗಳು ಸುಧಾರಣೆಯಾಗಿ ದೇಶವನ್ನು ಸುಧಾರಣೆಗೆ ತರಬೇಕಾಗಿದೆ. ಭಾರತವನ್ನು ಸ್ಪಂದನಶೀಲ ಮತ್ತು ಆರೋಗ್ಯ ಪೂರ್ಣ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣದ ಆರಂಭವೇ ಚುನಾವಣೆ ಎಂಬ ಕಾರಣಕ್ಕೆೆ ಮತ ಹಾಕೋಣ. ಒಳ್ಳೆೆಯ ನಾಯಕರ ಆಯ್ಕೆೆ ಮೂಲಕ ರಾಷ್ಟ್ರದ ಅಭಿವೃದ್ಧಿಿಗೆ ಪ್ರಯತ್ನ ಪ್ರತಿಯೊಬ್ಬರೂ ಮಾಡೋಣ. ನಮ್ಮ ಹಕ್ಕುಗಳನ್ನು ಅನುಭವಿಸೋಣ. ನಮ್ಮ ಪಾಲಿನ ಕರ್ತವ್ಯ ಪ್ರಾಾಮಾಣಿಕವಾಗಿ ಮಾಡೋಣ. ಮುಂದಿನ ಚುನಾವಣೆಯ ಬಗ್ಗೆೆ ಆಲೋಚಿಸುವ ರಾಜಕಾರಣಿಗಳನ್ನು ಆಯ್ಕೆೆ ಮಾಡುವ ಬದಲು ಮುಂದಿನ ಪೀಳಿಗೆಯ ಬಗ್ಗೆೆ ಆಲೋಚಿಸುವ ರಾಷ್ಟ್ರ ನಾಯಕರನ್ನು ಆರಿಸೋಣ. ಪ್ರಜಾಪ್ರಭುತ್ವ ಸಿದ್ಧಾಾಂತಕ್ಕೆೆ ಬದ್ಧರಾಗಿ ಮುಂಚೂಣಿಗೆ ಬಂದು ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸೋಣ, ಬಲಗೊಳಿಸೋಣ, ಸುಭದ್ರ ಪ್ರಜಾಪ್ರಭುತ್ವಕ್ಕಾಾಗಿ ಸರ್ವರು ಪಾಲ್ಗೊೊಳ್ಳುವಿಕೆಯ ಕುರಿತು ಜಾಗೃತಿ ಮಾಡೋಣ, ದೇಶದ ಹಿತಕ್ಕಾಾಗಿ ನಮ್ಮ ಮತ ಚಲಾಯಿಸೋಣ.
-ರಮೇಶಬಾಬು ಯಾಳಗಿ, ಮಾನ್ವಿಿ
ಮತದಾರರೇ ನಿಜವಾದ ಹೈಕಮಾಂಡ್

