ಸುದ್ದಿಮೂಲ ವಾರ್ತೆ ರಾಯಚೂರು, ಜ.24:
ರಾಯಚೂರು ನಗರದಲ್ಲಿ ಜ.26ರಂದು ಬೆಳಿಗ್ಗೆೆ 10 ರಿಂದ ಹಿಂದು ಸಮ್ಮೇಳನ ಹಾಗೂ ಶೋಭಾಯಾತ್ರೆೆ ಹಮ್ಮಿಿಕೊಳ್ಳಲಾಗಿದೆ ಎಂದು ಹಿಂದು ಸಮ್ಮೇಳನ ಸಮಿತಿ ಅಧ್ಯಕ್ಷ ಪಿ.ವೀರೇಶರೆಡ್ಡಿಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ನಗರದ ಹಿಂದು ಸಮ್ಮೇಳನದ ವಾರ್ಡ್ 21 ರಿಂದ 26 ರವರೆಗಿನ ಉಪ ಸಮಿತಿಯಿಂದ ಅಂದು ಬೆಳಿಗ್ಗೆೆ ಗದ್ವಾಾಲ್ ರಸ್ತೆೆಯ ಶ್ರೀ ವೀರಾಂಜನೇಯ್ಯ ಮುನ್ನೂರು ಕಾಪು ಕಲ್ಯಾಾಣ ಮಂಟಪದಿಂದ ಪ್ರಮುಖ ರಸ್ತೆೆಗಳಲ್ಲಿ ಶೋಭಾಯಾತ್ರೆೆ ಆಯೋಜಿಸಲಾಗಿದೆ ಸುಮಾರು 3 ಸಾವಿರ ಮಹಿಳೆಯರು, ಯುವಕರು ಭಾಗವಹಿಸಲಿದ್ದಾಾರೆ ಎಂದರು.
ಶೋಭಾಯಾತ್ರೆೆ ನಂತರ 11.30ಕ್ಕೆೆ ಕಲ್ಯಾಾಣ ಮಂಟಪದಲ್ಲಿ ಹಮ್ಮಿಿಕೊಂಡಿರುವ ಹಿಂದು ಸಮ್ಮೇಳನದ ಸಾನಿಧ್ಯವನ್ನು ಮಕ್ತಲ್ನ ಬಿಜ್ವಾರ ಗ್ರಾಾಮದ ಡಾ.ಶ್ರೀ ಆದಿತ್ಯ ಪರಾಶ್ರಿಿಸ್ವಾಾಮಿ ವಹಿಸಲಿದ್ದುಘಿ, ಮಾಜಿ ಶಾಸಕ ಎ.ಪಾಪಾರೆಡ್ಡಿಿ ಮುಖ್ಯ ಅತಿಥಿಯಾಗಿ, ಆರ್ಎಸ್ಎಸ್ನ ಪ್ರಾಾಂತ ಪ್ರಚಾರಕ ನರೇಂದ್ರ ಅವರು ಮುಖ್ಯ ಭಾಷಣ ಮಾಡಲಿದ್ದಾಾರೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ ಪ್ರದರ್ಶನವೂ ಇರಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಿಯಲ್ಲಿ ಎನ್.ಭೀಮರೆಡ್ಡಿಿಘಿ, ಎನ್.ಮುನಿರೆಡ್ಡಿಿಘಿ, ಜಿ.ಚಂದ್ರಶೇಖರ, ಎಸ್.ಅನಿಲಕುಮಾರ ಇತರರಿದ್ದರು.

