ಸುದ್ದಿಮೂಲ ವಾರ್ತೆ ರಾಯಚೂರು, ಜ.24:
ಕಲ್ಯಾಾಣ ಕರ್ನಾಟಕ ಕ್ರಾಾಂತಿವೀರ ಸಂಗೊಳ್ಳಿಿ ರಾಯಣ್ಣ ಟ್ರಸ್ಟ್ನಿಂದ ಜ.26ರಂದು ಸಂಜೆ 4.30ಕ್ಕೆೆ ಕ್ರಿಿಕೆಟ್ ಟೂರ್ನಮೆಂಟ್ ವಿಜೇತ ತಂಡಗಳಿಗೆ ಬಹುಮಾನ ಪ್ರದಾನ ಸಮಾರಂಭ ಹಮ್ಮಿಿಕೊಳ್ಳಲಾಗಿದೆ ಎಂದು ಟ್ರಸ್ಟ್ ಗೌರವಾಧ್ಯಕ್ಷ ಬಿ.ಬಸವರಾಜ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಹೊಸೂರು ಬಳಿಯ ಸ್ವಾಾಮಿ ವಿವೇಕಾನಂದ ದೈಹಿಕ ಶಿಕ್ಷಣ ಮಹಾವಿದ್ಯಾಾಲಯದ ಆವರಣದಲ್ಲಿ ನಡೆಯುತ್ತಿಿರುವ ಕ್ರಿಿಕೆಟ್ ಟೂರ್ನಮೆಂಟ್ನಲ್ಲಿ ಜ.18ರಿಂದ 22 ತಂಡ ಭಾಗವಹಿಸಿದ್ದು ಇದೀಗ 11 ತಂಡಗಳು ವಿಜೇತವಾಗಿದ್ದುಘಿ. ಜ.26ರಂದು ಬೆಳಿಗ್ಗೆೆ ಅಂತಿಮ ಪಂದ್ಯ ಜರುಗಲಿದೆ. ಅಂದು ಸಂಜೆ ವಿಜೇತ ತಂಡಕ್ಕೆೆ 50 ಸಾವಿರ ನಗದು, ರನ್ನರ್ಆಪ್ ತಂಡಕ್ಕೆೆ 25 ಸಾವಿರ ನಗದು ಹಾಗೂ ಟ್ರೋೋಫಿ ನೀಡಿ ಅಭಿನಂದಿಸಲಾಗುವುದು ಎಂದರು.
ಅಂದಿನ ಬಹುಮಾನ ವಿತರಣೆ ಸಮಾರಂಭದ ಸಾನಿಧ್ಯವನ್ನು ಶ್ರೀಜ್ಞಾನಾನಂದ ಸ್ವಾಾಮೀಜಿ ವಹಿಸಲಿದ್ದುಘಿ, ಶಾಸಕ ಡಾ.ಶಿವರಾಜ ಪಾಟೀಲ ಪ್ರಥಮ ಬಹುಮಾನ ವಿತರಿಸಿದರೆ, ಕಾಂಗ್ರೆೆಸ್ ಮುಖಂಡ ಕೆ.ಪಂಪಾಪತಿ ರನ್ನರ್ ಅಪ್ ತಂಡಕ್ಕೆೆ ಬಹುಮಾನ ನೀಡುವರು. ವಿವಿಧ ಗಣ್ಯರು, ಸಮಾಜದ ಮುಖಂಡರು ಭಾಗವಹಿಸಲಿದ್ದಾಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಿಯಲ್ಲಿ ಅಧ್ಯಕ್ಷ ಕೆ.ಅಯ್ಯಣ್ಣ ವಡವಾಟಿ, ಪ್ರಘಿ.ಕಾರ್ಯದರ್ಶಿ ಡಿ.ಶ್ರೀನಿವಾಸ, ಖಜಾಂಚಿ ರಮೇಶ ಉಪ್ರಾಾಳ, ಭೀಮಣ್ಣಘಿ, ವಿರೂಪಾಕ್ಷಿಿಘಿ, ವೆಂಕಟೇಶ , ಜಗದೀಶ ಇತರರಿದ್ದರು.

