ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.24:
ಸಾರ್ವಜನಿಕ ಪಡಿತರ ವಿತರಣೆಯ ಅಕ್ಕಿಿಯ ಅಕ್ರಮ ಸಾಗಾಣಿಕೆ ಅಡ್ಡದ ಮೇಲೆ ದಾಳಿ ಮಾಡಿದ್ದ ಬಳ್ಳಾಾರಿಯ ಸಹಾಯಕ ಆಯುಕ್ತರಾದ ಹೆಚ್.ಡಿ.ರಾಜೇಶ್ ಅವರು 523 ಚೀಲ ಅಕ್ಕಿಿಯನ್ನು ವಶಕ್ಕೆೆ ಪಡೆದು, ಲಾರಿಗಳು, ಲಾರಿ ಚಾಲಕರು ಮತ್ತು ಹಮಾಲಿಗಳನ್ನು ಬಂಧಿಸಿದ್ದಾಾರೆ.
ಬಳ್ಳಾಾರಿ ನಗರದ ಎಸ್ಎಲ್ಎನ್ ಮಾಲ್ ಬಳಿ ಇರುವ ದರೂರು ಪುಲ್ಲಯ್ಯ ಕಾಂಪೌಂಡ್ ಆವರಣದಲ್ಲಿ ಅಕ್ರಮವಾಗಿ ದಾಸ್ತಾಾನು ಮಾಡಲಾಗಿದ್ದ ಸಾರ್ವಜನಿಕರ ಪಡಿತರವನ್ನು ಲಾರಿಗಳಲ್ಲಿ ಬೇರೆಡೆಗೆ ಸಾಗಿಸುವ ಮಾಹಿತಿಯನ್ನು ಪಡೆದಿದ್ದ ಬಳ್ಳಾಾರಿಯ ಸಹಾಯಕ ಆಯುಕ್ತರಾದ ಹೆಚ್.ಡಿ. ರಾಜೇಶ್ ಅವರು ಶುಕ್ರವಾರ ನಸುಕಿನ 2 ಗಂಟೆ ಸುಮಾರಿಗೆ ದ್ವಿಿಚಕ್ರ ವಾಹನದಲ್ಲಿ ಸ್ಥಳಕ್ಕೆೆ ಬಂದು, ಲಾರಿಗಳನ್ನು ತಡೆದು, ಹಮಾಲಿಗಳನ್ನು – ಲಾರಿಗಳ ಚಾಲಕರನ್ನು ವಿಚಾರಣೆ ನಡೆಸಿ, ಸಮಗ್ರ ಮಾಹಿತಿಯನ್ನು ಪಡೆದಿದ್ದಾಾರೆ.
ಹೆಚ್.ಡಿ.ರಾಜೇಶ್ ಅವರು, ಬಳ್ಳಾಾರಿಯಿಂದ ಗುಜರಾತ್ಗೆ ಅಕ್ಕಿಿ ಅಕ್ರಮ ಸಾಗಾಣಿಕೆ ಆಗುತ್ತಿಿದೆ. ಅಲ್ಲದೇ, ಹಗರಿಬೊಮ್ಮನಹಳ್ಳಿಿಯಿಂದ ಕೂಲಿಗಳನ್ನು ಬಳ್ಳಾಾರಿಗೆ ಕರೆತಂದು ಹೆಚ್ಚಿಿನ ಕೂಲಿ ನೀಡಿ ರಾತ್ರಿಿ ಹೊತ್ತಿಿನಲ್ಲಿ ಅಕ್ಕಿಿಯನ್ನು ಲೋಡ್ ಮಾಡಲಾಗುತ್ತಿಿದೆ. ಶ್ರೀಧರ್ ಎನ್ನುವಾತನು ಕಳ್ಳಸಾಗಾಣಿಕೆಯನ್ನು ನಿರ್ವಹಿಸುತ್ತಿಿದ್ದಾಾನೆ. ಅಕ್ರಮ ಅಕ್ಕಿಿ ಕಳ್ಳಸಾಗಾಣಿಕೆ ನಿಯಂತ್ರಿಿಸಲು ಶ್ರಮಿಸಲಾಗುತ್ತಿಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾಾರೆ. ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
ಸಿನಿಮಾ ಶೈಲಿಯಲ್ಲಿ ಸಹಾಯಕ ಆಯುಕ್ತ ಹೆಚ್.ಡಿ.ರಾಜೇಶ್ ಅವರು ಕರ್ತವ್ಯ ಪಾಲನೆ ಪಡಿತರ ಅಕ್ರಮ ಅಕ್ಕಿ ಸಾಗಾಣಿಕೆಗೆ ತಡೆ

