ಸುದ್ದಿಮೂಲ ವಾರ್ತೆ ರಾಯಚೂರು, ಜ.24:
ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.29ರಿಂದ ನಾಲ್ಕು ದಿನ ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯಿಂದ ವೀರಶೈವ ಲಿಂಗಾಯತ ಗ್ಲೋೋಬಲ್ ಬಿಸಿನೆಸ್ ಕಾಂಕ್ಲೇವ್ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಾಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪೂರ, ಕಾಂಕ್ಲೇವ್ ಸಂಯೋಜಕ ಎಸ್.ಬಿ.ಪಾಟೀಲ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದರು. ೆ.1ರ ವರೆಗೆ ಈ ಜಾಗತಿಕ ಮಟ್ಟದ ಉದ್ದಿಮೆ ಮೇಳ ನಡೆಯಲಿದೆ ಸುಮಾರು 75 ಸಾವಿರಕ್ಕೂ ಅಧಿಕ ಉದ್ಯಮಿದಾರರು ಭಾಗವಹಿಸುವ ನಿರೀಕ್ಷೆೆ ಇದೆ ಎಂದರು.
ಈ ಹಿಂದಿನ ವರ್ಷ 130 ಕೋಟಿ ಬಂಡವಾಳ ಹರಿದು ಬಂದಿದೆ ಈ ಬಾರಿ ಅದು ಹೆಚ್ಚಾಾಗುವ ಸಾಧ್ಯತೆ ಇದೆ. ಸುಮಾರು 260ಕ್ಕೂ ಅಧಿಕ ವ್ಯಾಾಪಾರ ಮಳಿಗೆಗಳು ಇರಲಿದ್ದು ಸ್ಟಾಾರ್ಟ್ಅಪ್, ಎಂಎಸ್ಎಂಇ, ಕೈಗಾರಿಕೆ ಮತ್ತು ವ್ಯಾಾಪಾರ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಲಾಗಿದೆ ಈ ಎಲ್ಲ ವಲಯಗಳಲ್ಲಿನ ಯುವ ಉದ್ಯಮಿಗಳು, ಅನುಭವಿ ಉದ್ದಿಮೆದಾರರು ಸಮ್ಮಿಿಲನ ಆಗಲಿದ್ದು ಅನುಭವ ವಿನಿಮಯದ ಮೂಲಕ ಕೈಗಾರಿಕೋದ್ಯಮ ಬೆಳವಣಿಗೆಗೆ ಪೂರಕವಾಗಿರಲಿದೆ ಎಂದು ಹೇಳಿದರು.
ಜ.29ರಂದು ಸಂಜೆ 4.30ಕ್ಕೆೆ ತುಮಕೂರಿನ ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಾಮೀಜಿ ಅವರು ಉದ್ಘಾಾಟಿಸಲಿದ್ದುಘಿ, ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ, ಈಶ್ವರ ಖಂಡ್ರೆೆಘಿ, ಶರಣಬಸಪ್ಪ ದರ್ಶನಾಪೂರ, ಕೇಂದ್ರ ಸಚಿವ ಪ್ರಲ್ಹಾಾದ್ ಜೋಶಿ ಅವರ ಘನ ಉಪಸ್ಥಿಿತರಿರಲಿದ್ದಾಾರೆ. ಕೈಗಾರಿಕೋದ್ಯಮಿಗಳಾದ ವಿಜಯ ಸಂಕೇಶ್ವರ, ಬಿ.ಎಂ.ಜಯಶಂಕರ, ಡಾ.ಶರಣಪಾಟೀಲ, ಬಾಲಚಂದ್ರ ಸಿಂಗ್ರಾವ್ರಾಣೆ, ರಬೀಂದ್ರನಾಥ ಭಾಗವಹಿಸಲಿದ್ದಾಾರೆ. ೆ.1ರ ಸಮಾರೋಪದ; ಈ ಡಾ.ಬಸವ ಮರುಳಸಿದ್ದ ಸ್ವಾಾಮೀಜಿ ಸಾನಿಧ್ಯದಲ್ಲಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ, ಮುರುಗೇಶ ನಿರಾಣಿ ಸೇರಿ ಹಲವರು ಭಾಗವಹಿಸುವರು ಎಂದು ವಿವರಿಸಿದರು.
ಸುದ್ದಿಗೋಷ್ಠಿಿಯಲ್ಲಿ ಉಮೇಶ ಪಾಟೀಲ, ಸಿದ್ದಲಿಂಗಪ್ಪಘಿ, ಬಸವರಾಜ ಇದ್ದರು.

