ಸುದ್ದಿಮೂಲ ವಾರ್ತೆ ಅರಕೇರಾ, ಜ.24:
ವಿವಿಧ ಕಾರಣಗಳಿಂದ ಬಹಳಷ್ಟು ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ವಂಚಿತರಾಗುವಂತೆ ಮಾಡುವುದರ ಜತೆಗೆ ಬಾಲ್ಯದಲ್ಲೇ ದುಡಿಮೆಗೆ ಕಳುಹಿಸುತ್ತಾಾರೆ. ಇದರಿಂದ ಬಾಲಕಾರ್ಮಿಕರಾಗುವ ಮಕ್ಕಳು ತಮ್ಮ ಭವಿಷ್ಯದ ಬದುಕನ್ನು ಕಾರ್ಮಿಕ ವೃತ್ತಿಿಯಲ್ಲೆ ಮುಂದುವರಿಸುವ ಅನಿವಾರ್ಯತೆಗೆ ಸಿಲುಕಿಕೊಳ್ಳುತ್ತಾಾರೆ. ಈ ಹಿನ್ನೆೆಲೆಯಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ವಿದ್ಯೆೆಗೆ ಬಡತನ ಬಾರದಂತೆ ನೋಡಿಕೊಳ್ಳಬೇಕು ಎಂದು ಬಿಇಒ ಮಲ್ಲಿಕಾರ್ಜುನ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಮಾದರಿಯ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಲಿಕಾ ಹಬ್ಬವನ್ನು ಉದ್ಘಾಾಟಿಸಿ ಮಾತನಾಡಿದರು. ವಿದ್ಯಾಾರ್ಥಿಗಳಲ್ಲಿ ಕಲಿಯುವ ಆಸಕ್ತಿಿ ಹೆಚ್ಚಿಿಸಲು, ಅವರ ಪ್ರತಿಭೆಯನ್ನು ಪ್ರೋೋತ್ಸಾಾಹಿಸಲು ಮತ್ತು ಸೃಜನಶೀಲತೆಯನ್ನು ಬೆಳೆಸಲು ಶಾಲೆಗಳಲ್ಲಿ ಹಬ್ಬದ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿಿದೆ. ಓದು – ಬರಹ, ಗಣಿತ, ಪರಿಸರ ಹಾಗೂ ಇನ್ನಿಿತರ ವಿಶೇಷ ಕಾರ್ಯಕ್ರಮಗಳನ್ನು ಇಲ್ಲಿ ಪ್ರಸ್ತುತ ಪಡಿಸಲಾಗುತ್ತದೆ. ಶಾಲೆಗಳಿಂದ ಮಕ್ಕಳು ದೂರ ಉಳಿಯದಂತೆ ಗ್ರಾಾಮಸ್ಥರು ಕಾಳಜಿ ವಹಿಸಬೇಕು.ಪ್ರತಿ ಮಗುವಿಗೆ ಕಡ್ಡಾಾಯವಾಗಿ ಕನಿಷ್ಟ ಶಿಕ್ಷಣ ಕೊಡಿಸುವ ಕಾರ್ಯಕ್ಕೆೆ ಮುಂದಾಗಬೇಕು ಎಂದು ತಿಳಿಸಿದರು.
ಗ್ರಾಾಪಂ ಅಧ್ಯಕ್ಷೆ ರಂಗಮ್ಮ ನಾಯಕ, ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜಪೂಜಾರಿ,ನಿವೃತ ಉಪನ್ಯಾಾಸಕ ವೆಂಕಟೇಶ ನಾಯಕ ದೊರೆ, ಕೆ.ಭಗವಂತ್ರಾಾಯ ನಾಯಕ, ಎಸ್ಡಿಎಂಸಿ ಅಧ್ಯಕ್ಷ ಮಾನಶಯ್ಯಪೂಜಾರಿ, ಪಿಡಿಒ ವೆಂಕೋಬ ನಾಯಕ ಪಿಲಿಗುಂಡ, ಚಂದ್ರಶೇಖರ ಶೆಟ್ಟಿಿ, ಕೆ.ವಿರೇಶ ಸಾಹುಕಾರ, ಸಿದ್ಧಾಾರ್ಥ ಹವಾಲ್ದಾಾರ್, ವೆಂಕಟೇಶ ಕರ್ನಾಳ, ನಾಗರಾಜ ದೇವರಮನಿ, ಸಿಆರ್ಪಿ ಬಸವರಾಜ, ಮುಖ್ಯ ಶಿಕ್ಷಕ ಲಕ್ಷ ಣ ಹಾಗೂ ಎಸ್ಡಿಎಂಸಿ ಸದಸ್ಯರು, ಸಹ ಶಿಕ್ಷಕರು ವಿದ್ಯಾಾರ್ಥಿಗಳು ಭಾಗವಹಿಸಿದ್ದರು.
ಮಕ್ಕಳನ್ನು ಶಾಲೆಯಿಂದ ದೂರವಿಡಬೇಡಿ – ಬಿಇಒ ಮಲ್ಲಿಕಾರ್ಜುನ

