ಸುದ್ದಿಮೂಲ ವಾರ್ತೆ ಮುದಗಲ್, ಜ.24:
ಬೈಕ್ ಸವಾರರು ಕಡ್ಡಾಾಯವಾಗಿ ಹೆಲ್ಮೆೆಟ್ ಧರಿಸಿ ವಾಹನ ಚಲಾಯಿಸುವ ಮೂಲಕ ಜೀವ ಉಳಿಸಿ ಕೊಳ್ಳಬೇಕು ಎಂದು ಸ್ಥಳೀಯ ಠಾಣೆ ಪಿಎಸ್ಐ ವೆಂಕಟೇಶ ಮಾಡಗಿರಿ ಶನಿವಾರ ಹೇಳಿದರು.
ಪಟ್ಟಣದ ಎಸ್ ಬಿ ಭಮಸಾಗರ ಪಬ್ಲಿಿಕ್ ಶಾಲೆ ಹಾಗೂ ಮುದಗಲ್ ಪೊಲೀಸ್ ಠಾಣೆ ಸಂಯುಕ್ತಾಾಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ ಹಾಗೂ ರಸ್ತೆೆ ಸುರಕ್ಷತಾ ಸಪ್ತಾಾಹ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ಸಂಚಾರಿ ನಿಯಮಗಳ ಮಾಹಿತಿ ನೀಡಿದರು. ಮಕ್ಕಳು ಮನೆ ಸದಸ್ಯರಿಗೆ ವಾಹನ ಕಾಯ್ದೆೆ ಕುರಿತು ಮನವರಿಕೆ ಮಾಡಬೇಕು. ವಾಹನ ಚಲಾವಣೆ ವೇಳೆ ಮೊಬೈಲ್ ಬಳಕೆ ಅಪರಾಧವಾಗಿದೆ. ಅಪಘಾತ ವಿಮೆ, ವಾಹನಗಳ ಕಡ್ಡಾಾಯ ವಿಮೆ, ವಾಹನ ಚಲಾವಣೆ ಪರವಾನಗಿ ಸೇರಿದಂತೆ ಕಾನೂನಿನ ಅರಿವು ಮೂಡಿಸಿದರು.
ಲಿಂಗಸುಗೂರು ರಸ್ತೆೆಯ ವೃತ್ತದಲ್ಲಿ ಪಿಎಸ್ಐ ವೆಂಕಟೇಶ ಮಾಡಗಿರಿ ನೇತೃತ್ವದಲ್ಲಿ ಶಾಲಾ ವಿದ್ಯಾಾರ್ಥಿಗಳು ಹೆಲ್ಮೆೆಟ್ ಧರಿಸದೇ ವಾಹನ ಚಲಾಯಿಸುತ್ತಿಿದ್ದ ಸವಾರರಿಗೆ ತಡೆದು ಜಾಗೃತಿ ಮೂಡಿಸಿ, ಹೆಲ್ಮೆೆಟ್ ಕುರಿತು ಮಾಹಿತಿ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ. ವಿನೋದ್ ಕುಮಾರ್, ಶಾಲೆಯ ಅಧ್ಯಕ್ಷ ನೀತಾ ಎಸ್ ಭಮಸಾಗರ, ಕಾರ್ಯದರ್ಶಿ ಡಾ. ಸಂಜೀವ ಎಸ್ ಭಮಸಾಗರ, ಪುರಸಭೆ ಆರ್ ಐ ಅಂತೋಣಿರಾಜ್, ಪತ್ರಕರ್ತ ಚಂದ್ರಶೇಖರ ಗಂಗಾವತಿ, ಶಾಲಾ ಶಿಕ್ಷಕರು ಹಾಗೂ ಪೋಲಿಸರು, ಶಾಲಾ ವಿದ್ಯಾಾರ್ಥಿಗಳು ಇದ್ದರು.
ಜೀವ ರಕ್ಷಣೆಗೆ ಹೆಲ್ಮೆಟ್ ಧರಿಸಿಕೊಳ್ಳಿ : ಮಾಡಗಿರಿ

