ಸುದ್ದಿಮೂಲ ವಾರ್ತೆ ರಾಯಚೂರು, ಜ.25:
ಸಂವಿಧಾನ ನೀಡಿದ ಮಹತ್ವದ ಮತದಾನದ ಹಕ್ಕು ಸ್ವಂತ ವಿವೇಚನೆ ಬಳಸಿ ಪ್ರಜಾಪ್ರಭುತ್ವದ ತಳಪಾಯ ಭದ್ರಗೊಳಿಸಲು ಪ್ರತಿಯೊಬ್ಬ ಮತದಾರ ಬದ್ದತೆ ತೋರಿಸಬೇಕು ಎಂದು ಹಿರಿಯ ಶ್ರೇೇಣಿಯ ದಿವಾಣಿ ನ್ಯಾಾಯಾಧೀಶರಾದ ಎಚ್.ಎ.ಸಾತ್ವಿಿಕ್ ಹೇಳಿದರು.
18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಮತದಾನ ಮಾಡುವುದು ಸಾಂವಿಧಾನಿಕ ಹಕ್ಕು ಮತ್ತು ಕರ್ತವ್ಯವಾಗಿದೆ. ಪ್ರಜಾಪ್ರಭುತ್ವದ ಸುಭದ್ರತೆಗಾಗಿ ಅರ್ಹ ದೇಶದ ಪ್ರತಿಯೊಬ್ಬ ಪ್ರಜೆಯೂ ಮತದಾನ ಪ್ರಕ್ರಿಿಯೆಯಲ್ಲಿ ನಿರ್ಲಕ್ಷ ವಹಿಸದೆ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕೆ.ನಿತೀಶ್ ಮಾತನಾಡಿ, ಯುವ ಮತದಾರರ ನೋಂದಣಿ ಹಾಗೂ ಮತದಾನಕ್ಕೆೆ ಪ್ರೋೋತ್ಸಾಾಹಿ ಸಲು ಮತ್ತು ಜಾಗೃತಿ ಮೂಡಿಸಲು ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗುತ್ತಿಿದೆ. ಮತದಾನದ ಮಹತ್ವ ಅರಿತು ಪ್ರತಿಯೊಬ್ಬರು ಮತದಾನ ಪ್ರಕ್ರಿಿಯೆಯಲ್ಲಿ ಭಾಗಿಯಾಗಬೇಕು ಎಂದರು.
ವಿಜೇತರಿಗೆ ಪ್ರಮಾಣ ಪತ್ರ: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಪ್ರೌೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಇದೇ ವೇಳೆ ಪ್ರಮಾಣಪತ್ರ, ಹೊಸದಾಗಿ ಮತದಾರರಾದ ಯುವಕರಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಇದಕ್ಕೂ ಮೊದಲು ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಸಿಇಓ ಈಶ್ವರ ಕುಮಾರ ಕಾಂದೂ, ಎಸ್ಪಿ ಅರುಣಾಂಗ್ಷು ಗಿರಿ, ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ, ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಎಎಸ್ಪಿ ಕುಮಾರಸ್ವಾಾಮಿ, ತಹಶೀಲ್ದಾಾರ್ ಸುರೇಶ್ ವರ್ಮ, ಉಪ ಆಯುಕ್ತರಾದ ಸಂತೋಷ ರಾಣಿ, ಚುನಾವಣೆ ವಿಭಾಗದ ತಹಶೀಲ್ದಾಾರ್ ಸದಾಶಿವಪ್ಪ ಸೇರಿದಂತೆ ಇತರರಿದ್ದರು.
ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಗರದ ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಾಡಳಿತ, ಜಿಲ್ಲಾಾ ಕಾನೂನು ಸೇವೆಗಳ ಪ್ರಾಾಧಿಕಾರದ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿತ್ತು.
ಸ್ವಂತ ವಿವೇಚನೆ ಬಳಸಿ ಬದ್ದತೆಯ ಮತ ಚಲಾಯಿಸಿ – ನ್ಯಾ.ಸಾತ್ವಿಕ್

