ಸುದ್ದಿಮೂಲ ವಾರ್ತೆ ಸಿಂಧನೂರು, ಜ.25:
ನಮ್ಮ ಭಾಗದಲ್ಲಿ ಮನರಂಜನೆಗಾಗಿ ಟೆನ್ನಿಿಸ್ ಬಾಲ್ ಕ್ರಿಿಕೆಟ್ ಆಡುತ್ತಾಾರೆ. ಇದರಿಂದ ಯಾವುದೇ ಸಾಧನೆ ಸಾಧ್ಯವಿಲ್ಲ. ಲೆದರ್ ಬಾಲ್ನಲ್ಲಿ ಸತತ ಪರಿಶ್ರಮ ಮಟ್ಟರೆ ಮಾತ್ರ ಉತ್ತಮ ಅವಕಾಶಗಳು ಸಿಗಲಿವೆ ಎಂದು ಕೆಎಸ್ಸಿಎ ರಾಯಚೂರು ವಲಯ ನೂತನ ಅಧ್ಯಕ್ಷ ಚಂದ್ರಶೇಖರ ಮೈಲಾರ ಹೇಳಿದರು.
ರವಿವಾರ ಬೆಳಗ್ಗೆೆ ನಗರ ತಾಲೂಕಾ ಕ್ರೀಡಾಂಗಣದಲ್ಲಿ ವಾಕಿಂಗ್ ಗೆಳೆಯರ ಬಳಗದಿಂದ ಸನ್ಮಾಾನ ಸ್ವೀಕರಿಸಿ ಅವರು ಮಾತನಾಡಿದರು. ಅವಕಾಶಗಳು ಸಿಕ್ಕಾಾಗ ಸರಿಯಾಗಿ ಬಳಸಿಕೊಳ್ಳಬೇಕು. ಉತ್ತರ ಕರ್ನಾಟಕದಿಂದ ಐಪಿಎಲ್ ಆಡಿದ ಏಕೈಕ ಕ್ರಿಿಕೆಟರ್ ಎಂದು ಸಿಂಧನೂರಿನ ಹೆಮ್ಮೆೆಯ ಆಟಗಾರ ಮನೋಜ್ ಬಾಂಢಗೆ. ಆತ ನಮ್ಮ ರುದ್ರಗೌಡ ಕ್ರಿಿಕೆಟ್ ಕ್ಲಬ್ನಿಂದ ಹೋಗಿದ್ದಾಾನೆ. ಅತ್ಯುತ್ತಮ ಪ್ರತಿಭಾವಂತ, ಕಠಿಣ ಪರಿಶ್ರಮ ಪಡುತ್ತಿಿರುವ ಆಟಗಾರ. ಸದ್ಯ ಅತ ಗಾಯಾಳು ಆಗಿದ್ದರಿಂದ ಸ್ಪರ್ಧಾತ್ಮಕ ಕ್ರಿಿಕೆಟ್ನಿಂದ ದೂರ ಇದ್ದಾಾನೆ. ಶೀಘ್ರವೇ ಗುಣಮುಖವಾಗಿ ಮತ್ತೆೆ ಕ್ರಿಿಕೆಟ್ ಮೈದಾನಕ್ಕೆೆ ಬರಲಿದ್ದಾಾನೆ. ಮನೋಜ್ನಂತೆ ಇನ್ನೂ ಅನೇಕರು ಮುಂದೆ ಬರಬೇಕು ಎಂದರು.
ಚಂದ್ರಶೇಖರ ಮೈಲಾರ ಇಂದು ವಲಯ ಅಧ್ಯಕ್ಷ, ಕ್ರಿಿಕೆಟ್ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಾಧನೆ ಮಾಡಿದ್ದಾಾನೆ ಎಂದರೆ ಅದಕ್ಕೆೆ ಮೂಲ ಕಾರಣ ರುದ್ರಗೌಡ ಕ್ರಿಿಕೆಟ್ ಕ್ಲಬ್ ಹಾಗೂ ಹಿರಿಯ ಆಟಗಾರ ರಾಜಶೇಖರ ಪಾಟೀಲ್. ಅವರ ಮಾರ್ಗದರ್ಶನದಲ್ಲಿ ನಾನಿಂದು ಈ ಹಂತಕ್ಕೆೆ ಬೆಳೆದಿದ್ದೇನೆ. ಜೊತೆಗೆ ಇತ್ತೀಚೆಗೆ ನಡೆದ ಕೆಎಸ್ಸಿಎ ಚುನಾವಣೆಯಲ್ಲಿ ನಾವು ಬ್ರಿಿಜೇಶ ಪಾಟೀಲ್ ಪೆನಾಲ್ನಲ್ಲಿ ಗುರುತಿಸಿಕೊಂಡಿದ್ದೇವು. ಆದರೆ ನಮ್ಮ ಕನ್ವಿಿನರ್ ಕುಶಾಲ್ ಪಾಟೀಲ್ ಹಾಗೂ ರಾಜಶೇಖರ ಪಾಟೀಲ್ರ ಪರಿಶ್ರಮದಿಂದ ಈ ಸ್ಥಾಾನ ಸಿಕ್ಕಿಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಪ್ರತಿಭೆಗಳನ್ನು ಗುರುತಿಸಿ, ಹೊರ ತರುವ ಪ್ರಯತ್ನ ಮಾಡುವೆ. ಅದಕ್ಕಾಾಗಿ ಈ ಮೈದಾನ ಕೊಡುವಂತೆ ಶಾಸಕರಿಗೆ ಮನವಿ ಮಾಡಿದ್ದೇನೆ. ಇಲ್ಲಿ 14, 16 ವರ್ಷದೊಳಗಿನ ಪಂದ್ಯಾಾವಳಿ ಏರ್ಪಡಿಸಲು ಉತ್ತಮ ಮೈದಾನವಾಗಿದೆ ಎಂದರು.
ಈ ಸಂದರ್ಭದಲ್ಲಿ ವಾಕಿಂಗ್ ಬಳಗದ ಮಲ್ಲಪ್ಪ ಮೈಲಾರ, ಮೌನೇಶ್ ಪತ್ತಾಾರ್ ಸಾಲ್ವಾಾಡಗಿ, ವೀರಪ್ಪಯ್ಯ ಸ್ವಾಾಮಿ, ಬಸವರಾಜ್ ಮನ್ನಾಾಪುರ, ರಾಮಯ್ಯ ಶೆಟ್ಟಿಿ, ಶಿವಪುತ್ರಪ್ಪ, ಮಲ್ಲಿಕಾರ್ಜುನ್ ಮಟ್ಟೂರ್, ಚಂದ್ರಶೇಖರ್ ಕಗ್ಗೋೋಡ, ಪಕೀರಪ್ಪ ಬಾಗೋಡಿ, ಬಸವರಾಜ್ ಇಂಜಿನಿಯರ್, ಬಸನಗೌಡ, ನಾಗರಾಜ್ ಮಾಡಶಿರವಾರ, ಎನ್.ವಿ.ಕೃಷ್ಣ, ಪಂಪಣ್ಣ, ಲಿಂಗನಗೌಡ, ಜಿ.ಎಂ.ಪಡನಾಡ, ಅಂಬರೀಶ್ ಮೀಟಿಮನಿ, ಪಂಪಾಪತಿ ಬಳಗಾನೂರು, ವಿ.ಹರಿಬಾಬು, ಗೋಪಾಲ್ ಕೃಷ್ಣ, ದ್ಯಾಾವನಗೌಡ, ವಿಜಯ್, ರಾಜು ಮಡಿಕೇರಿ, ವೀರೇಶ ಸ್ವಾಾಮಿ, ಬಸವರಾಜ್ ವಕೀಲ್, ಮಲ್ಲಪ್ಪ ಡ್ರೈವರ್ ಸೇರಿದಂತೆ ಅನೇಕರು ಇದ್ದರು.
ರಾಯಚೂರು ವಲಯ ನೂತನ ಅಧ್ಯಕ್ಷ ಚಂದ್ರ ಮೈಲಾರ ಅವರಿಗೆ ವಾಕಿಂಗ್ ಬಳಗದಿಂದ ಸನ್ಮಾನ ಲೆದರ್ ಬಾಲ್ನಲ್ಲಿ ಕ್ರಿಕೆಟ್ ಆಡಿದರೆ ಮಾತ್ರ ಅವಕಾಶ

