ಸುದ್ದಿಮೂಲ ವಾರ್ತೆ ಮಸ್ಕಿ, ಜ.25:
ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ವತಿಯಿಂದ ಮಸ್ಕಿಿ ಪಟ್ಟಣದಲ್ಲಿ ಜ.28ರಂದು ಶೋಭಾಯಾತ್ರೆೆ, ಹಿಂದೂ ಸಮ್ಮೇಳನ ಆಯೋಜಿಸಲಾಗಿದೆ, ಎಂದು ಸಮಿತಿ ಅಧ್ಯಕ್ಷ ಬಸವರಾಜ ಹಾಲ್ದಾಾರ್ಮಸ್ಕಿಿ ತಿಳಿಸಿದರು.
ರವಿವಾರ ಪತ್ರಿಿಕಾಗೋಷ್ಠಿಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 3:30 ಗಂಟೆಗೆ ಗಚ್ಚಿಿನಮಠದಿಂದ ಭವ್ಯ ಶೋಭಾಯಾತ್ರೆೆ ಪ್ರಾಾರಂಭವಾಗಲಿದೆ. ಸಾಂಸ್ಕೃತಿಕ ಕಲಾ ತಂಡಗಳು, ಡೊಳ್ಳು ಕುಣಿತ ಹಾಗೂ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಭಾರತ ಮಾತೆಯ ಭಾವಚಿತ್ರ ಮತ್ತು ಮಹಾಪುರುಷರ ಭಾವಚಿತ್ರಗಳ ಕಟೌಟ್ಗಳನ್ನು ಪ್ರದರ್ಶಿಸಲಾಗುವುದು. ತೇರಿನ ಮನೆ ಆವರಣದಲ್ಲಿ ಮೆರವಣಿಗೆ ಸಮಾಪ್ತಿಿಗೊಳ್ಳಲಿದೆ ಎಂದರು.
ಸಂಜೆ 5:30 ಗಂಟೆಗೆ ನಡೆಯುವ ಸಮ್ಮೇಳನದಲ್ಲಿ ಷ.ಬ್ರ. ವರರುದ್ರಮುನಿ ಗಚ್ಚಿಿನ ಮಠ, ಷ.ಬ್ರ. ಮಹಾಂತ ಶಿವಾಚಾರ್ಯರು ಸಂತೆಕೆಲ್ಲೂರು, ಗೌರವ ಅಧ್ಯಕ್ಷತೆ ಬಸವರಾಜ ಹಾಲ್ದಾಾರ್, ವಕ್ತಾಾರರು ಶ್ರೀನಿವಾಸ ಸಂಸ್ಕಾಾರ ಭಾರತಿ ಪ್ರಾಾಂತ ಸಂಘಟನಾ ಕಾರ್ಯದರ್ಶಿ, ಸಮ್ಮೇಳನದಲ್ಲಿ ಸುಮಾರು 02 ಸಾವಿರ ಜನ ಸೇರುವ ನಿರೀಕ್ಷೆ ಇದೆ.
ಕಾರ್ಯಕ್ರಮದ ನಂತರ ಮಹಾಪ್ರಸಾದ ವ್ಯವಸ್ಥೆೆ ಇರುತ್ತದೆ ಎಂದು ತಿಳಿಸಿದರು. ಹಿಂದೂ ಸಮ್ಮೇಳನ ಸಮಾಜದ ಏಕತೆ, ಸಂಸ್ಕೃತಿ ಉಳಿವು ಮತ್ತು ಧಾರ್ಮಿಕ ಜಾಗೃತಿ ಮೂಡಿಸುತ್ತದೆ. ಸಮಾಜದಲ್ಲಿ ಧರ್ಮ ಭಾವನೆ, ಶಾಂತಿ ಮತ್ತು ಸಹಕಾರವನ್ನು ಬೆಳೆಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಶೋಕ ಠಾಕೂರ್, ಅಪ್ಪಾಾಜಿಗೌಡ, ಅಮರೇಶ ಬ್ಯಾಾಳಿ, ಡಾ.ನಾಗನಗೌಡ, ಅಭಿಜಿತ್ ಸಿಂಗ್ ಮಾಲಿ ಪಾಟೀಲ್ ಉಪಸ್ಥಿಿತರಿದ್ದರು.

