ಸುದ್ದಿಮೂಲ ವಾರ್ತೆ ರಾಯಚೂರು, ಜ.25:
ಅಖಿಲ ಕರ್ನಾಟಕ ಭುವನೇಶ್ವರಿ ಸೇನಾ ಸಮಿತಿಯಿಂದ ಜ.26ರಂದು ಹರಿಜನವಾಡದ ಗಾಜಗಾರ ಪೇಟೆ ಸರ್ಕಾರಿ ಶಾಲೆಯಲ್ಲಿ ನೋಟ್ ಬುಕ್ ವಿತರಣೆ ಆಯೋಜಿಸಲಾಗಿದೆ ಎಂದು ಸಂಸ್ಥಾಾಪಕ ಅಧ್ಯಕ್ಷ ತಮೇಶ ತಿಳಿಸಿದರು.
ಬಡ ಹಾಗೂ ಹಿಂದುಳಿದ ವಿದ್ಯಾಾರ್ಥಿಗಳ ಶೈಕ್ಷಣಿಕ ಉತ್ತೇಜನಕ್ಕಾಾಗಿ ಹಲವು ವರ್ಷಗಳಿಂದ ಶೈಕ್ಷಣಿಕ ಸಾಮಾಗ್ರಿಿ ವಿತರಿಸುತ್ತ ಬರುತ್ತಿಿದೆ ಎಂದ ಅವರು ನಾಡು ನುಡಿ ರಕ್ಷಣೆ, ಜಲ ಸಂರಕ್ಷಣೆ, ಮದ್ಯ ವಿರೋಧ, ಸಾಮಾಜಿಕ ನ್ಯಾಾಯ ಹಾಗೂ ಜನಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿಿದೆ ಎಂದರು.
ಗಾಜಗಾರಪೇಟೆ ಸರ್ಕಾರಿ ಶಾಲೆಯಲ್ಲಿ 2015ರಿಂದ ಆರಂಭಗೊಂಡಿರುವ ನೋಟ್ಬುಕ್ ವಿತರಣೆ ಈಗಲೂ ಮುಂದುವರಿಸಿಕೊಂಡು ಬರಲಾಗುತ್ತಿಿದೆ. ಇಂತಹ ಸೇವೆ ಉಳ್ಳವರು ಮಾಡಬೇಕು ಎಂದು ಮನವಿ ಮಾಡಿದರು.
ಈ ಸುದ್ದಿಗೋಷ್ಠಿಿಯಲ್ಲಿ ಜಿಲ್ಲಾ ಪ್ರಧಾನ ನರಸಿಂಹಲು ಇದ್ದರು.

