ಸುದ್ದಿಮೂಲ ವಾರ್ತೆ ಗಂಗಾವತಿ, ಜ.25:
ಐತಿಹಾಸಿಕ ಹಿನ್ನೆೆಲೆ ಹೊಂದಿರುವ ವಿಜಯನಗರ ಸಾಮ್ರಾಾಜ್ಯ ಹಾಗೂ ಆನೆಗುಂದಿ ಸಂಸ್ಥಾಾನದ ಎರಡನೆಯ ಪ್ರೌೌಢದೇವರಾಯ ಕಾಲದಲ್ಲಿ ನಿರ್ಮಾಣಗೊಂಡಿರುವ ನಗರದ ಹಿರೇಜಂತಕಲ್ ಶ್ರೀಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ಸ್ವಾಾಮಿ ದೇವರ ಮಹಾ ರಥೋತ್ಸವು ಭಾನುವಾರ ಸಂಜೆ ಅಪಾರ ಜನಸ್ತೋೋಮ ಮಧ್ಯೆೆ ಸಡಗರ, ಸಂಭ್ರಮಗಳಿಂದ ನೆರವೇರಿತು.
ಸರ್ವಾಲಂಕೃತಗೊಂಡ ರಥವು ದೇವಾಲಯದಿಂದ ಪಾದಗಟ್ಟೆೆವರೆಗೆ ಸರಾಗವಾಗಿ ತೆರಳಿ ಮೂಲ ಸ್ಥಾಾನಕ್ಕೆೆ ಮರಳಿತು. ನೆರೆದ ಅಲ್ಪಸಂಖ್ಯಾಾತ ಭಕ್ತಾಾದಿಗಳು ಉತ್ತತ್ತಿಿ, ಬಾಳೆ ಹಣ್ಣು ಶ್ರದ್ಧಾಾ-ಭಕ್ತಿಿಯಿಂದ ರಥಕ್ಕೆೆ ಸಮರ್ಪಿಸಿ ರಥೋತ್ಸವದ ಸಂಭ್ರಮ ಕಣ್ತುಂಬಿಕೊಂಡರು.
ಶಾಸಕ ಗಾಲಿ ಜನಾರ್ಧನ ರೆಡ್ಡಿಿ, ಮಾಜಿ ಶಾಸಕ ಪರಣ್ಣ ಮುನವಳ್ಳಿಿ, ಜಿಲ್ಲಾಾ ಬಿಜೆಪಿ ಮಾಜಿ ಅಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ನಗರಸಭೆ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿಿ, ಮಾಜಿ ಸದಸ್ಯ ಈ.ಪರಮೇಶ್ವರಪ್ಪ, ಮುಖಂಡರಾದ ಜೋಗದ ನಾರಾಯಣಪ್ಪ ನಾಯಕ, ಜೋಗದ ಹನುಮಂತಪ್ಪ ನಾಯಕ, ವೀರೇಶ ಬಲ್ಕುಂದಿ, ಸೋಮಪ್ಪ ಸೇರಿದಂತೆ ವಿವಿಧ ಸಮಾಜದ ಅನೇಕ ಮುಖಂಡರು, ಗಂಗಾವತಿ ಮತ್ತು ಹಿರೇಜಂತಕಲ್ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಾಮಗಳ ಅಸಂಖ್ಯಾಾತ ಭಕ್ತರು ಭಾಗವಹಿಸಿದ್ದರು.
ಬೆಳಿಗ್ಗೆೆ ಶ್ರೀವಿರುಪಾಕ್ಷೇಶ್ವರ ಸೇರಿದಂತೆ ಪರಿವಾರ ದೇವರುಗಳಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ಅಷ್ಟಾಾವಧಾನ ಸೇವೆ, ಹೂವಿನ ಅಲಂಕಾರ ಮತ್ತಿಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ನಂತರ ಮಡಿ ತೇರು ಎಳೆಯಲಾಯಿತು. ಜಾತ್ರೆೆಗೆ ಆಗಮಿಸಿದ ಭಕ್ತಾಾದಿಗಳಿಗೆ ಮಾಜಿ ಸಂಸದ ಹೆಚ್.ಜಿ.ರಾಮುಲು, ಜಿ.ಆರ್.ಎಸ್. ಸ್ವೀಟ್ ಹಾಗೂ ಗಾಣಿಗ ಸಮಾಜ ಬಾಂಧವರಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್ ಪುತ್ರ ಹೆಚ್.ಆರ್.ಭರತ್ ಹಾಗೂ ಕುಟುಂಬ ವರ್ಗದವರು ಅನ್ನಸಂತರ್ಪಣೆಗೆ ಚಾಲನೆ ನೀಡಿದರು.
ಇಂದಿನಿಂದ ಮೂರು ದಿನಗಳ ಕಾಲ ಸಂಜೆ 7 ಗಂಟೆಯಿಂದ ಪ್ರತಿ ದಿನ ಕಾಮಿಡಿ ಕಿಲಾಡಿಗಳು, ಕರ್ನಾಟಕ ಗಾನಕೋಗಿಲೆ ಮಜಾ ಭಾರತ ತಂಡ ಸೇರಿದಂತೆ ನಾಡಿನ ಹಾಗೂ ಸ್ಥಳೀಯ ಕಲಾವಿದರಿಂದ ಹಲವು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಅಪಾರ ಜನಸ್ತೋಮ ಮಧ್ಯೆ ಹಿರೇಜಂತಕಲ್ ಪ್ರಸನ್ನ ಶ್ರೀ ಪಂಪಾ ವಿರೂಪಾಕ್ಷೇಶ್ವರ ಮಹಾ ರಥೋತ್ಸವ

