ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.25:
ಯುವಕರು ರೀಲ್ಸ್ ಮಾಡುವಾಗಜಿ. ಸ್ಕ್ವೇರ್ನಲ್ಲಿನ ಮಾಡಲ್ ಹೌಸ್ ಗೆ ಬೆಂಕಿ ಬಿದ್ದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಾಧಿಕಾರಿ ಡಾ.ಸುಮನ್ ಡಿ. ಪೆನ್ನೇಕರ್ ಅವರು ಹೇಳಿರುವುದು ಸರಿಯಲ್ಲಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿಿ ಅವರು ತಿಳಿಸಿದ್ದಾರೆ.
ಸುದ್ದಿಗಾರರ ಜೊತೆಯಲ್ಲಿ ಭಾನುವಾರ ಮಾತನಾಡಿ, ಇದು ಆಕಸ್ಮಿಿಕ ಅಗ್ನಿಿ ದುರಂತವಲ್ಲ. ಪೆಟ್ರೋೋಲ್ ಬಳಸಿ ಬೆಂಕಿ ಹಚ್ಚಲಾಗಿದೆ. ಯುವಕರು ರೀಲ್ಸ್ ಮಾಡುವಾಗ ಬೆಂಕಿ ಬಿದ್ದಿದೆ ಎನ್ನುವುದು ಹಾಸ್ಯಾಾಸ್ಪದ ಎಂದರು.
ಹೆಚ್ಚುವರಿ ಎಸ್ಪಿಿ ಕೆ.ಪಿ.ರವಿಕುಮಾರ್ ಪೊಲೀಸ್ ವೇಶದಲ್ಲಿರುವ ಕ್ರಿಿಮಿನಲ್. ಇಂಥಹ ಅಧಿಕಾರಿಗಳ ಮಾತು ಕೇಳಿ ಡಾ.ಸುಮನ್ ಡಿ.ಪನ್ವೇಕರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬೆಂಕಿ ಹಚ್ಚಿಿದವರು ಓಡಿ ಹೋಗಿದ್ದಾರೆ. ರೀಲ್ಸ್ ಮಾಡುವುದು ಸುಳ್ಳು. ನಾವು ನೀಡಿರುವ ವೀಡಿಯೋಗಳನ್ನು ಆಧರಿಸಿ ಎಂಟು ಜನರನ್ನು ಬಂಧಿಸಲಾಗಿದೆ ಎಂದರು.
ಮಾಜಿ ಸಂಸದರಾದ ಸಣ್ಣ ಪಕ್ಕೀರಪ್ಪ, ಪಕ್ಷದ ನಗರ ಅಧ್ಯಕ್ಷ ಜಿ.ವೆಂಕಟರಮಣ, ಮಾಜಿ ಶಾಸಕರಾದ ಜಿ.ಸೋಮಶೇಖರ ರೆಡ್ಡಿಿ, ಟಿ.ಎಚ್.ಸುರೇಶ ಬಾಬು, ಡಾ.ಎಸ್.ಜೆ.ವಿ.ಮಹಿಪಾಲ್, ಕೆ.ಎಸ್.ದಿವಾಕರ್ ಇನ್ನಿಿತರರು ಈ ಸಂದರ್ಭದಲ್ಲಿ ಉಪಸ್ಥಿಿತರಿದ್ದರು.

