ಸುದ್ದಿಮೂಲ ವಾರ್ತೆ ರಾಯಚೂರು, ಜ.25:
ಶಕ್ತಿಿನಗರದ ಆರ್ಟಿಪಿಎಸ್ನಲ್ಲಿ ಅಣು ವಿದ್ಯುತ್ ಘಟಕ ಸ್ಥಾಾಪನೆ ಸ್ಥಳ ಪರಿಶೀಲನೆ ಬಗ್ಗೆೆ ಜ.26ರಂದು ಸಂಜೆ 4ಕ್ಕೆೆ ರಾಯಚೂರಿನ ಐಎಂಎ ಸಭಾಂಗಣದಲ್ಲಿ ಸಭೆ ಹಮ್ಮಿಿಕೊಳ್ಳಲಾಗಿದೆ ಎಂದು ನಾಗರಿಕ ವೇದಿಕೆಯ ಸಂಚಾಲಕ ಡಾ.ಬಸವರಾಜ ಕಳಸ ತಿಳಿಸಿದ್ದಾಾರೆ.
ನ್ಯೂಕ್ಲಿಿಯರ ಪವರ್ ಕಾರ್ಪೊರೇಷನ್ ಆ್ ಇಂಡಿಯಾ ಲಿಮಿಟೆಡ್ ನವ ದೆಹಲಿವತಿಯಿಂದ ಮೂರು ಜನ ಅಧಿಕಾರಿ ಆಗಮಿಸಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಆವರಣದಲ್ಲಿ ಅಣು ವಿದ್ಯುತ್ ಸ್ಥಾಾವರ ಸ್ಥಾಾಪಿಸುವ ಹುನ್ನಾಾರ ನಡೆದಿದೆ.
ಆದ್ದರಿಂದ ಅಣು ವಿದ್ಯುತ್ ಸ್ಥಾಾವರ ವಿರೋಧಿಸಲು, ಪ್ರತಿಭಟಿಸಲು ಮುಂದಿನ ಸಂಘಟನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಲು ಸರ್ವ ಸಂಘ ಸಂಸ್ಥೆೆಗಳ, ಪರಿಸರ ಪ್ರೇಮಿಗಳ, ಸಾರ್ವಜನಿಕರ ಸಭೆ ಕರೆಯಲಾಗಿದೆ. ಈ ಮಹತ್ವದ ಸಭೆಗೆ ಹೆಚ್ಚಿಿನ ಸಂಖ್ಯೆೆಯಲ್ಲಿ ಆಗಮಿಸಿ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಕೋರಿದ್ದಾಾರೆ.

