ಸುದ್ದಿಮೂಲ ವಾರ್ತೆ ರಾಯಚೂರು, ಜ.25:
ಸಮಾಜದವರು ಮಕ್ಕಳ ಶಿಕ್ಷಣಕ್ಕೆೆ ಒತ್ತು ನೀಡಿ ಮುಖ್ಯ ವಾಹಿನಿಗೆ ಬಂದು ಪ್ರಮುಖ ಹುದ್ದೆೆಗಳ ಅಲಂಕರಿಸಬೇಕು ಎಂದು ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.
ಇಂದು ನಗರದ ಆರ್ಯ ಸಮಾಜದ ಭವನದಲ್ಲಿ ಸೂರ್ಯವಂಶ ಕಾಟಿಕ ಸಮಾಜದಿಂದ ಹಮ್ಮಿಿಕೊಂಡಿದ್ದ ಸೂರ್ಯನಾರಾಯಣ ಜಯಂತಿ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಸಣ್ಣ ಸಮುದಾಯವಾದರೂ ಸಂಘಟಿತವಾಗಿ ಕೆಲಸ ಮಾಡುತ್ತಿಿರುವುದು ಶ್ಲಾಾಘನಿಯ. ಸಮಾಜದ ಅಗತ್ಯ ಸೌಲಭ್ಯಗಳಿಗೆ ತಮ್ಮ ಸಹಕಾರ ಇರಲಿದೆ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ನಗರದ ಕಾಟಿಕ್ ಭವನದಿಂದ ಪ್ರಮುಖ ರಸ್ತೆೆಘಿ, ವೃತ್ತಗಳಲ್ಲಿ ಸೂರ್ಯನಾರಾಯಣ ದೇವರ ಭಾವಚಿತ್ರದ ಭವ್ಯ ಮೆರವಣಿಗೆ ಸಾಗಿತು.
ಈ ಸಂದರ್ಭದಲ್ಲಿ ಸಮಾಜ ಸಂಘದ ಅಧ್ಯಕ್ಷ ಶಿವಶಂಕರ ನಿಜಾಂಕಾರಿ, ಕಾರ್ಯದರ್ಶಿ ನಾಗೇಶ್ ಜಗತ್ಕಾಾರಿ,ಸತ್ಯನಾರಾಯಣ ಏಗನೂರು, ಸತ್ಯನಾರಾಯಣ ಕಲ್ಯಾಾಣ್ಕಾರಿ. ವಿಜಯೇಂದ್ರ ಕಲ್ಯಾಾಣಕಾರಿ ಕಾರಿ,ಕಿಶಾನ್ರಾವ್ ಖಾಡಿಕೇ, ಮುರಳಿ, ಯುವ ಅಧ್ಯಕ್ಷರಾದ ವಿಶಾಲ್ ಕಲ್ಯಾಾಣಕರ್, ನಾಗೇಂದ್ರ, ರವೀಂದ್ರ ಜಲ್ದಾಾರ್ ಮತ್ತಿಿತರರು ಉಪಸ್ಥಿಿತರಿದ್ದರು.
ಸೂರ್ಯನಾರಾಯಣ ಜಯಂತಿ ಆಚರಣೆ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು ಶಾಸಕ ಡಾ.ಶಿವರಾಜ ಪಾಟೀಲ ಸಲಹೆ

