ಸುದ್ದಿಮೂಲ ವಾರ್ತೆ ಮಸ್ಕಿ, ಜ.26:
ಪಟ್ಟಣದ ಸರ್ಕಾರಿ ಬಾಲಕಿಯರ ಕೇಂದ್ರ ಶಾಲಾ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ 77ನೇ ಗಣರಾಜ್ಯೋೋತ್ಸವ ಕಾರ್ಯಕ್ರಮ ಹಮ್ಮಿಿಕೊಳ್ಳಲಾಯಿತು.
ಇದೇ ವೇಳೆ ತಹಶೀಲ್ದಾಾರ್ ಮಂಜುನಾಥ್ ಭೋಗಾವತಿ ಅವರು ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿ,ಸಂವಿಧಾನ ಶಿಲ್ಪಿಿ ಬಾಬಾ ಸಾಹೇಬ್ ಅಂಬೇಡ್ಕರ್ ರವರೇ ಹೇಳಿದಂತೆ ನ್ಯಾಾಯವೆಂದರೆ, ಸ್ವಾಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದತೆ, ಅವರ ಈ ನ್ಯಾಾಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಧ್ಯೇಯ ನಮ್ಮದು. ಭಾರತವನ್ನು ಬಲಾಢ್ಯ ಗಣರಾಜ್ಯವನ್ನಾಾಗಿ ರೂಪಿಸುವಲ್ಲಿ ನಮ್ಮ ಅನೇಕ ನಾಯಕರನ್ನು, ಯೋಧರು ಹಾಗೂ ದೇಶಾಭಿಮಾನಿಗಳನ್ನು ನೆನೆಯುವುದು ಮತ್ತು ಅವರು ಆಶಿಸಿದಂತೆ ರಾಷ್ಟ್ರವನ್ನು ಅಭಿವೃದ್ಧಿಿ ಪಥದಲ್ಲಿ ಮುನ್ನಡೆಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಆರ್ ಬಸನಗೌಡ ತುರುವಿಹಾಳ, ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ಗ್ಯಾಾರೆಂಟಿ ಯೋಜನೆಯ ಅನುಷ್ಠಾಾನದ ತಾಲೂಕ ಅಧ್ಯಕ್ಷ ಮಹಿಬೂಬ್ ಸಾಬ್ ಮುದ್ದಾಪುರ, ತಾಪಂ ಇಓ ಅಮರೇಶ ಯಾದವ್, ಪುರಸಭೆ ಮುಖ್ಯ ಅಧಿಕಾರಿ ನರಸರೆಡ್ಡಿಿ,ಸರ್ಕಾರಿ ನೌಕರರ ಸಂಘದ ಪಂಪಾಪತಿ ಹೂಗಾರ, ಸಿಪಿಐ ರಾಮಣ್ಣ ಜಿಲಿಗೇರಿ, ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಅನೇಕ ಮುಖಂಡರು, ಶಿಕ್ಷಕರು ಸೇರಿದಂತೆ ವಿದ್ಯಾಾರ್ಥಿಗಳು ಇದ್ದರು.
ಮಸ್ಕಿ ಪಟ್ಟಣದಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

