ಸುದ್ದಿಮೂಲ ವಾರ್ತೆ ಕಲಬುರಗಿ, ಜ.26:
ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದಲ್ಲಿ 77ನೇ ಗಣರಾಜ್ಯೋೋತ್ಸವ ದಿನಾಚರಣೆಯ ಅಂಗವಾಗಿ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟಸಿಂಗ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಪ್ರಜಾಪ್ರಭುತ್ವ ಗಟ್ಟಿಿಗೊಳಿಸಲು ನಮ್ಮ ಸಂವಿಧಾನ ಮುಖ್ಯವಾಗಿದ್ದು, ಇದರಿಂದ ಸರ್ವರಿಗೂ ಅಧಿಕಾರ ದೊರೆತಿದೆ. ದೇಶದ ಏಕತೆ, ಸಮಗ್ರತೆ, ಅಖಂಡತೆ ಕಾಪಾಡಲು ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನ ಪೂರಕವಾಗಿದೆ ಎಂದರು. ಈ ವೇಳೆ ಪೊಲೀಸರಿಂದ ಧ್ವಜ ವಂದನೆಗಳು ಸ್ವೀಕರಿಸಲಾಯಿತು. ರಾಜ್ಯ ಮಾಹಿತಿ ಆಯೋಗ ಬೆಂಗಳೂರು ಪೀಠದ ಆಯುಕ್ತ ರಾಜಶೇಖರ್ ಎಸ್. ಹಾಗೂ ಆಯೋಗದ ಸಿಬ್ಬಂದಿಗಳು ಇದ್ದರು.
ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಸಂವಿಧಾನ ಮುಖ್ಯ : ಬಿ.ವೆಂಕಟಸಿಂಗ್

